Advertisement

China: ಚೀನಾದಲ್ಲಿ 34,000 ಆನ್‌ಲೈನ್‌ ಖಾತೆಗಳು ರದ್ದು

09:14 PM Dec 23, 2023 | Team Udayavani |

ನವದೆಹಲಿ: ಸಮಾಜದಲ್ಲಿ ಸುಸ್ಥಿರ ವಾತಾವರಣ ಉಂಟು ಮಾಡಲು, ವದಂತಿಗಳ ಮೇಲೆ ಕಡಿವಾಣ ಹಾಕಲು ಚೀನಾಡಳಿತ ಬಲವಾದ ಕ್ರಮ ತೆಗೆದುಕೊಂಡಿದೆ. ಒಟ್ಟು 34,000 ಆನ್‌ಲೈನ್‌ ಖಾತೆಗಳನ್ನು ರದ್ದು ಮಾಡಿದೆ. ಈ ಸಂಬಂಧ 4,800 ಪ್ರಕರಣಗಳನ್ನು ದಾಖಲಿಸಲಾಗಿದೆ, ಒಟ್ಟು 6,300 ವ್ಯಕ್ತಿಗಳಿಗೆ ಶಿಕ್ಷೆ ನೀಡಲಾಗಿದೆ. ಚೀನಾದ ಸಾರ್ವಜನಿಕ ಭದ್ರತಾ ಸಚಿವ ಲಿ ತಾಂಗ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಪೂರ್ಣ ಆನ್‌ಲೈನ್‌ ವದಂತಿಗಳಿಗೆ ಕಡಿವಾಣ ಹಾಕಲು ಕಾರ್ಯಾಚರಣೆ ನಡೆಸಲಾಗುತ್ತದೆ.

Advertisement

ಹಲವಾರು ದಾರಿಗಳ ಮೂಲಕ ಈ ಕಾರ್ಯಾಚರಣೆ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಚೀನಾದಲ್ಲಿ ಕೊರೊನಾ ಹೆಚ್ಚಾದ ನಂತರ ವದಂತಿಗಳ ಪ್ರಮಾಣವೂ ಜಾಸ್ತಿಯಾಗಿದೆ. ಎಂದಿನಂತೆ ವ್ಯಕ್ತಿಗಳಿಗೆ ಅವಮಾನ ಮಾಡುವುದು, ಅವರ ಖಾಸಗಿ ವಿಚಾರ ಬಹಿರಂಗಗೊಳಿಸುವುದೂ ನಡೆಯುತ್ತಿದೆ. ಇವೆಲ್ಲವನ್ನೂ ಚೀನಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next