Advertisement

ಮೂಡುಗಿಳಿಯಾರಿನಲ್ಲಿ 35 ಅಡಿ ವಿವೇಕಾನಂದ ಪ್ರತಿಮೆ

02:26 AM Jan 30, 2020 | mahesh |

ಕೋಟ: ಕೋಟದ ಮೂಡುಗಿಳಿಯಾರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಲಿಗ್ರಾಮ ಡಿವೈನ್‌ ಪಾರ್ಕ್‌ನ ಅಂಗ ಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧ ಪ್ರತಿಷ್ಠಾನದ ಯೋಗಬನದಲ್ಲಿ ಜಗತ್ತಿನ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಕಾಂಕ್ರೀಟ್‌ ಪ್ರತಿಮೆ ಸ್ಥಾಪನೆಗೊಂಡಿದ್ದು, ಗಿನ್ನೆಸ್‌ ದಾಖಲೆಯ ಪುಟ ಸೇರಲು ತಯಾರಾಗಿದೆ. ಪ್ರತಿಮೆ ಅನಾವರಣ ಫೆ. 1ರಂದು ನಡೆಯಲಿದೆ.

Advertisement

ರಾಂಚಿಯಲ್ಲಿರುವ ಸ್ವಾಮಿ ವಿವೇಕಾನಂದರ 32 ಅಡಿ ಎತ್ತರದ ಪ್ರತಿಮೆ ಇದುವರೆಗೆ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯಾಗಿ ಗುರುತಿಸಿಕೊಂಡಿತ್ತು. ಸಾಲಿಗ್ರಾಮ ಡಿವೈನ್‌ ಪಾರ್ಕ್‌ ಮತ್ತು ಮಲೇಶ್ಯದಲ್ಲಿರುವ ಪ್ರತಿಮೆ ಎರಡು ಮತ್ತು ಮೂರನೇ ಸ್ಥಾನದಲ್ಲಿತ್ತು.

ಕನ್ಯಾಕುಮಾರಿ ಶೈಲಿ
ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಪ್ರತಿಮೆಯಂತೆ ಈ ಶಿಲ್ಪವನ್ನು ರಚಿಸಲಾಗಿದೆ. ಮುಡೇìಶ್ವರದಲ್ಲಿನ ಅತೀ ಎತ್ತರದ ಶಿವನ ಪ್ರತಿಮೆ ಮತ್ತು ಗದಗದ ಅತೀ ಎತ್ತರದ ಬಸವನ ಪ್ರತಿಮೆಗಳನ್ನು ನಿರ್ಮಿಸಿದ ಬೆಂಗಳೂರಿನ ಶ್ರೀಧರ ಮೂರ್ತಿ ಅವರ ತಂಡ ಈ ಪ್ರತಿಮೆಯನ್ನು ರಚಿಸಿದೆ. ಮಳೆ, ಗಾಳಿ ಮುಂತಾದವುಗಳಿಂದ ರಕ್ಷಣೆ ನೀಡುವ ಸಲುವಾಗಿ ಮೂರ್ತಿಗೆ ಲೋಹದ ಲೇಪನವನ್ನು ಮಾಡಲಾಗಿದೆ. 40 ಮಂದಿ ಶಿಲ್ಪಿಗಳು ಆರು ತಿಂಗಳು ಕೆಲಸ ನಿರ್ವಹಿಸಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಧನಾತ್ಮಕತೆಗಾಗಿ
ಸ್ವಾಮಿ ವಿವೇಕಾನಂದ ತಣ್ತೀ, ಜೀವನ, ಸಂದೇಶವನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಡಿವೈನ್‌ಪಾರ್ಕ್‌ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೆ. ಹೀಗಾಗಿ ಸಂಸ್ಥೆಯ ಭಾಗವಾಗಿ ನಿರ್ಮಾಣಗೊಳ್ಳುತ್ತಿರುವ ಯೋಗಬನದಲ್ಲೂ ಜನರಿಗೆ ವಿವೇಕಾನಂದರ ಧನಾತ್ಮಕ ಚಿಂತನೆ, ಪ್ರಭಾವಗಳು ಬೀರಬೇಕು ಹಾಗೂ ಅವರು ಸಮಾಜಮುಖೀಯಾಗಿ ಜೀವನ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಕಟ್ಟಡದ ಶಕ್ತಿ ಪೀಠ, ಪ್ರಾಣಪೀಠದಲ್ಲಿ ಜಗತ್ತಿನ ಅತೀ ಎತ್ತರದ ವಿವೇಕಾನಂದ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.
– ಡಾ| ವಿವೇಕ ಉಡುಪ, ವೈದ್ಯಕೀಯ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next