ಹಾವೇರಿ: ಕೆವಿಜಿ ಬ್ಯಾಂಕ್ ಮ್ಯಾನೇಜರ್, ಕೆಎಸ್‌ಆರ್‌ಪಿ ಸಿಬ್ಬಂದಿ, ಬಿಸಿಎಂ ಇಲಾಖೆ ವಾಹನ ಚಾಲಕ, ಗ್ರಾಮ ವಿದ್ಯುತ್ ಪ್ರತಿನಿ ಧಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 36 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಹಾಗೂ 139 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1920 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 1232 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಇಂದಿನ ಮೂರು ಮರಣ ಪ್ರಕರಣ ಸೇರಿ ಒಟ್ಟಾರೆ 42 ಜನರು ಕೋವಿಡ್ ದಿಂದ ಮೃತಪಟ್ಟಿದ್ದಾರೆ. 163 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ 483 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್‌ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಒಟ್ಟಾರೆ 646 ಸಕ್ರಿಯ ಪ್ರಕರಣಗಳಿವೆ.
ಆ. 11ರಂದು ಹಾವೇರಿ-10, ರಾಣಿಬೆನ್ನೂರು-7, ಶಿಗ್ಗಾವಿ, ಹಾನಗಲ್ಲ ಹಾಗೂ ಹಿರೇಕೆರೂರಿನಲ್ಲಿ ತಲಾ 5, ಸವಣೂರು-4 ಜನರಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ ದಿಂದ ಗುಣಮುಖರಾಗಿ ರಾಣಿಬೆನ್ನೂರು-76, ಹಿರೇಕೆರೂರು-27, ಹಾವೇರಿ-19, ಬ್ಯಾಡಗಿ-14 ಹಾಗೂ ಹಾನಗಲ್ಲ ತಾಲೂಕಿನ ಮೂರು ಜನರು ಬಿಡುಗಡೆ ಹೊಂದಿದ್ದಾರೆ.
ಎಲ್ಲೆಲ್ಲಿ ಪತ್ತೆ?: ಹಾವೇರಿ ಪಟ್ಟಣದ 6, ಬೆಳವಗಿ, ಕನವಳ್ಳಿ, ಕೋಳೂರು, ನಾಗನೂರ ಗ್ರಾಮದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ರಾಣಿಬೆನ್ನೂರ ಪಟ್ಟಣ-6 ಹಾಗೂ ಅರೇಮಲ್ಲಾಪುರದಲ್ಲಿ ಒಂದು, ಅಕ್ಕಿಆಲೂರು-2, ಹಾನಗಲ್ಲ, ಶಂಕ್ರಿಕೊಪ್ಪ, ಡೊಳ್ಳೇಶ್ವರದಲ್ಲಿ ತಲಾ ಒಂದು ಪ್ರಕರಣ, ಶಿಗ್ಗಾವಿ-4 ಹಾಗೂ ಗಂಗೀಬಾವಿ ಗ್ರಾಮದಲ್ಲಿ ಒಂದು ಪ್ರಕರಣ, ತೆವರಮೆಳ್ಳಿಹಳ್ಳಿ-2, ಚಿಲ್ಲೂರಬಡ್ನಿ, ಹಿರೇಮೆಳ್ಳಿಹಳ್ಳಿ ತಲಾ ಒಂದು ಪ್ರಕರಣ, ರಟ್ಟಿಹಳ್ಳಿಯಲ್ಲಿ-3, ಹಿರೇಕೆರೂರು, ಹಿರೇಮೊರಬದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ಮೂವರು ಸಾವು: ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ 42 ಪುರುಷ(ಪಿ-194147) ತೀವ್ರ ಉಸಿರಾಟದ ತೊಂದರೆಯಿಂದ ಆ. 7ರಂದು ಜಿಲ್ಲಾಸ್ಪತ್ರೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ. ಹಾವೇರಿ ನಗರದ ಪುರದ ಓಣಿಯ 70 ವರ್ಷದ ಮಹಿಳೆ (ಪಿ-194153)ತೀವ್ರ ಉಸಿರಾಟದ ತೊಂದರೆಯಿಂದ ಆ. 9ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ. ರಾಣಿಬೆನ್ನೂರ ತಾಲೂಕು ಉಮಾಶಂಕರನಗರದ 62 ವರ್ಷದ ಮಹಿಳೆ(ಪಿ-1119878) ತೀವ್ರ ಉಸಿರಾಟದ ತೊಂದರೆಯಿಂದ ಜು. 24ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಜು. 26ರಂದು ಮೃತಪಟ್ಟಿದ್ದಾರೆ.