Advertisement
ನಗರದಲ್ಲಿ ನಡೆಯುತ್ತಿರುವ ದಲಿತ ಸಾಹಿತ್ಯ ಸಮ್ಮೇ ಳನದಲ್ಲಿ ಭಾಗವಹಿಸಲು ಆಗಮಿಸಿರುವ ಅವರು, ಕಸಾಪ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಸಾಪದ ಮುಂದಿನ ಯೋಜನೆಗಳ ಕುರಿತಂತೆ ವಿವರಿಸಿದರು.
Related Articles
Advertisement
ಸದ್ಯಕ್ಕೆ ಸದಸ್ಯತ್ವಕ್ಕೆ ಆದ್ಯತೆ ಇಲ್ಲ: ಕನ್ನಡ ಸಾಹಿತ್ಯ ಪರಿಷತ್‌ಗೆ ಪ್ರಸ್ತುತ 3.26 ಲಕ್ಷ ಅಜೀವ ಸದಸ್ಯರಿದ್ದು, ಸದ್ಯಕ್ಕೆ ಸದಸ್ಯತ್ವ ಅಭಿಯಾನ ನಡೆಸುವ ಉದ್ದೇಶ ಕಸಾಪಕ್ಕೆ ಇಲ್ಲ. ಏಕೆಂದರೆ, ಕನ್ನಡಕ್ಕಾಗಿ ಮಾಡಬೇಕಾದ ಮಹತ್ವದ ಕೆಲಸಗಳು ಹೆಚ್ಚಾಗಿವೆ. ಕನ್ನಡ ಶಾಸ್ತ್ರೀಯ ಸ್ಥಾನ ಮಾನ ಕಲ್ಪಿಸುವ, ಕನ್ನಡ ತಂತ್ರಾಂಶ ಅಭಿವೃದ್ಧಿ ಪಡಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ನೂತನ ಬೈಲಾ ಅನುಷ್ಠಾನ: ಕಸಾಪ ನೂತನ ಬೈಲಾ ಪ್ರಕಾರ ಮಹಿಳಾ ಮತ್ತು ಪರಿಶಿಷ್ಟ ಸದಸ್ಯರ ಪ್ರಾತಿ ನಿಧಿತ್ವವನ್ನು ಒಂದು ಸದಸ್ಯರಿಂದ ಎರಡು ಸದಸ್ಯ ಸ್ಥಾನಗಳಿಗೆ ಹೆಚ್ಚಿಸಲಾಗಿದ್ದು, ಹೊಸದಾಗಿ ಪರಿಶಿಷ್ಟ ಪಂಗಡ ಸದಸ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಹೊಸ ಬೈಲಾ ಪ್ರಕಾರವೇ ಈಗಾಗಲೇ ಪರಿಷತ್‌ನ ಎಲ್ಲಾ ಘಟಕಗಳಿಗೆ ಹೊಸ ಸದಸ್ಯರ ಸೇರ್ಪಡೆಯಾಗಿದೆ. ರಾಜ್ಯಸಮಿತಿಗೆ ನೇಮಕಗೊಂಡಿರುವ ಮಹಿಳಾ ಸದಸ್ಯೆ ಡಾ.ಎಸ್.ಪಿ.ಉಮಾದೇವಿ, ಪರಿಶಿಷ್ಟ ಪಂಗಡದ ಸದಸ್ಯ ಡಾ.ನೀಲಗಿರಿ ತಳವಾರ್ ಮತ್ತು ಪರಿಶಿಷ್ಟ ಜಾತಿಯ ಸದಸ್ಯ ಮೇಘಣ್ಣನವರ್ ಅವರನ್ನು ಕೋಲಾರದ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ರೆಂದರು.
ನೆರೆ ಪರಿಹಾರ: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ನೆರೆ ಏರ್ಪಟ್ಟು ಅಪಾರ ಹಾನಿಯಾಗಿರು ವುದರಿಂದ ಕಸಾಪ ಪರಿಷತ್ ನಿಧಿಯಿಂದ 30 ಲಕ್ಷ ರೂ., ಪದಾಧಿಕಾರಿಗಳು ಹಾಗೂ ನೌಕರರ ವೇತನದ 4 ಲಕ್ಷ ರೂ. ಅನ್ನು ಸೇರಿಸಿ 34 ಲಕ್ಷ ರೂ. ಮುಖ್ಯ ಮಂತ್ರಿಗಳ ನೆರೆ ಸಂತ್ರಸ್ತ ನಿಧಿಗೆ ನೀಡಲು ನಿರ್ಧರಿಸಲಾಯಿತು ಎಂದು ಹೇಳಿದರು.
ದಲಿತ ಸಂಪುಟಗಳ ಅರ್ಧ ಬೆಲೆಗೆ ಮಾರಾಟ: ಕೋಲಾರದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ದಲಿತ ಸಾಹಿತ್ಯ ಸಮಗ್ರ ಐದು ಸಂಪುಟಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದ್ದು, ಪ್ರತಿಗಳು ಇರುವವರೆಗೂ ಈ ರಿಯಾಯಿತಿ ದರದ ಮಾರಾಟ ಇರುತ್ತದೆಯೆಂದು ಹೇಳಿದರು.
ಹಾಲಿ ವಿದೇಶ ಮತ್ತು ನೆರೆ ರಾಜ್ಯಗಳಲ್ಲಿ ಪರಿಷತ್ತಿನ ಹೊಸ ಘಟಕಗಳನ್ನು ಆರಂಭಿಸಬೇಕಾದರೆ 500 ಸದಸ್ಯರು ಕಡ್ಡಾಯವೆಂಬ ನಿಯಮವಿತ್ತು, ಆದರೆ, ಇಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದನ್ನು 250 ಕ್ಕೆ ಇಳಿಸಲು ತೀರ್ಮಾನಿಸಲಾಗಿದೆಯೆಂದರು.
ಸಾಮಾಜಿಕ ನ್ಯಾಯ: ಕನ್ನಡ ಸಾಹಿತ್ಯ ಪರಿಷತ್‌ನ ಪ್ರಥಮ ದಲಿತಸಾಹಿತ್ಯ ಸಮ್ಮೇಳನವನ್ನು ಮುಂದಿನ ವರ್ಷ ಎಲ್ಲಿ ನಡೆಸಲಾಗುವುದು ಎಂಬ ಕುರಿತು ಪ್ರಶ್ನೆಗಳು ಎದ್ದಿದ್ದು, ತಮ್ಮ ಅವಧಿ ಇರುವವರೆವಿಗೂ ಇದನ್ನು ಮುಂದುವರೆಸಿಕೊಂಡು ಹೋಗಲಾಗು ವುದು. ಮುಂದೆ ಯಾರೇ ಬಂದರೂ ಅವರು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನಿರ್ಣಯ ಮಾಡಲಾಗುವುದು ಎಂದು ಅವರು ಹೇಳಿದರು.
ತಾವು ಕಸಾಪಕ್ಕೆ ಅಧ್ಯಕ್ಷರಾದ ನಂತರ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆಯೆಂದು ಅವರು ವಿವರಿಸಿದರು.
ಕೃತಜ್ಞತೆ: ಕೋಲಾರ ನಗರದಲ್ಲಿ ಅಚ್ಚುಕಟ್ಟಾಗಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಸಹಕರಿಸಿದ ಜಿಲ್ಲಾಡಳಿತ, ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷ ನಾಗನಂದ ಕೆಂಪರಾಜ್ ಮತ್ತವರ ತಂಡ, ಜಿಲ್ಲಾಡಳಿತದ ಅಧಿಕಾರಿಗಳಿಗೆ ಅವರು ಕೃತಜ್ಞತೆಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಕಸಾಪ ಸದಸ್ಯರಾದ ಡಾ.ಸಂತೋಷ್ ಹಾನಗಲ್, ವ.ಚ.ಚನ್ನೇಗೌಡ, ರಾಜಶೇಖರ ಹತಗುಂದಿ, ಲಿಂಗರಾಜು ಅಂಗಡಿ, ಲಿಂಗಯ್ಯ ಹಿರೇಮs್ ಹಾಜರಿದ್ದರು.
● ಕೆ.ಎಸ್.ಗಣೇಶ್