Advertisement

ಆಫ್ರಿಕಾದ 344 ವರ್ಷ ವಯಸ್ಸಿನ ಆಮೆ ಸಾವು!

11:08 AM Oct 07, 2019 | sudhir |

ಲಾಗೋಸ್‌: ಆಮೆಗಳ ಸರಾಸರಿ ವಯಸ್ಸು 100 ವರ್ಷ. ಆದರೆ ಆಫ್ರಿಕಾ ಖಂಡದಲ್ಲಿ ಒಂದು ಆಮೆ 344 ವರ್ಷಗಳವರೆಗೆ ಬದುಕಿತ್ತು. ಇತ್ತೀಚೆಗಷ್ಟೇ ಈ ಆಮೆ ಕೊನೆಯುಸಿರೆಳೆಯಿತು ಎಂಬುದು ತಿಳಿದುಬಂದಿದೆ. ಈ ಆಮೆಗೆ ಅಲಗ್ಬಾ ಎಂದು ಹೆಸರಿ ಡಲಾಗಿದ್ದು, ದಕ್ಷಿಣ ನೈಜೀರಿಯಾದ ಅರಮನೆಯಲ್ಲಿತ್ತು.

Advertisement

ಇಲ್ಲಿನ ರಾಜ ಜಿಮೋಹ ಒಯೆವುನಿ¾ ಆಪ್ತ ಸಹಾಯಕರು ಆಮೆ ಸಾವನ್ನಪ್ಪಿದ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಈ ಆಮೆಯನ್ನು ನೋಡಲೆಂದೇ ವಿಶ್ವದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಆಮೆಯ ಯೋಗಕ್ಷೇಮ ನೋಡಿಕೊಳ್ಳಲು ಇಬ್ಬರು ಸಿಬಂದಿ ಯನ್ನೂ ಅರಮನೆ ನೇಮಿಸಿತ್ತು. ಆಮೆಯು ಅರಮನೆಗೆ ಐಶ್ವರ್ಯ ವನ್ನು ತರುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ.

ಅಷ್ಟೇ ಅಲ್ಲ, ಈ ಆಮೆ ರೋಗ ಗುಣಪಡಿಸುವ ಶಕ್ತಿಯನ್ನೂ ಹೊಂದಿತ್ತು ಎಂದು ಅರಮನೆಯ ನೌಕರರು ಹೇಳುತ್ತಾರೆ. ಹಲವರು ಈ ಆಮೆಯಿಂದಾಗಿ ಗುಣವಾ ಗಿದ್ದಾರಂತೆ. ಆದರೆ ಪ್ರಾಣಿ ತಜ್ಞರು ಈ ಆಮೆಯ ವಯಸ್ಸು 344 ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next