Advertisement

35 ತಳಿ ಬಿಡುಗಡೆ; ಹವಾಮಾನ ವೈಪರೀತ್ಯ ತಡೆಯಬಲ್ಲವು

12:58 AM Sep 29, 2021 | Team Udayavani |

ಹೊಸದಿಲ್ಲಿ: ಪ್ರತಿಕೂಲ ಹವಾಮಾನ, ರೋಗಗಳನ್ನು ತಡೆದುಕೊಳ್ಳಬಲ್ಲ ಮತ್ತು ಅತ್ಯಧಿಕ ಪೌಷ್ಟಿಕಾಂಶವುಳ್ಳ 35 ಬೆಳೆಗಳ ತಳಿಗಳನ್ನು ಪ್ರಧಾನಿ ಮೋದಿ ಮಂಗಳವಾರ ದೇಶಕ್ಕೆ ಪರಿಚಯಿಸಿದ್ದಾರೆ.

Advertisement

ಹವಾಮಾನ ವೈಪರೀತ್ಯವು ಕೇವಲ ಕೃಷಿಗೆ ಮಾತ್ರವಲ್ಲ, ಜೀವವ್ಯವಸ್ಥೆಗೇ ಸವಾಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.

ದೇಶದ ಎಲ್ಲ ಐಸಿಎಆರ್‌ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರೀಯ ಕೃಷಿ ವಿ.ವಿ.ಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ಮೋದಿ ಈ ಹೊಸ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಆರೇಳು ವರ್ಷಗಳಲ್ಲಿ ಕೃಷಿ ಸಂಬಂಧಿ ಸವಾಲುಗಳನ್ನು ಪರಿಹರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆದ್ಯತೆಯಲ್ಲಿ ಬಳಸಲಾಗಿದೆ. ಹೊಸ ಪರಿಸ್ಥಿತಿಗೆ ಹೊಂದಾಣಿಕೆಯಾಗಬಲ್ಲ, ಹೆಚ್ಚಿನ ಪೌಷ್ಟಿಕಾಂಶಯುಕ್ತ ಬಿತ್ತನೆ ಬೀಜಗಳ ಮೇಲೆ ಹೆಚ್ಚಿನ ಗಮನ ನೆಟ್ಟಿದ್ದೇವೆ. ಹವಾಮಾನ ವೈಪರೀತ್ಯದಿಂದ ಕೃಷಿಯನ್ನು ಸಂರಕ್ಷಿಸಲು ಪ್ರಯತ್ನಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮೋದಿ ಅವರು ರಾಯ್‌ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಬಯೋಟಿಕ್‌ ಸ್ಟ್ರೆಸ್‌ ಟಾಲರೆನ್ಸ್‌ ಕ್ಯಾಂಪಸನ್ನೂ ಉದ್ಘಾಟಿಸಿದ್ದಾರೆ. ಜತೆಗೆ ವಿವಿಧ ಕೃಷಿ ವಿ.ವಿ.ಗಳಿಗೆ “ಹಸುರು ಕ್ಯಾಂಪಸ್‌ ಪ್ರಶಸ್ತಿ’ಯನ್ನು ಪ್ರದಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಇದ್ದರು.

Advertisement

ಏನಿದು ಹೊಸ ತಳಿ?
ಈ ತಳಿಗಳನ್ನು ಅಭಿವೃದ್ಧಿಪಡಿಸಿದ್ದು ಭಾರತೀಯ ಕೃಷಿ ಸಂಶೋಧನ ಮಂಡಳಿ (ಐಸಿಎಆರ್‌). ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸಲೆಂದು ಅಭಿವೃದ್ಧಿಪಡಿಸಲಾಗಿದೆ. ಯಾವುದೇ ರೀತಿಯ ಹವಾಮಾನ ಎದುರಿಸುವಂಥ ಮತ್ತು ಅಧಿಕ ಪೌಷ್ಟಿಕಾಂಶ ಹೊಂದಿರುವಂಥ ತಳಿಗಳು ಇವು.

ಇದನ್ನೂ ಓದಿ:ಭವಾನಿಪುರ ಸಮರಕ್ಕೆ ಕೋಲ್ಕತಾ ಹೈಕೋರ್ಟ್‌ ಒಪ್ಪಿಗೆ

ಪ್ರತಿರೋಧದ ಶಕ್ತಿ
ಈ ತಳಿಗಳು ಎಲ್ಲ ರೀತಿಯ ರೋಗಗಳಿಂದ, ಕ್ರಿಮಿಕೀಟಗಳಿಂದ, ಅತಿಯಾದ ತಾಪಮಾನ, ಬರಗಾಲ, ಲವಣಾಂಶ, ಪ್ರವಾಹದಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹವಾಮಾನದಲ್ಲಿ ಯಾವುದೇ ರೀತಿಯ ಬದಲಾವಣೆಯಾದರೂ ಈ 35 ಹೊಸ ತಳಿಯ ಬೆಳೆಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ.

ಇದನ್ನೂ ಓದಿ:

ಇಂಥ ಬೆಳೆಗಳು ಏಕೆ ಬೇಕು?
ಹವಾಮಾನ ವೈಪರೀತ್ಯದ ಪ್ರತಿಕೂಲ ಪರಿಣಾಮಗಳ ಕುರಿತು ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಒದಗಿಸಬೇಕಾದ ಅನಿವಾರ್ಯವಿದೆ. ಇದೇ ಕಾರಣಕ್ಕೆ ದೇಶದ ವಿಜ್ಞಾನಿಗಳು ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವಂಥ ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಯಾವ್ಯಾವ ತಳಿ, ಏನು ಸಾಮರ್ಥ್ಯ?
ಭತ್ತ

ರೋಗನಿರೋಧಕ ಸಾಮರ್ಥ್ಯ

ತೊಗರಿ
-ಬಾಡಿ ಹೋಗದು ಮತ್ತು
-ಶುಷ್ಕತೆ ತಡೆಯುವ ಸಾಮರ್ಥ್ಯ

ಸೋಯಾಬೀನ್‌
-ಬೇಗನೆ ಮಾಗುವಂಥ ಗುಣ

ಕಡಲೆ
ಬರಗಾಲವನ್ನು ಸಹಿಸಿಕೊಳ್ಳುವ ಶಕ್ತಿ

ಗೋಧಿ, ರಾಗಿ, ಮೆಕ್ಕೆಜೋಳ, ನವಣೆ, ಹುರುಳಿ, ಅವರೆ, ಬಟಾಣಿ
ಜೈವಿಕ ಪೌಷ್ಟಿಕಾಂಶಇರುವಂಥವು

Advertisement

Udayavani is now on Telegram. Click here to join our channel and stay updated with the latest news.

Next