Advertisement

ತೈವಾನ್‌ ಸನಿಹ 38 ಚೀನಾ ಯುದ್ಧ ವಿಮಾನಗಳು!

08:41 PM Apr 28, 2023 | Team Udayavani |

ತೈಪೆ: ತೈವಾನ್‌ ಸಮೀಪ 38 ಯುದ್ಧ ವಿಮಾನಗಳು ಮತ್ತು ಆರು ಯುದ್ಧ ನೌಕೆಗಳನ್ನು ಚೀನಾ ಕಳುಹಿಸಿದೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಕಳೆದ ತಿಂಗಳು ತೈವಾನ್‌ ಗಡಿ ಬಳಿ ಚೀನಾ ಸೇನಾ ಸಮರಾಭ್ಯಾಸ ನಡೆಸಿದ ಬಳಿಕ ದೊಡ್ಡ ಶಕ್ತಿ ಪ್ರದರ್ಶನ ಇದಾಗಿದೆ.

Advertisement

ತೈವಾನ್‌ ಮತ್ತು ಚೀನಾ ಗಡಿಗಳನ್ನು ಪ್ರತ್ಯೇಕಿಸುವ ತೈವಾನ್‌ ಜಲಸಂಧಿಯ ಸಮೀಪ ಚೀನಾ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ಐದು ಎಸ್‌ಯು-30, ಎರಡು ಜೆ-16 ಯುದ್ಧ ವಿಮಾನಗಳು, ಒಂದು ಡ್ರೋನ್‌, ಬಾಂಬ್‌ಗಳು-ಕ್ಷಿಪಣಿಗಳನ್ನು ಹೊತ್ತೂಯ್ಯುವ ಲಘು ಯುದ್ಧವಿಮಾನ ಟಿಬಿ-001 ಸ್ಕಾರ್ಪಿಯನ್‌ ದ್ವೀಪವನ್ನು ಸುತ್ತುವರೆದಿವೆ. ಜತೆಗೆ ಯುದ್ಧ ನೌಕೆಗಳು ಕರಾವಳಿ ಸಮೀಪ ಬೀಡುಬಿಟ್ಟಿವೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ತಿಳಿಸಿದೆ.

ಇನ್ನೊಂದೆಡೆ, ತೈವಾನ್‌ ಜಲಸಂಧಿಯ ಸಮೀಪ ಅಮೆರಿಕ ನೌಕಾಸೇನೆಗೆ ಸೇರಿದ ಪಿ-8ಎ ಪೋಸಿಡಾನ್‌ ಜಲಾಂತರ್ಗಾಮಿ ಗಸ್ತು ವಿಮಾನ ಹಾರಾಟ ನಡೆಸಿದೆ ಎಂದು ಚೀನಾ ಆರೋಪಿಸಿದೆ. ಅಲ್ಲದೇ ಈ ಬಗ್ಗೆ ಚೀನಾ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಪ್ರತಿಭಟನೆಯನ್ನು ದಾಖಲಿಸಿದೆ.

ಏ.5ರಂದು ತೈವಾನ್‌ ಅಧ್ಯಕ್ಷ ತ್ಸೆ ಇಂಗ್‌-ವೆನ್‌ ಅವರ ಅಮೆರಿಕ ಪ್ರವಾಸ, ಕ್ಯಾಲಿಫೋರ್ನಿಯದಲ್ಲಿ ಅಮೆರಿಕ ಸದನದ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರೊಂದಿಗೆ ಮಾತುಕತೆ ಬಳಿಕ, ತೈವಾನ್‌ ಸಮೀಪ ಚೀನಾ ನಿರಂತರವಾಗಿ ಸಮಾರಾಭ್ಯಾಸ ನಡೆಸುತ್ತಿದೆ. ತೈವಾನ್‌ ಮತ್ತು ಇತರೆ ದೇಶಗಳೊಂದಿಗಿನ ಸರ್ಕಾರಿ ಮಟ್ಟದ ಮಾತುಕತೆಯನ್ನು ಚೀನಾ ವಿರೋಧಿಸುತ್ತಾ ಬಂದಿದೆ. 1949ರ ನಾಗರಿಕ ಯುದ್ಧದ ನಂತರ ತೈವಾನ್‌ ಮತ್ತು ಚೀನಾ ಪ್ರತ್ಯೇಕವಾದವು. ಆದರೆ ಈಗಲೂ ಕೂಡ ತೈವಾನ್‌ ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತಿದೆ. ಅಲ್ಲದೇ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next