Advertisement

ಪಾಕ್ ಜಲಗಡಿಯಲ್ಲಿ ಮೀನುಗಾರಿಕೆ; 34 ಭಾರತೀಯ ಮೀನುಗಾರರ ಬಂಧನ

09:50 AM May 09, 2019 | Nagendra Trasi |

ಕರಾಚಿ: ದೇಶದ ಜಲಗಡಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 34 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಕರಾವಳಿ ಭದ್ರತಾ ಪಡೆ ಏಜೆನ್ಸಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಂಗಳವಾರ ಜಲಗಡಿ ದಾಟಿ ಒಳಬಂದಿದ್ದ 34 ಮೀನುಗಾರರು ಹಾಗೂ ಆರು ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಕ್ ಕರಾವಳಿ ಭದ್ರತಾ ಪಡೆ ವಕ್ತಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಮೀನುಗಾರರನ್ನು ಸ್ಥಳೀಯ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅವರನ್ನು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಿದ್ದು, ಅಲ್ಲಿ ನ್ಯಾಯಾಂಗ ಬಂಧನದ ಬಗ್ಗೆ ನಿರ್ಧಾರವಾಗಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next