Advertisement

ಮತ್ತೆ 358 ಪಾಸಿಟಿವ್‌; 404 ಮಂದಿ ಗುಣಮುಖ

04:01 PM Aug 16, 2020 | Suhan S |

ಬೆಳಗಾವಿ: ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಶನಿವಾರ ಒಂದೇ ದಿನ 404 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 358 ಜನರಿಗೆ ಸೋಂಕು ತಗುಲಿದೆ.

Advertisement

ಬೆಳಗಾವಿಯ 72 ವರ್ಷದ ವೃದ್ಧ, ಗೋಕಾಕ ದ 48 ವರ್ಷದ ವ್ಯಕ್ತಿ, ಬೆಳಗಾವಿಯ ಯಳ್ಳೂರನ 92 ವರ್ಷದ ವೃದ್ಧ, ಬೆಳಗಾವಿಯ 32 ವರ್ಷದ ವ್ಯಕ್ತಿ ಹಾಗೂ ಬೆಳಗಾವಿಯ 73 ವರ್ಷದ ವೃದ್ಧ  ಕೋವಿಡ್ ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 118 ಮಂದಿ ಸೋಂಕಿನಿಂದ ಬಲಿಯಾದಂತಾಗಿದೆ. ಹೊಸ 358 ಹೊಸ ಪ್ರಕರಣಗಳಿಂದ ಒಟ್ಟು 7332 ಸೋಂಕಿತರು ಆಗಿದ್ದು, ಒಂದೇ ದಿನ 404 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಇಲ್ಲಿಯವರೆಗೆ 3510 ಜನ ಬಿಡುಗಡೆ ಆದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ 3704 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನವರೆಗೆ 61752 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 52779 ವರದಿ ನಕಾರಾತ್ಮಕವಾಗಿದೆ. ಇನ್ನೂ 818 ಜನರ ವರದಿ ಬರುವುದು ಬಾಕಿ ಇದೆ.

ಗೋಕಾಕ: ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಶನಿವಾರ 59 ಪ್ರಕರಣಗಳು ದೃಢಪಟ್ಟಿವೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ-38, ಕಲ್ಲೋಳ್ಳಿ-3, ಘಟಪ್ರಭಾ-3, ಪುಲಗಡ್ಡಿ-4, ಶಿಗಿಹಳ್ಳಿ-2, ಮಲ್ಲಾಪೂರ ಪಿ ಜಿ, ಕೊಣ್ಣೂರ, ಕೆಮ್ಮನಕೋಲ, ಮಮದಾಪೂರ, ಮುನ್ಯಾಳ, ದಂಡಾಪೂರ, ಕೌಜಲಗಿ, ಪಾಮಲದಿನ್ನಿ, ಮೂಡಲಗಿ ಗ್ರಾಮದಲ್ಲಿ ತಲಾ ಒಂದು ಸೋಂಕು ದೃಢಪಟ್ಟಿದೆ.

ಬೈಲಹೊಂಗಲದಲ್ಲಿ 12 ಪ್ರಕರಣ : ಪಟ್ಟಣದ ಮೂವರು ಸೇರಿದಂತೆ ತಾಲೂಕಿನಲ್ಲಿ 12 ಕೋವಿಡ್  ಪ್ರಕರಣ ಶನಿವಾರ ದೃಢಪಟ್ಟಿವೆ. ಪಟ್ಟಣದ ಬಸವ ನಗರದ 65 ವರುಷದ ಮಹಿಳೆ ಮೃತಳಾಗಿದ್ದಾಳೆ. ಕೆಸಿ ನಗರ 3ನೇ ಕ್ರಾಸ್‌ನ 16 ವರುಷದ ಹುಡುಗಿ, ಬಸವ ನಗರದ 7ನೇ ಕ್ರಾಸ್‌ನ 14 ವರುಷದ ಹುಡುಗ, ತಾಲೂಕಿನ ಕಿತ್ತೂರು 3, ಸಂಪಗಾವ 2, ಶೀಗಿಹಳ್ಳಿ, ಸೋಮನಟ್ಟಿ, ದಾಸ್ತಿಕೊಪ್ಪ, ಹುಣಶೀಕಟ್ಟಿಯಲ್ಲಿ ತಲಾ ಒಂದು ಪ್ರಕರಣಗಳಾಗಿದ್ದು, ಒಟ್ಟು 91 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಕೇರ್‌ ಸೆಂಟರ್‌ನಿಂದ ಶನಿವಾರ 6 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಎಸ್‌.ಎಸ್‌ ಸಿದ್ದನವರ ತಿಳಿಸಿದ್ದಾರೆ.

ಖಾನಾಪುರ: 7 ಜನರಿಗೆ ಸೋಂಕು : ತಾಲೂಕಿನ 7 ಜನರಿಗೆ ಶನಿವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಪಟ್ಟಣದ ಡೊರಗಲ್ಲಿಯ 68 ವರ್ಷದ ವೃದ್ಧ, ಬಿಇಒ ಕಚೇರಿಯ 53 ವರ್ಷದ ಸಿಬ್ಬಂದಿ, ಬಿಜಗರ್ಣಿ ಗ್ರಾಮದಲ್ಲಿ 21 ವರ್ಷದ ಯುವಕ, 21 ವರ್ಷದ ಯುವತಿ, 21 ವರ್ಷ ಯುವಕ, ಚಿಕ್ಕದಿನಕೋಪ್ಪ ಗ್ರಾಮದಲ್ಲಿ 36 ವರ್ಷದ ಪುರುಷ, 96 ವರ್ಷ ವೃದ್ಧನಿಗೆ ಸೋಂಕು ತಗುಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next