Advertisement
ಹೌದು… ಮಕ್ಕಳಿಲ್ಲದೇ ಖಾಲಿ ಖಾಲಿಯಾಗಿದ್ದಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ. 15 ರಷ್ಟು ಹೆಚ್ಚಾಗಿದೆ. 2020-21ನೇ ಸಾಲಿಗೆ ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಖಾಸಗಿ ಶಾಲೆ ತೊರೆದು 3,538 ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಸೇರಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Related Articles
Advertisement
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಡಿಡಿಪಿಐ : ಸರ್ಕಾರಿ ಶಾಲೆಗಳು ಇಂದಿಗೂ ಗುಣಮಟ್ಟಕಾಯ್ದುಕೊಂಡಿವೆ. ಇದನ್ನು ಪೋಷಕರು ಅರಿತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿದ್ದಾರೆ. ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಟೀವಿ, ರೆಡಿಯೋ ಹಾಗೂ ವಿದ್ಯಾಗಮ ಮೂಲಕ ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಿ ಪಾಠ ಪ್ರವಚನ ನೀಡಿದ್ದು, ಈ ನಡೆಯು ಪೋಷಕರಿಗೆ ಹಿಡಿಸಿದೆ.ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ದುಡಿಮೆ ಕಡಿಮೆ ಆಗಿದೆ. ಆರ್ಥಿಕ ಸಮಸ್ಯೆ ತಲೆದೋರಿದೆ. ಆನ್‌ಲೈನ್‌ಕ್ಲಾಸ್ ಬಗ್ಗೆ ಪೋಷಕರಲ್ಲಿ ನಂಬಿಕೆಕ್ಷೀಣಿಸಿದೆ. ಈ ಎಲ್ಲಾಕಾರಣದಿಂದಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದಾಖಲಾತಿ ಹೆಚ್ಚಾಗಿದೆ ಎಂದು ಮೈಸೂರು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಚ್ಚಿದ್ದ 5 ಶಾಲೆಗಳು ಪುನಾರಂಭ : ವಿದ್ಯಾರ್ಥಿಗಳಿಲ್ಲದೇ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬಾಗಿಲು ಹಾಕಿಕೊಂಡಿದ್ದ ಜಿಲ್ಲೆಯ 5 ಶಾಲೆಗಳು ಪುನಾರಂಭಗೊಂಡಿವೆ. ಎಚ್.ಡಿ. ಕೋಟೆ ತಾಲೂಕಿನ ದಾಳೇಗೌಡನಹುಂಡಿಯಪ್ರಾಥಮಿಕ ಶಾಲೆಯಲ್ಲಿ 14 ವಿದ್ಯಾರ್ಥಿಗಳು,ತಾರಕ ಶಾಲೆಯಲ್ಲಿ 09, ಜೋರೆಹಳ್ಳ (ಲಿಂಗೇನಹಳ್ಳಿ) ಶಾಲೆಯಲ್ಲಿ 13 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಮೂರು ಶಾಲೆಗಳು ಮೂರು ವರ್ಷಗಳ ಬಳಿಕ ಮತ್ತೆ ಆರಂಭಗೊಂಡಿವೆ. ಜೊತೆಗೆ ನಂಜನಗೂಡು ತಾಲೂಕಿನ ಚಂದ್ರವಾಡಿ ಶಾಲೆಗೆ 14 ವಿದ್ಯಾರ್ಥಿಗಳು ಸೇರ್ಪಡಿಯಾದರೆ,ಕೆ.ಆರ್. ನಗರ ತಾಲೂಕಿನಬೋರೇಗೌಡನಕೊಪ್ಪಲು ಶಾಲೆಗೆ 06 ಮಕ್ಕಳು ದಾಖಲಾಗಿದ್ದಾರೆ. ಈ ಮೂಲಕ ಮುಚ್ಚಿದ್ದ ಈ 5 ಸರ್ಕಾರಿ ಶಾಲೆಗಳು ಪುನಾರಂಭಗೊಂಡಿದೆ
-ಸತೀಶ್ ದೇಪುರ