Advertisement

35 ಜೋಡಿ ದಾಂಪತ್ಯಕ್ಕೆ

11:37 AM Feb 02, 2017 | Team Udayavani |

ಬೆಂಗಳೂರು: ಅಲ್ಲಿ ಒಂದು ಅಂಧ ಜೋಡಿಯೂ ಸೇರಿದಂತೆ 35 ಜೋಡಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಿಧ ಮಠಾಧೀಶರು, ಸಾಹಿತಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಇದಕ್ಕೆ ಸಾಕ್ಷಿಯಾಗಿ ನವ ಜೋಡಿಗಳನ್ನು ನೂರು ಕಾಲ ಬಾಳುವಂತೆ ಹರಿಸಿದರು. 

Advertisement

ಈ ಸಮಾರಂಭ ನಡೆದದ್ದು, ಬನಶಂಕರಿಯ ಶ್ರೀ  ಬನಶಂಕರಿ ದೇವಿಯ ದೇವಸ್ಥಾನದಲ್ಲಿ. ಬನಶಂಕರಿ ಸಾಮೂಹಿಕ ವೇದಿಕೆ ಬುಧವಾರ ದೇವಾಲಯದಲ್ಲಿ ಆಯೋಜಿಸಿದ್ದ 18ನೇ ವರ್ಷದ ಉಚಿತ  ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 35 ನವ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. 

ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಸಾಹಿತಿ ಡಾ.ಎಂ. ಚಿದಾನಂದಮೂರ್ತಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮೇಯರ್‌ ಜಿ.ಪದ್ಮಾವತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದರು. 

ವಧುಗಳಿಗೆ ಉಚಿತ ತಾಳಿ, ಕಾಲುಂಗುರ, ರೇಷ್ಮೆ ಸೀರೆ, ವರರಿಗೆ ಬಿಳಿ ಅಂಗಿ, ಪಂಚೆ, ಬಾಸಿಂಗ, ಶಲ್ಯ ಪೇಟ ಮತ್ತಿತರ ವಿವಾಹಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು. ವಧು-ವರರ ಕಡೆಯ ಸಂಬಂಧಿಕರಿಗೆ ಉಚಿತ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next