Advertisement

Telangana ಪಕ್ಷಾಂತರ ಪರ್ವ; ಬಿಆರ್ ಎಸ್ ತೊರೆದು ಕೈ ಹಿಡಿದ ಹಲವರು

10:22 PM Jun 26, 2023 | Team Udayavani |

ಹೊಸದಿಲ್ಲಿ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ಪಕ್ಷಾಂತರ ಪರ್ವ ಜೋರಾಗುತ್ತಿದ್ದು, ಕರ್ನಾಟಕದಲ್ಲಿ ಭರ್ಜರಿ ಜಯ ಕಂಡಿರುವ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಬಿಆರ್ ಎಸ್ ಪಕ್ಷದ ಹಲವು ನಾಯಕರು ಮತ್ತು ಮುಖಂಡರನ್ನು ಸೋಮವಾರ ಪಕ್ಷಕ್ಕೆ ಸೇರಿಸಿಕೊಂಡಿದೆ.

Advertisement

ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರದ ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ಸೇರಿದಂತೆ 35 ಬಿಆರ್‌ಎಸ್ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಿದರು.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಭಾರತ್ ರಾಷ್ಟ್ರ ಸಮಿತಿ ಮುಖಂಡರು ಔಪಚಾರಿಕವಾಗಿ ಕಾಂಗ್ರೆಸ್ ಸೇರಿದರು. ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಆರು ಬಾರಿಯ ಮಾಜಿ ಶಾಸಕ ಗುರುನಾಥರೆಡ್ಡಿ, ಮಾಜಿ ಶಾಸಕ ಹಾಗೂ ಜಿಲ್ಲಾ ಪರಿಷತ್ ಅಧ್ಯಕ್ಷ ಕೋರಂ ಕನಕಯ್ಯ, ಮಾಜಿ ಶಾಸಕ ಪಾಯಂ ವೆಂಕಟೇಶ್ವರಲು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿಬಿ) ಮಾಜಿ ಅಧ್ಯಕ್ಷ ಮೂವಮೆಂಟ್ ವಿಜಯ ಬೇಬಿ, ಹಾಲಿ ಡಿಸಿಸಿಬಿ ಅಧ್ಯಕ್ಷ ತುಳ್ಳೂರಿ ಬ್ರಹ್ಮಯ್ಯ, ಎಸ್‌ಸಿ ನಿಗಮದ ಮಾಜಿ ಅಧ್ಯಕ್ಷ ಪಿಡಮರ್ತಿ ರವಿ, ಮಾರ್ಕ್‌ಫೆಡ್ ರಾಜ್ಯ ಉಪಾಧ್ಯಕ್ಷ ಬೊರ್ರಾ ರಾಜಶೇಖರ್ ಮತ್ತು ಪುರಸಭೆ ಅಧ್ಯಕ್ಷ ವಾರ್ಯ ಮತ್ತು ಮಂಡಲ ಪ್ರಜಾ ಪರಿಷತ್ ಅಧ್ಯಕ್ಷ ಎಸ್.ಜೈಪಾಲ್ ಮತ್ತು ಇತರ ಹಿರಿಯ ಬಿಆರ್‌ಎಸ್ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಇತರ ನಾಯಕರಲ್ಲಿ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next