Advertisement
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಪ್ರವಾಹ ಭೀಕರತೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಬೆಳ್ತಂಗಡಿಯ ಪರಿಸ್ಥಿತಿ ಅವಲೋಕಿಸಿ ರಾಜ್ಯಕ್ಕೆ ಅನ್ವಯವಾಗುವಂತೆ 2 ಸಾವಿರ ಕೋಟಿ ರೂ. ನೆರೆ ಪರಿಹಾರ ಘೋಷಿಸಿದ್ದರು. ಮೊದಲ ಹಂತವಾಗಿ ತಾಲೂಕಿನ 267 ಮಂದಿ ಸಂತ್ರಸ್ತ ಕುಟುಂಬಗಳಿಗೆ 10,000 ವಿತರಿಸಲಾಗಿದೆ. ಜತೆಗೆ ದಾನಿಗಳಿಂದ ದಿನಬಳಕೆ ವಸ್ತು, ಅಕ್ಕಿ ಸಹಿತ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತ ಹಾಗೂ ಶಾಸಕರ ಮುತುವರ್ಜಿಯಿಂದ ವಿತರಿಸಲಾಗಿತ್ತು.
ತಾ|ನಲ್ಲಿ ಈಗಾಗಲೇ 257 ಮಂದಿ ಫಲಾನುಭವಿ ಸಂತ್ರಸ್ತರನ್ನು ತಾ| ಆಡಳಿತ ಗುರುತಿಸಿದೆ. ರಾಜ್ಯ ದಲ್ಲಿ 190 ಮಂದಿ ಸಂಪೂರ್ಣ ಮನೆ ಕಳೆದುಕೊಂಡವರ ಪೈಕಿ ಮೊದಲ ಬಾರಿಗೆ ತಾ|ನ ಅತೀ ಹೆಚ್ಚು 61 ಮಂದಿ ಫಲಾನು ಭವಿಗಳಿಗೆ ಪರಿಹಾರ 37 ಲಕ್ಷ ರೂ. ನೇರ ಖಾತೆಗೆ ರಾಜ್ಯ ಸರಕಾರ ಜಮೆ ಮಾಡಿದೆ. ಮುಂದಿನ ದಿನಗಳಲ್ಲಿ ಉಳಿದ 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಹಂತ ಹಂತವಾಗಿ ಹಣ ಖಾತೆಗೆ ಬೀಳಲಿದೆ. ಸಂಪೂರ್ಣ ಮನೆ ಕಳೆದು ಕೊಂಡವರಿಗೆ 1 ಲಕ್ಷ ರೂ. ಭಾಗಶಃ ಮನೆ ಕಳೆದುಕೊಂಡವರಿಗೆ 25 ಸಾವಿರ ರೂ., ತೀವ್ರ ಮನೆ ಹಾನಿಯಾದವರಿಗೆ 25 ಸಾವಿರ ರೂ. ಬಿಡುಗಡೆಯಾಗಿದೆ.
Related Articles
Advertisement
61 ಮಂದಿ ಸಂತ್ರಸ್ತರು1 ಲಕ್ಷ ರೂ.ನಂತೆ ಮಿತ್ತಬಾಗಿಲು 25 ಮಂದಿ, ನಡಾ 1, ನಾವೂರು 2, ಲಾೖಲದ 1 ಮಂದಿ ಸಂತ್ರಸ್ತರಿಗೆ ಹಾಗೂ 25 ಸಾವಿರ ರೂ.ನಂತೆ ಇಂದಬೆಟ್ಟು 3, ಲಾೖಲ 1, ಮಲವಂತಿಗೆ 11, ಮಿತ್ತಬಾಗಿಲು 10, ನಡಾ 2, ನಾವೂರು 5 ಸಹಿತ ಒಟ್ಟು 61 ಮಂದಿ ಸಂತ್ರಸ್ತರಿಗೆ ಪರಿಹಾರಧನ 37 ಲಕ್ಷ ರೂ. ಖಾತೆಗೆ ಸಂದಾಯ ಮಾಡಲಾಗಿದೆ. ಆಧಾರ್, ಪಡಿತರ ಚೀಟಿ ಸಮಸ್ಯೆ
ಸಂತ್ರಸ್ತರ ಹಣ ದುರುಪಯೋಗವಾಗ ದಂತೆ ನೇರ ಖಾತೆಗೆ ಸಂದಾಯವಾಗಲು ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಮಾಡಲಾಗಿದೆ. 10 ಮಂದಿ ಸಂತ್ರಸ್ತರಲ್ಲಿ ಇನ್ನೂ ಆಧಾರ್, ಪಡಿತರ ಚೀಟಿ ಸಹಿತ ಸೂಕ್ತ ದಾಖಲೆಗಳಿಲ್ಲದಿರುವುದರಿಂದ ತಡವಾಗಿದೆ. ಶಾಸಕರ ಸೂಚನೆಯಂತೆ ತಹಶೀಲ್ದಾರ್ ಹಾಗೂ ಸಿಬಂದಿ ಬ್ಯಾಂಕ್ ಖಾತೆ, ಪಡಿತರ ಚೀಟಿ ಕೊಡಿಸಲು ಡೇಟಾ ಎಂಟ್ರಿ ತಡವಾಗಿದೆ. ಉಳಿದಂತೆ 257 ಮಂದಿ ಫಲಾನುಭವಿಗಳನ್ನು ಗುರುತಿಸಲಾ ಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಕೃಷಿ ಭೂಮಿ ಹಾನಿ
ನೆರೆ ಹಾವಳಿಯಿಂದ ತುತ್ತಾದ ಕೃಷಿ ಭೂಮಿ ಹಾನಿ ಕುರಿತಾಗಿ
ಈಗಾಗಲೇ ತಾಲೂಕು ಆಡಳಿತಕ್ಕೆ 860 ಅರ್ಜಿಗಳು ಬಂದಿವೆ. ಸುಮಾರು 270 ಹೆಕ್ಟೇರ್ ಕೃಷಿ ಭೂಮಿ ಪ್ರದೇಶ ಹಾನಿ ಅಂದಾಜಿಸಲಾಗಿದ್ದು, ಕೃಷಿ ಅಧಿಕಾರಿಗಳಿಂದ ಸಮೀಕ್ಷೆ ಕಾರ್ಯ ಸಾಗಿದೆ. ಆದರೆ ಸಮೀಕ್ಷೆಗೆ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು, ಹೆಚ್ಚಿನ ಸಿಬಂದಿ ನೇಮಿಸಿ ಶೀಘ್ರ ಕೃಷಿ ಹಾನಿ ಪರಿಹಾರ ವಿತರಣೆಯಾಗಬೇಕಿದೆ. ಅತೀ ಹೆಚ್ಚು ಮಂದಿ
ಪರಿಹಾರ ಬಿಡುಗಡೆಯಾದ ರಾಜ್ಯದ 119 ಮಂದಿ ಸಂತ್ರಸ್ತರ ಪೈಕಿ ತಾಲೂಕಿನ ಅತೀ ಹೆಚ್ಚು 61 ಮಂದಿಗೆ ಪರಿಹಾರ ಒದಗಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಂಪೂರ್ಣ ಪರಿಹಾರ ವಿತರಿಸುವ ಕಾರ್ಯ ನಡೆಯಲಿದೆ.
– ಹರೀಶ್ ಪೂಂಜ
ಶಾಸಕರು ಪರಿಹಾರ ತಲುಪಿದೆ
ತಾಲೂಕಿನಲ್ಲಿ ಗುರುತಿಸಲಾಗಿರುವ 257 ಮಂದಿ ಸಂತ್ರಸ್ತರ ಪೈಕಿ 61 ಮಂದಿಗೆ ರಾಜ್ಯ ಸರಕಾರದ ಪರಿಹಾರ ನೇರ ಖಾತೆಗೆ ತಲುಪಿದೆ. ಮುಂದಿನ ಹಂತದಲ್ಲಿ ಉಳಿದ ಸಂತ್ರಸ್ತರು ಹಾಗೂ ಕೃಷಿ ಸಹಿತ ಮನೆ ಕಳೆದುಕೊಂಡವರಿಗೆ ಅವಶ್ಯ ನೆರವು
ತಲುಪುವ ವಿಶ್ವಾಸವಿದೆ.
- ಗಣಪತಿ ಶಾಸ್ತ್ರೀ
ತಹಶೀಲ್ದಾರ್ - ಚೈತ್ರೇಶ್ ಇಳಂತಿಲ