Advertisement

ಕಾಸರಗೋಡು: 38 ಮಂದಿಗೆ ಕೋವಿಡ್ 19 ಸೋಂಕು

02:21 AM Jul 28, 2020 | Hari Prasad |

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 38 ಮಂದಿಗೆ ಕೋವಿಡ್ 19 ಸೋಂಕು ದೃಢವಾಗಿದೆ.

Advertisement

26 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಬಾಧಿತರಲ್ಲಿ 7 ಮಂದಿ ಇತರ ರಾಜ್ಯಗಳಿಂದ ಮತ್ತು ಐವರು ವಿದೇಶದಿಂದ ಬಂದವರು.

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ 53 ಮಂದಿ ಗುಣಮುಖರಾಗಿದ್ದಾರೆ.

ಜು. 26ರಂದು ಆಸ್ಪತ್ರೆಯಲ್ಲಿ ಸಾವಿಗೀಡಾದ 62 ವರ್ಷದ ವ್ಯಕ್ತಿಯ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಆಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಆರಕ್ಕೇರಿತು.

ಕೇರಳದಲ್ಲಿ 702 ಪ್ರಕರಣ
ಕೇರಳದಲ್ಲಿ ಸೋಮವಾರ 702 ಮಂದಿಗೆ ಸೋಂಕು ದೃಢವಾಗಿದೆ. 745 ಮಂದಿ ಗುಣಮುಖರಾಗಿದ್ದಾರೆ.

Advertisement

ಕೊಡಗು: 6 ಪಾಸಿಟಿವ್‌
ಕೊಡಗು ಜಿಲ್ಲೆಯಲ್ಲಿ ಸೋಮವಾರ 6 ಪ್ರಕರಣಗಳು ದೃಢಪಟ್ಟಿವೆ. ಸೋಂಕು ದೃಢಪಟ್ಟಿದ್ದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸೋಮವಾರಪೇಟೆ ಅಬ್ಬೂರುಕಟ್ಟೆಯ ಯುವಕ, ವೀರಾಜಪೇಟೆ ಮಹಿಳೆ, ಶನಿವಾರಸಂತೆ ಕಾವೇರಿ ಕಾಲೇಜು ರಸ್ತೆಯ 12 ವರ್ಷದ ಬಾಲಕಿ, ಕುಶಾಲನಗರ ಹುಲು ಸೆಯ 75ರ ವೃದ್ಧೆಗೆ ಸೋಂಕು ತಗಲಿದೆ. ಸೋಮವಾರ ಪೇಟೆಯ ಬ್ಯಾಡಗೊಟ್ಟ ಮಾದಲಾಪುರ ಪೋಸ್ಟ್‌ನ ಮಹಿಳೆ, ಬೀಟಿಕಟ್ಟೆ ಗೌಡಳ್ಳಿ ಮಹಿಳೆಯನ್ನು ಬಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next