ನವದೆಹಲಿ: ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಹಲವು ಆ್ಯಪ್ ಗಳನ್ನು ಈಗಾಗಲೇ ರಿಮೂವ್ ಮಾಡಿದೆ. ಕಳೆದ 5-6 ತಿಂಗಳಿನಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಪ್ಲೇ ಸ್ಟೋರ್ ನೀತಿಗಳನ್ನು ಉಲ್ಲಂಘಿಸಿದಕ್ಕಾಗಿ ಮತ್ತು ಜೋಕರ್ ಅಥವಾ ಹಲವು ಮಾಲ್ವೇರ್ ದಾಳಿಗೆ ತುತ್ತಾಗಿದ್ದರೇ ಈ ಕ್ರಮ ಕೈಗೊಳ್ಳುತ್ತಿದೆ.
ಜುಲೈ ತಿಂಗಳಲ್ಲಿ ಜೋಕರ್ ಮಾಲ್ವೇರ್ ಗೆ ತುತ್ತಾಗಿದ್ದ 11 ಅಪ್ಲಿಕೇಶನ್ ಗಳನ್ನು ಗೂಗಲ್ ತೆಗೆದುಹಾಕಿತ್ತು. ತದನಂತರದಲ್ಲಿ ಸೆಪ್ಟೆಂಬರ್ ನಲ್ಲಿ 6 ಹಾಗೂ ಅಕ್ಟೋಬರ್ ನಲ್ಲಿ 17 ವೈರಸ್ ಗೆ ತುತ್ತಾಗಿದ್ದ ಆ್ಯಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ರಿಮೂವ್ ಮಾಡಿತ್ತು.
ಇದೀಗ ಮಕ್ಕಳಿಗೆ ಸಂಬಂಧಿಸಿದ ಮೂರು ಆ್ಯಪ್ ಗಳನ್ನು ಪ್ಲೇ ಸ್ಟೋರ್ ಡಿಲೀಟ್ ಮಾಡಿದ್ದು, ಆದರೇ ಈ ಆ್ಯಪ್ಸ್ ಮಾಲ್ವೇರ್ ದಾಳಿಗೆ ಒಳಗಾಗಿಲ್ಲ ಎಂದು ತಿಳಿದುಬಂದಿದೆ. ಪ್ರಿನ್ಸಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ ಅಂಡ್ ಕಾಸ್ ಪ್ಲೇ ಈ ಮೂರು ಅಪ್ಲಿಕೇಶನ್ ಗಳನ್ನು ರಿಮೂವ್ ಮಾಡಲಾಗಿದ್ದು ಇವು 20 ಮಿಲಿಯನ್ ಡೌನ್ ಲೋಡ್ ಕಂಡಿದ್ದವು. ಈ ಆ್ಯಪ್ ಗಳು ಗೂಗಲ್ ಡೇಟಾ ಕಲೆಕ್ಷನ್ ಪಾಲಿಸಿಗಳನ್ನು ಉಲ್ಲಂಘಿಸಿದಕ್ಕಾಗಿ ಕ್ರಮ ಕೈಗೊಂಡಿದದ್ದೇವೆಂದು ಗೂಗಲ್ ತಿಳಿಸಿದೆ.
ಒಟ್ಟಾರೆ 36 ಆ್ಯಪ್ ಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದ್ದು, ಈ ಅಪ್ಲಿಕೇಶನ್ ಗಳು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿದ್ದರೇ ಅವುಗಳನ್ನು ಡಿಲೀಟ್ ಮಾಡುವುದು ಒಳಿತು.
ಪ್ರಿನ್ಸಸ್ ಸಲೂನ್, ನಂಬರ್ ಕಲರಿಂಗ್, ಕ್ಯಾಟ್ಸ್ ಅಂಡ್ ಕಾಸ್ ಪ್ಲೇ, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಮಿಂಟ್ ಲೀಫ್ ಮೆಸೇಜ್, ಯೂನಿಕ್ ಕೀ ಬೋರ್ಡ್, ಟಂಗ್ರಾಮ್ ಆ್ಯಪ್ ಲಾಕ್, ಡೈರೆಕ್ಟ್ ಮೆಸೆಂಜರ್, ಪ್ರೈವೇಟ್ ಎಸ್ ಎಂಎಸ್, ಒನ್ ಸೆಂಟೆನ್ಸ್ ಟ್ರಾನ್ಸ್ ಲೇಟರ್, ಸ್ಟೈಲ್ ಫೋಟೋ ಕೊಲ್ಯಾಜ್, ಮೆಟಿಕ್ಯುಲಸ್ ಸ್ಕ್ಯಾನರ್, ಡಿಸೈರ್ ಟ್ರಾನ್ಸ್ ಲೇಟ್, ಟ್ಯಾಲೆಂಟ್ ಪೋಟೋ ಎಡಿಟರ್, ಕೇರ್ ಮೆಸೇಜ್, ಪಾರ್ಟ್ ಮೆಸೇಜ್, ಪೇಪರ್ ಡಾಕ್ ಸ್ಕ್ಯಾನರ್, ಬ್ಲೂ ಸ್ಕ್ಯಾನರ್, ಹಮ್ಮಿಂಗ್ ಬರ್ಡ್ ಪಿಡಿಎಫ್ ಸ್ಕ್ಯಾನರ್, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಇಮೇಜ್ ಕಂಪ್ರೆಸ್ ಆ್ಯಂಡ್ರಾಯ್ಡ್, ರಿಲಾಕ್ಷೇಷನ್ ಆ್ಯಂಡ್ರಾಯ್ಡ್ ಎಸ್ ಎಂಎಸ್, ರಿಕವರ್ ಫೈಲ್ಸ್, ಟ್ರೈನಿಂಗ್ ಮೆಮೋರಿ ಗೇಮ್, ಪುಶ್ ಮೆಸೇಜ್, ಫಿಂಗರ್ ಟಿಪ್ ಗೇಮ್ ಬಾಕ್ಸ್, ಸೇಫ್ಟಿ ಆಯಪ್ ಲಾಕ್ , ಇಮೋಜಿ ವಾಲ್ ಪೇಪರ್, ಸಪರೇಟ್ ಡಾಕ್ ಸ್ಕ್ಯಾನರ್ ಮತ್ತು ಇತರೆ
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗೂಗಲ್ ತನ್ನ “ಗೂಗಲ್ ಪ್ಲೇ ಮ್ಯೂಸಿಕ್ ” ಅಪ್ಲಿಕೇಶನ್ ಸೇವೆಯನ್ನು ಸ್ಥಗಿತಗೊಳಿಸಿದೆ. ಸೆಪ್ಟೆಂಬರ್ ನಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಆ್ಯಪ್ ಅನ್ನು ಹಿಂಪಡೆಯಲಾಗಿತ್ತು. ಇದೀಗ ಭಾರತದಲ್ಲೂ ಗೂಗಲ್ ಪ್ಲೇ ಮ್ಯೂಸಿಕ್ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದೆ.