Advertisement

Karnataka: ಶಾಸಕರ ಕಿಟ್‌ಗೆ 38.50 ಲ.ರೂ.

12:09 AM Nov 12, 2023 | Team Udayavani |

ಬೆಂಗಳೂರು: ಶಾಸಕರಿಗೆ ಗಂಡಭೇರುಂಡ ಲಾಂಛನವುಳ್ಳ ಮೆಟಲ್‌ ಬ್ಯಾಡ್ಜ್ ಹಾಗೂ ಡೈರಿ, ಪೆನ್‌, ಥರ್ಮಲ್‌ ಸ್ಟೀಲ್‌ ವಾಟರ್‌ ಬಾಟಲ್‌ ಮುಂತಾದ ವಸ್ತುಗಳನ್ನೊಳಗೊಂಡ ಕಿಟ್‌ ವಿತರಣೆಗೆ ಒಟ್ಟು 38.50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.

Advertisement

ನೂತನವಾಗಿ ಆಯ್ಕೆಯಾಗುವ ಶಾಸಕರಿಗೆ ಇವುಗಳನ್ನು ಪ್ರತಿ ಬಾರಿ ಕೊಡುವಂತೆಯೇ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ 224 ಶಾಸಕರಿಗೂ ಗಂಡಭೇರುಂಡ ಲಾಂಛನವುಳ್ಳ ಮೆಟಲ್‌ ಬ್ಯಾಡ್ಜ್ ಗಳನ್ನು ಕೊಡಲು ಈ ಮೊತ್ತವನ್ನು ಮೀಸಲಿಡಲಾಗಿದೆ.

ಪ್ರತಿ ಬ್ಯಾಡ್ಜ್ಗೆ 2,400 ರೂ. ಹಾಗೂ ಜಿಎಸ್‌ಟಿ ಸೇರಿ 2,832 ರೂ. ಆಗಲಿದ್ದು, ಒಬ್ಬರಿಗೆ ಮೂರು ಬ್ಯಾಡ್ಜ್ ಗಳನ್ನು ಕೊಡಲಾಗುವುದು. ಇದಕ್ಕಾಗಿ 19,03,104 ರೂ. ವೆಚ್ಚದಲ್ಲಿ ಐ ಡ್ರೀಮ್ಸ್‌ ಟ್ರೇಡ್‌ ಆ್ಯಂಡ್‌ ಇವೆಂಟ್‌ ಎಂಬ ಸಂಸ್ಥೆ ಮೂಲಕ ಬ್ಯಾಡ್ಜ್ಗಳನ್ನು ಖರೀದಿಸಲಾಗಿದೆ.

ಸಣ್ಣ ನೀರಾವರಿ ಸಚಿವರ ಕೊಠಡಿ ದುರಸ್ತಿ
ವಿಕಾಸಸೌಧದ 4ನೇ ಮಹಡಿಯಲ್ಲಿ ರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್‌.ಎಸ್‌.ಬೋಸ್‌ರಾಜು ಅವರ ಕೊಠಡಿಗೆ ಪೀಠೊಪಕರಣ ಸರಬರಾಜು ಸಹಿತ ಸಣ್ಣಪುಟ್ಟ ಕಾರ್ಯಗಳಿಗೆ 41 ಲಕ್ಷ ರೂ. ಲೋಕೋಪಯೋಗಿ ಇಲಾಖೆಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ಕೊಡಲಾಗಿದೆ.

ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ 8.65 ಕೋ. ರೂ. ಖರ್ಚು
ಕರ್ನಾಟಕ-ಸಂಭ್ರಮ 50 ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕರ್ನಾಟಕ ಅಭಿಯಾನದ ಅಂಗವಾಗಿ ಹಂಪಿಯಲ್ಲಿ ನಡೆದ ಕನ್ನಡ ಜ್ಯೋತಿ ರಥಯಾತ್ರೆ, ಅದರ ನಿರ್ಮಾಣ, ಬಾಡಿಗೆ ಅಲಂಕಾರ ನಿರ್ವಹಣೆ ಸೇವೆಯನ್ನು ಕೆಎಸ್‌ಎಂಸಿ ಮತ್ತು ಎ ಸಂಸ್ಥೆಯಿಂದ ಪಡೆಯಲು 2.38 ಕೋಟಿ ರೂ.ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿದ್ದು, ಅಂತೆಯೇ ಹಂಪಿಯಲ್ಲಿ ರಥಯಾತ್ರೆಗೆ ಚಾಲನಾ ಕಾರ್ಯಕ್ರಮಕ್ಕೆ ಅಗತ್ಯ ಸರಕು, ಸೇವೆ ಒದಗಿಸಲು 2.45 ಕೋಟಿ ರೂ. ಮತ್ತು ಗದಗದಲ್ಲಿ ಕರ್ನಾಟಕ ಸಂಭ್ರಮ-50ರ ಪ್ರಥಮ ಕಾರ್ಯಕ್ರಮ ಆಯೋಜಿಸಲು ಅಗತ್ಯ ಸರಕು ಸೇವೆಗೆ 3.82 ಕೋಟಿ ರೂ. ಒದಗಿಸಲಾಗಿದೆ. ಇದಲ್ಲದೆ, ರಾಜ್ಯವ್ಯಾಪಿ ಜ್ಯೋತಿಯಾತ್ರೆ ನಡೆಸಿ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಖರ್ಚು-ವೆಚ್ಚವನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಲಾಗಿದೆ.

Advertisement

ಗಿಫ್ಟ್ ಬಾಕ್ಸ್‌ಗೆ 19.47 ಲಕ್ಷ ರೂ.
ಅದೇ ರೀತಿ ನೂತನ ಶಾಸಕರೂ ಸಹಿತ ಗಣ್ಯರು, ಅಧಿಕಾರಿಗಳು, ಮಾಧ್ಯಮದವರಿಗೆ ಡೈರಿ, ಪೆನ್‌, ಥರ್ಮಲ್‌ ಸ್ಟೀಲ್‌ ವಾಟರ್‌ ಬಾಟಲ್‌, ವಿಸಿಟಿಂಗ್‌ ಕಾರ್ಡ್‌ ಹೋಲ್ಡರ್‌, ಕೀ ಚೈನ್‌ ಇತ್ಯಾದಿಗಳನ್ನು ಒಳಗೊಂಡ ಗಿಫ್ಟ್ ಬಾಕ್ಸ್‌ಗಳನ್ನು ನೀಡಲು ನಿರ್ಧರಿಸಿದ್ದು, ಉಳ್ಳಾಲದ ಬಿ.ಕೆ. ಸಪ್ಲಯರ್ ಸಂಸ್ಥೆ ಮೂಲಕ ಪ್ರತಿ ಗಿಫ್ಟ್ ಬಾಕ್ಸ್‌ಗೆ ಜಿಎಸ್‌ಟಿ 1,947 ರೂ. ಸಹಿತ 3,597 ರೂ. ಕೊಟ್ಟು ಖರೀದಿಸಲಾಗಿದೆ. ಒಟ್ಟು 1 ಸಾವಿರ ಗಿಫ್ಟ್ ಬಾಕ್ಸ್‌ಗಳಿಗೆ 19.47 ಲಕ್ಷ ರೂ. ನೀಡಲು ವಿಧಾನಸಭೆ ಸಚಿವಾಲಯಕ್ಕೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next