Advertisement

“35 ಎ’ತಂಟೆಗೆ ಬಂದರೆ ಹುಷಾರ್‌: ಮುಫ್ತಿ ಬೆದರಿಕೆ

12:30 AM Feb 26, 2019 | |

ಹೊಸದಿಲ್ಲಿ: ಸಂವಿಧಾನದ “35- ಎ’ ಪರಿಚ್ಛೇದದ ತಂಟೆಗೆ ಕೇಂದ್ರ ಸರಕಾರ ಬಂದರೆ, ಜಮ್ಮು-ಕಾಶ್ಮೀರದ ಜನತೆ ಯಾವ ಧ್ವಜವನ್ನು ಹಿಡಿಯುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುಡುಗಿದ್ದಾರೆ.

Advertisement

ಶ್ರೀನಗರದಲ್ಲಿ ಸೋಮವಾರ ಸುದ್ದಿ, ಗೋಷ್ಠಿ ನಡೆಸಿದ ಅವರು, “”ಕೇಂದ್ರ ಸರಕಾರ ಬೆಂಕಿಯೊಡನೆ ಸರಸ ಆಡು ವುದನ್ನು ಬಿಡಬೇಕು. 35-ಎ ಪರಿಚ್ಛೇದ ತೆಗೆದುಹಾಕಲು ಪ್ರಯತ್ನಪಟ್ಟರೆ 1947 ರಿಂದ ಈವರೆಗೆ ಘಟಿಸದಂಥ ಘಟನೆಗಳು ನಡೆದುಹೋಗುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ. ಇದೇ ವಾರದಲ್ಲಿ 35-ಎ ಪರಿಚ್ಛೇದದ ಔಚಿತ್ಯದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ ವಾಗಲಿದ್ದು, ಅದಕ್ಕೂ ಮುನ್ನವೇ ಮುಫ್ತಿಯವರ ಈ ಹೇಳಿಕೆ ರಾಜಕೀ ಯವಾಗಿ ಮಹತ್ವ ಪಡೆದಿದೆ. “35 -ಎ’ ಪರಿಚ್ಛೇದವು, ಕಾಶ್ಮೀರ ರಾಜ್ಯ ಸರಕಾರಕ್ಕೆ ತನ್ನಲ್ಲಿನ ನಿವಾಸಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡುವುದು, ಅವರಿಗೆ ವಿಶೇಷ ಹಕ್ಕು- ಸವಲತ್ತುಗಳನ್ನು ಕಲ್ಪಿಸುವ ಅಧಿಕಾರ ನೀಡುತ್ತದೆ. ಇದರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ಮಾನದಲ್ಲಿ ಮೂಗು ತೂರಿಸಲು ಬಂದರೆ, ಗಂಭೀರ ಹಾಗೂ ದೀರ್ಘ‌ ಕಾಲಿಕ ಪರಿಣಾಮ ಎದುರಿಸ ಬೇಕಾಗುತ್ತದೆ. ಇದು  ಬೆದರಿಕೆಯಲ್ಲ. ನಿಮ್ಮನ್ನು ಎಚ್ಚರಿಸು ವುದು ನನ್ನ ಕರ್ತವ್ಯ. ಉಳಿದಿದ್ದು ನಿಮಗೆ ಬಿಟ್ಟಿದ್ದೇನೆ.
 ಒಮರ್‌ ಅಬ್ದುಲ್ಲಾ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next