Advertisement

National Games: ಗೋವಾ ಶಾಲೆಗಳಿಗೆ ದೀಪಾವಳಿ ರಜೆಯಲ್ಲಿ ಬದಲಾವಣೆ… ಇಲ್ಲಿದೆ ವಿವರ

02:59 PM Oct 06, 2023 | Team Udayavani |

ಪಣಜಿ:  37 ನೇ ರಾಷ್ಟ್ರೀಯ ಕ್ರೀಡಾ ಚಾಂಪಿಯನ್‍ಶಿಪ್ ಈ ತಿಂಗಳು ಗೋವಾದಲ್ಲಿ ನಡೆಯುತ್ತಿದೆ. ಗೋವಾ ಸರ್ಕಾರ ಈ ಸ್ಫರ್ಧೆ ಯಶಸ್ವಿಗೆ ಸಿದ್ಧತೆ ನಡೆಸಿದೆ. ಅದೇ ಸಿದ್ಧತೆಯ ಭಾಗವಾಗಿ ಈಗ ಗೋವಾದ ಶಾಲೆಗಳ ದೀಪಾವಳಿ ರಜೆಯನ್ನು ಬದಲಾಯಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ನಿರ್ದೇಶಕ ಶೈಲೇಶ್ ಜಿಂಗ್ಡೆ ಆದೇಶ ಹೊರಡಿಸಿದ್ದಾರೆ.

Advertisement

ಗೋವಾದ ಶಾಲೆಗಳಿಗೆ ಈ ಹಿಂದೆ ನವೆಂಬರ್ 7 ರಿಂದ ನವೆಂಬರ್ 23 ರವರೆಗೆ ದೀಪಾವಳಿ ರಜೆ ಘೋಷಿಸಲಾಗಿತ್ತು.  ನವೆಂಬರ್ 19ರಿಂದ ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆರಂಭವಾಗುತ್ತಿದೆ. ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಹೀಗಾಗಿ ಶಾಲೆಗಳ ದೀಪಾವಳಿ ರಜೆಯನ್ನು ಬದಲಾಯಿಸಲಾಗಿದೆ. ಈಗ ಈ ರಜಾದಿನವು 25 ಅಕ್ಟೋಬರ್ 2023 ರಿಂದ ಶನಿವಾರ 18 ನವೆಂಬರ್ 2023 ರವರೆಗೆ ಇರುತ್ತದೆ.

ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಸೋಮವಾರ, ನವೆಂಬರ್ 20, 2023 ರಿಂದ ದೀಪಾವಳಿ ರಜೆಯ ನಂತರ ಶಾಲೆಗಳು ಪುನರಾರಂಭಗೊಳ್ಳಲಿವೆ. ಎಲ್ಲಾ ಇಲಾಖಾ ಮುಖ್ಯಸ್ಥರು ದೀಪಾವಳಿ ರಜೆಯಲ್ಲಿ ಈ ಬದಲಾವಣೆಯನ್ನು ಗಮನಿಸಲು ವಿನಂತಿಸಲಾಗಿದೆ.

ಇದನ್ನೂ ಓದಿ: Chitradurga; 4860 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯ: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next