ಮಂಗಳೂರು: ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಅತ್ಯಾಧುನಿಕ ರೀತಿಯ, ಅಂತಾರಾಷ್ಟ್ರೀಯ ದರ್ಜೆಯ 37 ಐಸಿಯು ಬೆಡ್‌ಗಳನ್ನು ಒದಗಿಸಲಾಗಿದೆ.
ವೆನ್ಲಾಕ್ ಹೊಸ ಕಟ್ಟಡದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಅವುಗ ಳನ್ನು ಅಳವಡಿಸಲಾಗಿದೆ.
ಅವಶ್ಯ ಬಿದ್ದರೆ ಕೋವಿಡ್ ಸೋಂಕಿತರ ಉಪಯೋಗಕ್ಕೆ ಅವುಗಳನ್ನು ಬಳಸಿಕೊಳ್ಳಲಾಗುವುದು. ಕೋವಿಡ್ ಚಿಕಿತ್ಸೆ ಪೂರ್ಣಗೊಂಡ ಬಳಿಕ ಇತರ ರೋಗಿಗಳಿಗೆ ಬಳಸಬಹುದಾಗಿದೆ.
ನೂತನ ಸರ್ಜಿಕಲ್ ಬ್ಲಾಕ್
ವೆನ್ಲಾಕ್ ನಲ್ಲಿ ಸುಮಾರು 37 ಕೋಟಿ ರೂಪಾಯಿ ವೆಚ್ಚದ ನೂತನ ಪ್ರತ್ಯೇಕ ಸರ್ಜಿಕಲ್ ಬ್ಲಾಕ್ ಕೂಡ ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.