Advertisement

ಪಾಕ್‌ - ಕಾಂಗ್ರೆಸ್‌ ಅದೆಂಥಾ ಕೆಮಿಸ್ಟ್ರಿ?

12:06 AM Oct 19, 2019 | Team Udayavani |

ಗೊಹಾನಾ/ಹಿಸಾರ್‌: “ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿ ಕಾಂಗ್ರೆಸ್‌ ನೀಡುತ್ತಿರುವ ಹೇಳಿಕೆಗಳನ್ನೆಲ್ಲ ನೆರೆರಾಷ್ಟ್ರ ಪಾಕಿಸ್ಥಾನವು ಭಾರತದ ವಿರುದ್ಧ ಟೀಕಿಸಲು ಬಳಸಿಕೊಳ್ಳುತ್ತಿದೆ. ಹಾಗಿದ್ದರೆ, ಕಾಂಗ್ರೆಸ್‌ಗೆ ಮತ್ತು ಪಾಕಿಸ್ಥಾನಕ್ಕೆ ಇರುವ ಕೆಮಿಸ್ಟ್ರಿ ಎಂಥದ್ದು?’

Advertisement

ಈ ರೀತಿ ಪ್ರಶ್ನಿಸಿರುವುದು ಪ್ರಧಾನಿ ನರೇಂದ್ರ ಮೋದಿ. ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಹರ್ಯಾಣದ ಗೊಹಾನಾ ಮತ್ತು ಹಿಸಾರ್‌ನಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ದಲ್ಲಿ ವಿಶೇಷ ಸ್ಥಾನಮಾನ ವಾಪಸ್‌ ಪಡೆದ ವಿಚಾರ ವನ್ನೇ ಚುನಾವಣಾ ದಾಳವನ್ನಾಗಿ ಬಳಸಿಕೊಂಡಿರುವ ಪ್ರಧಾನಿ ಮೋದಿ, ಕೇಂದ್ರದ ನಿರ್ಧಾರವನ್ನು ಟೀಕಿಸಿ ರುವ ವಿಪಕ್ಷಗಳ ವಿರುದ್ಧ ಹರಿಹಾಯ್ದರು. “ಕಾಂಗ್ರೆಸ್‌ನಂಥ ಪಕ್ಷಗಳು ಜನರ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ, ಯೋಧರ ಬಲಿದಾನ ಗಳನ್ನೂ ಗೌರವಿಸುವುದಿಲ್ಲ’ ಎಂದ ಮೋದಿ, “ನಾನು ದೇಶದ ಹಿತಾಸಕ್ತಿಯಿಂದ ನಿರ್ಧಾರ ಕೈಗೊಳ್ಳ ಬೇ ಕೋ, ಬೇಡವೋ? ರಾಷ್ಟ್ರೀಯ ಹಿತಾಸಕ್ತಿ ಎಂಬುದು ರಾಜಕೀಯಕ್ಕಿಂತ ಮಿಗಿಲಾದದ್ದು ಹೌದೋ, ಅಲ್ಲವೋ’ ಎಂದು ಅಲ್ಲಿ ನೆರೆದವರನ್ನು ಪ್ರಶ್ನಿಸಿದರು.

ಆಗಸ್ಟ್‌ 5ರಂದು ನಾವು ಕೈಗೊಂಡ ನಿರ್ಧಾರ (370ನೇ ವಿಧಿ ರದ್ದು)ವು ಕಾಂಗ್ರೆಸ್‌ಗೆ ಎಂಥಾ ನೋವು ಕೊಟ್ಟಿದೆಯೆಂದರೆ, ಯಾವ ಔಷಧ ದಿಂದಲೂ ಆ ನೋವನ್ನು ಗುಣಪಡಿಸಲು ಸಾಧ್ಯವಾ ಗುತ್ತಿಲ್ಲ. ಕಾಂಗ್ರೆಸ್‌ ಎಂಥಾ ಕಾಯಿಲೆ ಯಿಂದ ಬಳಲುತ್ತಿದೆಯೆಂದರೆ, ನಾವು ಸ್ವತ್ಛ ಭಾರತ, ಸರ್ಜಿ ಕಲ್‌ ದಾಳಿ, ಬಾಲಕೋಟ್‌ ಎಂಬ ಹೆಸರೆತ್ತಿದೊಡನೆ ಆ ಪಕ್ಷದ ನೋವು ಜಾಸ್ತಿಯಾಗುತ್ತದೆ ಎಂದೂ ಪ್ರಧಾನಿ ವ್ಯಂಗ್ಯವಾಡಿದರು.

ಸೋನಿಯಾ ರ್ಯಾಲಿ ರದ್ದು: ಹರ್ಯಾಣದ ಮಹೇಂದ್ರಗಡದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕೊನೇ ಕ್ಷಣದಲ್ಲಿ ಗೈರಾದರು. ಅನಿವಾರ್ಯ ಕಾರಣಗಳಿಂದಾಗಿ ಸೋನಿಯಾರಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಹುಲ್‌ ಗಾಂಧಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಘೋಷಿಸಿತು.

ಮೋದಿಗೆ ಆರ್ಥಿಕತೆ ಗೊತ್ತಿಲ್ಲ ಎಂದ ರಾಹುಲ್‌: ಪ್ರಧಾನಿ ಮೋದಿ ಅವರಿಗೆ ಆರ್ಥಿಕತೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಮಹೇಂದ್ರಗಡದ ರ್ಯಾಲಿ ಯಲ್ಲಿ ಮಾತನಾಡಿದ ಅವರು, “ಇಡೀ ಜಗತ್ತೇ ಭಾರತವನ್ನು ನೋಡಿ ನಗುತ್ತಿದೆ. ಪ್ರೀತಿಯಿಂದ ಬಾಳಿ, ತ್ವರಿತ ಅಭಿವೃದ್ಧಿ ಸಾಧಿಸಿ, ಭಾರತವು ಜಗ ತ್ತಿಗೇ ದಾರಿ ತೋರಿಸಬೇಕಿತ್ತು. ಆದರೆ, ಈಗ ಇಲ್ಲಿ ಒಂದು ಜಾತಿಯವನು ಮತ್ತೂಂದು ಜಾತಿ ಯವನ ವಿರುದ್ಧ, ಒಂದು ಧರ್ಮದವನು ಮತ್ತೂಂದು ಧರ್ಮದವನೊಂದಿಗೆ ಕಾದಾಡುತ್ತಿ ದ್ದಾನೆ. ದೇಶದ ಹೆಮ್ಮೆಯಾಗಿದ್ದ ಆರ್ಥಿಕತೆಯನ್ನು ಪ್ರಧಾನಿ ಮೋದಿ ನಾಶ ಮಾಡಿಬಿಟ್ಟಿದ್ದಾರೆ’ ಎಂದು ಕಿಡಿಕಾರಿದ್ದಾರೆ.

Advertisement

ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಬಂಪರ್‌
ಇದೇ 21ರಂದು ನಡೆಯಲಿರುವ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕಡೆ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಮತ್ತೂಮ್ಮೆ ಅಧಿಕಾರಕ್ಕೇರಲಿದೆ ಎಂದು ಎಬಿಪಿ ನ್ಯೂಸ್‌-ಸಿ ವೋಟರ್‌ ಜಂಟಿಯಾಗಿ ನಡೆಸಿದ ಸಮೀಕ್ಷೆ ಭವಿಷ್ಯ ನುಡಿದಿದೆ. ಈ ಸಂಸ್ಥೆಗಳು ನಡೆ ಸಿದ ಜನಾಭಿಪ್ರಾಯ ಸಂಗ್ರಹದ ವರದಿ ಶುಕ್ರವಾರ ಬಹಿರಂಗವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ 194 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌+ಎನ್‌ಸಿಪಿ ಮೈತ್ರಿಯು 86ರಲ್ಲಿ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಹರಿಯಾಣದಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಲಿದ್ದು, 90 ಕ್ಷೇತ್ರಗಳ ಪೈಕಿ 83 ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಇಲ್ಲಿ ವಿಪಕ್ಷ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿ, ಕೇವಲ 3ರಲ್ಲಿ ಜಯ ಸಾಧಿಸಲಿದೆ ಎಂದಿದೆ ಸಮೀಕ್ಷೆ.

ಸಂವಿಧಾನದ 370ನೇ ವಿಧಿ ರದ್ದು ಕುರಿತು ಸಂಸತ್‌ನಲ್ಲಿ ಮತದಾನವೇ ನಡೆದಿಲ್ಲ. ಬಿಜೆಪಿ ಈ ವಿಚಾರದಲ್ಲಿ ದೇಶದ ಹಾದಿ ತಪ್ಪಿಸುತ್ತಿದೆ. ಸಂಸತ್‌ನಲ್ಲಿ ಕೇವಲ ಜಮ್ಮು-ಕಾಶ್ಮೀರ ವಿಭಜನೆ ವಿಧೇಯಕ ಕುರಿತಷ್ಟೇ ಮತದಾನ ನಡೆದಿದ್ದು, ವಿಭಜನೆಯನ್ನು ಕಾಂಗ್ರೆಸ್‌ ವಿರೋಧಿಸಿದೆ.
ಆನಂದ್‌ ಶರ್ಮಾ, ಕಾಂಗ್ರೆಸ್‌ ನಾಯಕ

ಮಹಾರಾಷ್ಟ್ರದಲ್ಲಿ ಈ ಬಾರಿಯ ಚುನಾವಣೆ ಹೇಗಿದೆಯೆಂದರೆ, ನಮಗೆ ಹೋರಾಟ ಮಾಡಲು ಎದುರಾಳಿ ಕುಸ್ತಿಪಟುವೇ ಸಿಗುತ್ತಿಲ್ಲ.
ದೇವೇಂದ್ರ ಫ‌ಡ್ನವೀಸ್‌, ಮಹಾರಾಷ್ಟ್ರ ಸಿಎಂ

ನಾವು ಮಕ್ಕಳೊಂದಿಗೆಲ್ಲ ಕಾದಾಡುವುದಿಲ್ಲ. ರಾಜ್ಯದಲ್ಲಿ ಸ್ಪರ್ಧೆಯೇ ಇಲ್ಲ ಎಂದಾದ ಮೇಲೆ ಪ್ರಧಾನಿ ಮೋದಿ, ಅಮಿತ್‌ ಶಾ, ಯೋಗಿ ಮತ್ತಿತರರು ಇಲ್ಲೇಕೆ ಅಷ್ಟೊಂದು ರ್ಯಾಲಿ ನಡೆಸುತ್ತಿದ್ದಾರೆ?
ಶರದ್‌ ಪವಾರ್‌, ಎನ್‌ಸಿಪಿ ನಾಯಕ

ಮಹಾರಾಷ್ಟ್ರ
ವಿಧಾನಸಭೆ ಒಟ್ಟು ಬಲಾಬಲ- 288
ಮ್ಯಾಜಿಕ್‌ ಸಂಖ್ಯೆ – 145
ಬಿಜೆಪಿ+ಶಿವಸೇನೆ- 194 (ಶೇ.47)
ಕಾಂಗ್ರೆಸ್‌+ಎನ್‌ಸಿಪಿ-86 (ಶೇ.39)
ಇತರೆ- 8 (ಶೇ.14)

ಹರ್ಯಾಣ
ವಿಧಾನಸಭೆ ಒಟ್ಟು ಬಲಾಬಲ- 90
ಮ್ಯಾಜಿಕ್‌ ಸಂಖ್ಯೆ- 46
ಬಿಜೆಪಿ – 83 (ಶೇ.48)
ಕಾಂಗ್ರೆಸ್‌- 3 (ಶೇ.21)
ಇತರೆ – 4 (ಶೇ.31)

ಮಹಾ ಸಿಎಂ ಯಾರಾಗಬೇಕು?
ದೇವೇಂದ್ರ ಫ‌ಡ್ನವೀಸ್‌ ಶೇ.35
ಶರದ್‌ ಪವಾರ್‌-ಶೇ.7
ಉದ್ಧವ್‌ ಠಾಕ್ರೆ- ಶೇ.5

Advertisement

Udayavani is now on Telegram. Click here to join our channel and stay updated with the latest news.

Next