Advertisement

ಏಳು ವರ್ಷದಲ್ಲಿ ತಂಬಾಕು ತ್ಯಜಿಸಿದ 35 ಲಕ್ಷ ಜನ

06:10 AM May 31, 2018 | |

ಬೆಂಗಳೂರು: ತಂಬಾಕು ಪದಾರ್ಥಗಳ ನಿಷೇಧದ ಕುರಿತ ನಿರಂತರ ಜಾಗೃತಿ ಹಾಗೂ ಕಾರ್ಯಾಚರಣೆ ಪರಿಣಾಮ ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 35 ಲಕ್ಷ ಜನ ತಂಬಾಕು ಪದಾರ್ಥಗಳನ್ನು ತ್ಯಜಿಸಿದ್ದಾರೆ.

Advertisement

ತಂಬಾಕು ಉತ್ಪಾದನೆ ಹಾಗೂ ಬಳಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ರಾಜ್ಯದ ಆರೂವರೆ ಕೋಟಿ ಜನರ ಪೈಕಿ 1.50 ಕೋಟಿಗೂ ಹೆಚ್ಚು ಜನ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಆದರೆ, ಕಳೆದ ಏಳು ವರ್ಷಗಳಲ್ಲಿ ಶೇ.5.4ರಷ್ಟಿದೆ.

ಅಂದರೆ 35 ಲಕ್ಷ ಜನ ತಂಬಾಕು ಉತ್ಪನ್ನಗಳಿಂದ ದೂರ ಉಳಿದಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಪ್ರತಿವರ್ಷ ದೇಶದಲ್ಲಿ 10 ಲಕ್ಷ ಜನ ತಂಬಾಕು ಬಳಕೆಯಿಂದ ಕಾಣಿಸಿಕೊಳ್ಳುವ ಕಾಯಿಲೆಗಳಿಗೆ ತುತ್ತಾಗಿ ಮೃತಪಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ 2016-17ನೇ ಸಾಲಿನಲ್ಲಿ ನಡೆಸಿದ “ವಿಶ್ವ ವಯಸ್ಕ ತಂಬಾಕು ಸಮೀಕ್ಷೆ’ಯಲ್ಲಿ ರಾಜ್ಯದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ ಶೇ.5.4ರಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ.

ಫೋಟೋ ನೋಡಿ ಸಿಗರೇಟ್‌ ತೊರೆದರು: ಕಳೆದ ಏಳು ವರ್ಷಗಳಲ್ಲಿ 35 ಲಕ್ಷ ಜನ ತಂಬಾಕು ಉತ್ಪನ ಬಳಕೆ ತ್ಯಜಿಸಿದ್ದು, ಆ ಪೈಕಿ ಶೇ. 73.8ರಷ್ಟು ಜನರು ತಂಬಾಕು ಉತ್ಪನ್ನಗಳಾದ ಸಿಗರೇಟ್‌,ಬೀಡಿ, ಗುಟ್ಕಾ, ತಂಬಾಕು ಮಿಶ್ರಿತ ಅಡಿಕೆ ಪುಡಿ ಸೇರಿದಂತೆ ತಂಬಾಕು ಪದಾರ್ಥಗಳ ಪ್ಯಾಕೆಟ್‌ ಮೇಲೆ ಮುದ್ರಿಸಿರುವ ಕ್ಯಾನ್ಸರ್‌ ಚಿತ್ರಣ, ಹೃದಯ, ಶ್ವಾಸಕೋಶ, ದವಡೆ ಹಾಗೂ ಗಂಟಲಿಗೆ ಗಾಯವಾಗಿರುವ ಚಿತ್ರಗಳು ತಂಬಾಕು ಪದಾರ್ಥ‌ ಬಳಕೆಯಿಂದ ದೂರವಾಗಿರುವುದು ವರದಿಯಿಂದ ತಿಳಿದು ಬಂದಿದೆ.

ತಂಬಾಕು ರಹಿತ ಸಮಾಜಕ್ಕಾಗಿ “ವಾಕಥಾನ್‌’
ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಗುರುವಾರ (ಮೇ 31) ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಸಂಘಟನೆಗಳ ಸಹಕಾರದೊಂದಿಗೆ “ತಂಬಾಕು ಸೇವನೆ ಹೃದಯಕ್ಕೆ ಹಾನಿ’ ಘೋಷವಾಕ್ಯದ ಮೂಲಕ ತಂಬಾಕುರಹಿತ ಸಮಾಜಕ್ಕಾಗಿ ಬೆಂಗಳೂರಿನ ಆನಂದರಾವ್‌ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ವಾಕಥಾನ್‌ ಹಮ್ಮಿಕೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಹೃದ್ರೋಗ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು, ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸಲಿದ್ದಾರೆ.

Advertisement

ದೂರು ನೀಡಲು “ನೋ ಟೊಬ್ಯಾಕೋ’ ಆ್ಯಪ್‌
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು “ನೋ ಟೊಬ್ಯಾಕೋ’ ಆ್ಯಪ್‌ ಅಭಿವೃದಿಟಛಿಪಡಿಸಿದ್ದು, ಗುರುವಾರ ನಗರದ ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅವರು ಬಿಡುಗಡೆಗೊಳಿಸಲಿದ್ದಾರೆ ಎಂದು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಸಂಚಾಲಕ ಎಸ್‌.ಜೆ.ಚಂದನ್‌ ಮಾಹಿತಿ ನೀಡಿದರು.

10ಲಕ್ಷ ಸಹಿ ಸಂಗ್ರಹ ಅಭಿಯಾನ
ವಿಶ್ವ ತಂಬಾಕು ದಿನಾಚರಣೆಯ ಅಂಗವಾಗಿ ತಂಬಾಕು ಬಳಕೆಯ ದುಷ್ಟರಿಣಾಮಗಳ ಕುರಿತು ಮಕ್ಕಳುಹಾಗೂ ಯುವ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟವು ರಾಜ್ಯಾದ್ಯಂತ 10 ಲಕ್ಷ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ನಂತರ, ಮುಖ್ಯಮಂತ್ರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಒಕ್ಕೂಟ
ಯೋಜನೆ ರೂಪಿಸಿದೆ. ಅದರಂತೆ ಬೆಂಗಳೂರು, ಮೈಸೂರು, ಬಳ್ಳಾರಿ,ದಾವಣಗೆರೆ, ತುಮಕೂರು ಮತ್ತು
ಮಂಗಳೂರಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.

– ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next