ಚಿಕ್ಕಬಳ್ಳಾಪುರ: ಗ್ರಾಪಂ ಚುನಾವಣೆಗೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ತುದಿ ಗಾಲಿನಲ್ಲಿ ನಿಂತಿರುವ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ತಾಲೂಕು ಕಚೇರಿಗೆ ಮೊರೆ ಹೋಗಿದ್ದಾರೆ.
ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಯಾವ ದಾಖಲೆ ಸಲ್ಲಿಸಬೇಕೆಂದುಖಾತ್ರಿ ಮಾಡಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಚುನಾವಣಾ ಶಾಖೆಗಳಿಗೆ ಭೇಟಿ ನೀಡಿಕಾರ್ಯನಿರ್ವಹಿಸುವಅಧಿಕಾರಿ,ಸಿಬ್ಬಂದಿಗಳಿಂದ ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ. ಆಕಾಂಕ್ಷಿಗಳ ಉತ್ಸಾಹ ಹಿನ್ನೆಲೆಯಲ್ಲಿ ಚುನಾವಣಾ ಶಾಖೆ ಸಿಬ್ಬಂದಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಯಾವ ದಾಖಲೆ ಸಲ್ಲಿಸಬೇಕೆಂಬ ಮಾಹಿತಿಒಳಗೊಂಡ ಆದೇಶದ ಪ್ರತಿಯನ್ನುಕಚೇರಿಯಲ್ಲಿ ಅಂಟಿಸಿದ್ದಾರೆ.
ಜಾತಿ-ಆದಾಯ ಪ್ರಮಾಣ ಪತ್ರಕ್ಕಾಗಿ ಏಕಕಾಲಕ್ಕೆ ಹಲವರು ಅರ್ಜಿ ಸಲ್ಲಿಸಿರುವುದರಿಂದ ಅಟಲ್ ಜನ ಸ್ನೇಹಿಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಒತ್ತಡದಲ್ಲಿಸಿಲುಕುವಂತಾಗಿದೆ. ಜಾತಿ, ಆದಾಯ ಪ್ರಮಾಣ ಪತ್ರದ ಕೈಬರಹದ ಜಾತಿ ಪ್ರಮಾಣ ಪತ್ರಲಗತ್ತಿಸುವ ವಿಚಾರದಲ್ಲಿ ಅಪಸ್ವರ ಕೇಳಿಬಂದಿದೆ. ಕಂದಾಯ ಇಲಾಖೆವತಿಯಿಂದ ಒಮ್ಮೆ ಜಾತಿ, ಆದಾಯಪ್ರಮಾಣ ಪಡೆದುಕೊಂಡ ಬಳಿಕ ಮತ್ತೂಮ್ಮೆ ಕೈಬರಹದ ಜಾತಿ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯ ಏನಿದೆ ಎಂಬಪ್ರಶ್ನೆ ಕೇಳಿ ಬಂದಿದೆ. ಇದೇ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಲ್ಲಿಗೊಂದಲ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.
34 ನಾಮಪತ್ರಗಳು ಸಲ್ಲಿಕೆ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಗೆ ಬಿಸಿಯೇರಿದ್ದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ವಾಗಿವೆ. ಜಿಲ್ಲೆಯ 3 ತಾಲೂಕುಗಳಲ್ಲಿ ಒಟ್ಟು34 ನಾಮಪತ್ರ ಸಲ್ಲಿಕೆಯಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ24 ಗ್ರಾಪಂನ 374 ಸ್ಥಾನಗಳಿಗೆ ಒಟ್ಟು 09 ನಾಮಪತ್ರ ಸಲ್ಲಿಕೆಯಾಗಿವೆ. ಬಾಗೇಪಲ್ಲಿ ತಾಲೂಕಿ ನಲ್ಲಿ 25 ಗ್ರಾಪಂಗಳ 402 ಸ್ಥಾನಗಳಿಗೆ 17 ನಾಮಪತ್ರ, ಚಿಂತಾಮಣಿ 35 ಗ್ರಾಪಂಗಳ 572 ಸ್ಥಾನಕ್ಕೆ 8 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನಲ್ಲಿ ಪರಿಶಿಷ್ಟ ಜಾತಿ 3, ಪಂಗಡ01, ಸಾಮಾನ್ಯ ವರ್ಗ 05 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಬಾಗೇಪಲ್ಲಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ 05, ಬಿಸಿಎಂ(ಎ)01ಹಾಗೂ ಸಾಮಾನ್ಯ ವರ್ಗದ11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಸಾಮಾನ್ಯ ವರ್ಗದ ಮೂರು ಮಹಿಳೆಯರು ಸೇರಿ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮಳ್ಳೂರು ಗ್ರಾಪಂ ಮುತ್ತೂರು 1 ಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದಎಂ.ಎನ್.ಶ್ರೀನಿವಾಸಮೂರ್ತಿ,ಎಂ.ಮಂಜುನಾಥ್, ಪರಿಶಿಷ್ಟ ಜಾತಿಮೀಸಲು ಕ್ಷೇತ್ರದಿಂದ ನಾರಾಯಣಸ್ವಾಮಿ, 2ನೇ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ಎಂ.ಕೆ.ರೆಡ್ಡಿ, ಮಳ್ಳೂರು- 01ಕ್ಷೇತ್ರದಿಂದ ಪರಿಶಿಷ್ಟ ಜಾತಿ ಮಹಿಳಾಮೀಸಲು ಕ್ಷೇತ್ರದಿಂದ ಮುನಿರತ್ನಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ದಿನೇಶ್ ತಿಳಿಸಿದ್ದಾರೆ.