Advertisement

36 ಶಂಕಿತರು ಡಿಸ್ಚಾರ್ಜ್‌

11:02 PM Mar 16, 2020 | Lakshmi GovindaRaj |

ಬೆಂಗಳೂರು: ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆ ಹಿನ್ನೆಲೆ ರಾಜ್ಯದಲ್ಲಿ ಸೋಮವಾರ 9 ಮಂದಿ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಅಂತೆಯೇ ಸೋಂಕು ವರದಿ ನೆಗೆಟಿವ್‌ ಬಂದ ಹಿನ್ನೆಲೆ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಲ್ಲಿದ್ದ 36 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ಸದ್ಯ 44 ಮಂದಿ ಆಸ್ಪತ್ರೆಗಳಲ್ಲಿಯೇ ನಿಗಾದಲ್ಲಿದ್ದಾರೆ.

Advertisement

ಬೆಂಗಳೂರಿನಲ್ಲಿ 1, ಹಾಸನ 2, ದಕ್ಷಿಣ ಕನ್ನಡ 3, ಕಲಬುರಗಿ 5, ಉತ್ತರ ಕನ್ನಡ 2, ಉಡುಪಿಯಲ್ಲಿ ಒಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಇವರುಗಳ ಗಂಟಲು ದ್ರಾವಣ ಮಾದರಿ ಹಾಗೂ ರಕ್ತ ಮಾದರಿಯನ್ನು ಸಂಗ್ರಹಿಸಿ ಸೋಂಕು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಈ ಹಿಂದೆ ದಾಖಲಾಗಿದ್ದವರ ಶಂಕಿತರ ಪೈಕಿ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿನ ಒಬ್ಬ, ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲಿ 12, ದಕ್ಷಿಣ ಕನ್ನಡ 12, ಬಳ್ಳಾರಿ 6, ಉಡುಪಿ 1, ವಿಜಯಪುರ 1, ಗದಗ 2, ಧಾರವಾಡ 1 ಸೇರಿ ಒಟ್ಟು 36 ಮಂದಿಯ ರಕ್ತ ಮಾದರಿ ನೆಗೆಟಿವ್‌ ಬಂದ ಹಿನ್ನೆಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ಈ ಹಿಂದೆ ಮಾದರಿ ಸಂಗ್ರಹಿಸಿದ್ದವರ ಪೈಕಿ 86 ಮಂದಿ ಶಂಕಿತರ ವರದಿಗಳು ಸೋಮವಾರ ನೆಗೆಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸದಾಗಿ 33 ಮಂದಿ ಶಂಕಿತರ ಗಂಟಲು ದ್ರಾವಣ ಹಾಗೂ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next