Advertisement

ಒಂದೇ ದಿನದಲ್ಲಿ ದೇಶದಲ್ಲಿ 35,871 ಹೊಸ ಕೋವಿಡ್ ಪ್ರಕರಣಗಳು ಪತ್ತೆ!

11:48 AM Mar 18, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಒಂದೇ ದಿನ 35, 871 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದು ಈ ವರ್ಷದಲ್ಲಿ ಒಂದು ದಿನದಲ್ಲಿ ಪತ್ತೆಯಾದ ಅತೀ ಹೆಚ್ಚು ಹೊಸ ಪ್ರಕರಣಗಳಾಗಿದೆ.

Advertisement

ಗುರುವಾರ ಬೆಳಗ್ಗೆ ಆರೋಗ್ಯ ಇಲಾಖೆ ನೀಡಿದ ವರದಿಯಂತೆ 24 ಗಂಟೆಯಲ್ಲಿ 35,871 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಅವಧಿಯಲ್ಲಿ 172 ಮಂದಿ ಕೋವಿಡ್ ಸೋಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,59,216ಕ್ಕೆ ಏರಿಕೆಯಾಗಿದೆ.

ಕೋವಿಡ್ ನಿಯಾಮವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಮುಂಬೈನ ಹೋಟೆಲೊಂದನ್ನು ಮುಚ್ಚಿಸಲಾಗಿದೆ. ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ಲಸಿಕೆ ಪಡೆದು ಒಂದು ಗಂಟೆಯೊಳಗೆ ವೃದ್ಧೆ ಸಾವು

ಗುಜರಾತ್ ನ ಅಹಮದಾಬಾದ್ ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಸ್ಥಳೀಯ ಬಸ್ ಸಂಚಾರ, ಜಿಮ್,  ಸ್ಪೋರ್ಟ್ ಕ್ಲಬ್ ಗಳನ್ನು ಮುಚ್ಚಿಸಲಾಗಿದೆ.

Advertisement

ಗ್ರೇಟರ್ ನೋಯ್ಡಾದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಎಪ್ರಿಲ್ 30ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಚಲೋ ಹಿಂದೆ ‘ಕೆಪಿಸಿಸಿ ಅಘೋಷಿತ ಅಧ್ಯಕ್ಷೆ ಮಹಾನಾಯಕಿ’ಯ ಕೈವಾಡ: ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next