Advertisement

ಉಡುಪಿ ಜಿಲ್ಲೆಯಲ್ಲಿ 38 ಕಾಲೇಜು; ಸೀಟು ಕೊರತೆ ಇಲ್ಲ 

07:26 AM Jul 23, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ 12 ಸರಕಾರಿ, 13 ಅನುದಾನಿತ, 13 ಅನುದಾನರಹಿತ ಸೇರಿದಂತೆ ಒಟ್ಟು 38 ಕಾಲೇಜುಗಳಿವೆ. ಕಳೆದ ವರ್ಷ ಸರಕಾರಿ ಕಾಲೇಜುಗಳಲ್ಲಿ 9,631, ಅನುದಾನಿತ ಕಾಲೇಜು ಗಳಲ್ಲಿ 12,400 ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ 2,982 ಸೇರಿದಂತೆ ಒಟ್ಟು 22,013 ವಿದ್ಯಾರ್ಥಿ ಗಳಿದ್ದರು. ಇವು ಮೂರು ವರ್ಷಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ. ಇದರ ಮೂರನೆಯ ಒಂದಂಶವಾದ ಸುಮಾರು 8,000 ವಿದ್ಯಾರ್ಥಿ ಗಳು ಕಳೆದ ವರ್ಷ ಕಾಲೇಜು ಗಳ ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡಿ ದ್ದರು.

Advertisement

ಜಿಲ್ಲೆಯಲ್ಲಿ ಈ ವರ್ಷ 15,213 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ಕುಳಿತಿದ್ದರು. ಅವರಲ್ಲಿ 1,697 ಮಂದಿ ಕಲಾ ವಿಭಾಗಕ್ಕೆ, 8,043 ಮಂದಿ ವಾಣಿಜ್ಯ ವಿಭಾಗಕ್ಕೆ, 5,473 ಮಂದಿ ವಿಜ್ಞಾನ ವಿಭಾಗಕ್ಕೆ ಸೇರಿದವರು. ಅವರಲ್ಲಿ ವಿಜ್ಞಾನ ವಿಭಾಗದ ಶೇ. 30 ಮಂದಿ ಎಂಜಿನಿಯರಿಂಗ್‌, ವೈದ್ಯಕೀಯ, ಪಾಲಿಟೆಕ್ನಿಕ್‌, ನರ್ಸಿಂಗ್‌, ದಂತ ವಿಜ್ಞಾನ, ಅರೆ ವೈದ್ಯಕೀಯ ಇತ್ಯಾದಿ ಕೋರ್ಸುಗಳಿಗೆ ಸೇರ್ಪಡೆಗೊಳ್ಳು ತ್ತಾರೆ. ಕಳೆದ ವರ್ಷದ ವಿದ್ಯಾ ರ್ಥಿಗಳಲ್ಲಿ ಉತ್ತರ

ಕರ್ನಾಟಕಕ್ಕೆ ಸೇರಿದವರಿ ದ್ದಾರೆ. ಅವರ ಹೆತ್ತವರು ಕೆಲಸಕ್ಕಾಗಿ ಬಂದು ನೆಲೆ ನಿಂತಿರಬಹುದು ವಿದ್ಯಾರ್ಥಿಗಳು ಹಾಸ್ಟೆಲ್‌ ಇತ್ಯಾದಿ ಗಳಲ್ಲಿ ಉಳಿದುಕೊಂಡು ಓದುತ್ತಿ ದ್ದವರೂ ಇರಬಹುದು. ಅದೇ ರೀತಿ ಉಡುಪಿಯವರು ಬೇರೆ ಡೆಗೆ ಓದಲು ಹೋಗುತ್ತಾರೆ.

ಉಡುಪಿ ಜಿಲ್ಲೆಯ ಕಾಲೇಜುಗಳಲ್ಲಿ ಒಟ್ಟು ಸೀಟುಗಳ ಸಂಖ್ಯೆ ಸುಮಾರು 10,000. ಕಲೆ ಮತ್ತು ವಿಜ್ಞಾನ ಕೋರ್ಸುಗಳು ಪ್ರತೀ ವರ್ಷ ಭರ್ತಿಯಾ ಗದು. ಇದಲ್ಲದೆ ಬಿಬಿಎ, ಬಿ ಎಸ್‌ಡಬ್ಲ್ಯು ಮತ್ತಿತರ ಕೋರ್ಸು ಗಳಿವೆ.  ಬಿಕಾಂ ಕೋರ್ಸ್‌ಗೆ ತುಸು ಬೇಡಿಕೆ ಇರಬಹುದು. 99ಕ್ಕಿಂತ ಹೆಚ್ಚಾದರೆ ಬ್ಯಾಚ್‌ಗಳು ಹೆಚ್ಚಾಗಲಿವೆ.

ಹೆಚ್ಚುವರಿ  ಸೇರ್ಪಡೆಗೆ ಅವಕಾಶ :

Advertisement

ದ್ವಿತೀಯ ಪಿಯುಸಿಯ ಎಲ್ಲ  ವಿದ್ಯಾರ್ಥಿಗಳು ಉತ್ತೀರ್ಣರಾದ ಕಾರಣ ಪದವಿ ಕಾಲೇಜುಗಳಿಗೆ ದಾಖಲಾತಿ ಏರಿಕೆಯಾಗಲಿದೆ. ಕಾಲೇಜುಗಳು ತಮ್ಮಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಂಡರೆ ಅಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ವಿದ್ಯಾರ್ಥಿಗಳ ಸೇರ್ಪಡೆಗೆ ಅನುಮತಿ ನೀಡಲಾಗುವುದು. -ಪ್ರೊ| ಪಿ.ಎಸ್‌. ಯಡಪಡಿತ್ತಾಯ,  ಕುಲಪತಿ, ಮಂಗಳೂರು ವಿ.ವಿ.

ಈ ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ಶೇ. 15ರಷ್ಟು ಫ‌ಲಿತಾಂಶ ಹೆಚ್ಚಾಗಿದೆ. ಆದರೂ  ಉಡುಪಿಯ ಮಟ್ಟಿಗೆ ಸೀಟು ಕೊರತೆ ಆಗದು. ಸೆಮಿಸ್ಟರ್‌ಗಳ ಬಾಕಿ ಪಾಠ, ಪರೀಕ್ಷೆಗಳನ್ನು ನಡೆಸಿ ಆ. 1ರಂದು ಕಾಲೇಜು ಆರಂಭಿ ಸುವಂತೆ ಸೂಚನೆ ಇದೆ. ಪಿಯುಸಿ ಫ‌ಲಿತಾಂಶ ಮೊದಲ ವರ್ಷದ ಪದವಿ ತರಗತಿಗಳಿಗೆ ಸೇರಿಸಲಾಗುತ್ತಿದೆ. – ಡಾ| ಗಣನಾಥ ಎಕ್ಕಾರು,  ಪ್ರಾಂಶುಪಾಲರು, ಜಿಲ್ಲಾ ಲೀಡ್‌ ಕಾಲೇಜು (ತೆಂಕನಿಡಿಯೂರು ಕಾಲೇಜು)

Advertisement

Udayavani is now on Telegram. Click here to join our channel and stay updated with the latest news.

Next