Advertisement

370ನೇ ವಿಧಿ ರದ್ದು: ಬಿಜೆಪಿ ಸಂಭ್ರಮ

02:31 PM Aug 06, 2019 | Suhan S |

ಚಿಕ್ಕಮಗಳೂರು: ಜಮ್ಮು- ಕಾಶ್ಮೀರಕ್ಕೆ ಸಂವಿಧಾನದ 370 ವಿಧಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ಕಾನೂನು ರದ್ದು ಮಾಡಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದದಲ್ಲಿ ಸಾರ್ವನಿಕರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Advertisement

ಆಜಾದ್‌ ಪಾರ್ಕ್‌ ವೃತ್ತದಲ್ಲಿ ನಡೆದ ಸಂಭ್ರಮಾಚಾರಣೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ, ಇಡೀ ದೇಶಕ್ಕೆ ಒಂದು ಕಾನೂನು ಇದೆ. ಆದರೆ, 370 (35ಎ)ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ಒಂದು ಕಾನೂನನ್ನು ಮಾಜಿ ಪ್ರಧಾನಿ ನೆಹರು ಅವರು ನೀಡಿದ್ದರು. ವಿಧಿ 370 (35ಎ)ರ ಮಸೂದೆಯನ್ನು ರದ್ದುಪಡಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್‌ ಶಾ ಅವರು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಇನ್ನು ಮುಂದೆ ದೇಶದ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಒಂದೇ ಕಾನೂನು ಜಾರಿಯಲ್ಲಿರುತ್ತದೆ. ಹಿಂದೆ ಶ್ಯಾಮ್‌ ಪ್ರಕಾಶ್‌ ಮುಖರ್ಜಿ ಅವರು ನಮ್ಮ ದೇಶದಲ್ಲಿ ಇಬ್ಬರು ಪ್ರಧಾನಿ ಎರಡು ಸಂವಿಧಾನ ಇರಲ್ಲ ಎಂದು ಹೇಳಿದ್ದರು. ವಿಧಿ 370 (35ಎ) ರದ್ದು ಮಾಡಲಾಗಿದೆ. ಈ ಕೀರ್ತಿ ಶ್ಯಾಮ್‌ ಪ್ರಕಾಶ್‌ ಮುಖರ್ಜಿ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.

ಮುಖಂಡ ಪ್ರೇಮ್‌ಕುಮಾರ್‌ ಮಾತನಾಡಿ, 1954ರಲ್ಲಿ ಕಾಶ್ಮೀರ ಬೇರೆ ಮಾಡುವ ವಿಚಾರವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವಿರೋಧ ಮಾಡಿದ್ದರು. ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ವಿಧಿ 370 (35ಎ) ಅನ್ನು ರದ್ದುಗೊಳಿಸಿದ್ದರಿಂದ ಶ್ಯಾಮ್‌ ಪ್ರಕಾಶ್‌ ಮುಖರ್ಜಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಶ್ರಮ ಸಾರ್ಥಕವಾಗಿದೆ ಎಂದರು. ಸಂಭ್ರಮಾಚಾರಣೆಯಲ್ಲಿ ಜಿಪಂ ಸದಸ್ಯ ಸೋಮಶೇಖರ್‌, ನಗರಸಭೆ ಮಾಜಿ ಸದಸ್ಯ ದೇವರಾಜ್‌ ಶೆಟ್ಟಿ, ವರಸಿದ್ಧಿವೇಣುಗೋಪಾಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next