Advertisement

ಉಡುಪಿ ಜಿಲ್ಲೆ: 34 ಜನರಿಗೆ ಪಾಸಿಟಿವ್‌ ; ಜಿಲ್ಲೆಯ ವಿವಿಧೆಡೆ ಕೋವಿಡ್ ಕಾಟ

01:30 AM Jul 11, 2020 | Hari Prasad |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 673 ಜನರಿಗೆ ನೆಗೆಟಿವ್‌ ಮತ್ತು 34 ಜನರಿಗೆ ಪಾಸಿಟಿವ್‌ ಪ್ರಕರಣ ವರದಿಯಾಗಿದೆ.

Advertisement

34 ಜನರಲ್ಲಿ ಬ್ರಹ್ಮಾವರ, ಕಾರ್ಕಳ, ಉಡುಪಿ ತಾಲೂಕಿನವರು ತಲಾ ನಾಲ್ವರು, ಕಾಪುವಿನವರು ಐವರು, ಕುಂದಾಪುರದವರು ಆರು, ಬೈಂದೂರಿನವರು 11 ಮಂದಿ ಇದ್ದಾರೆ.

22 ಪುರುಷರು, 10 ಮಹಿಳೆಯರು, ಒಂದು ಗಂಡು ಮಗು, ಒಂದು ಹೆಣ್ಣು ಮಗುವಿದೆ. ದುಬಾೖಯಿಂದ ಬಂದವರು ಇಬ್ಬರು, ಕುವೈಟ್‌ನಿಂದ ಒಬ್ಬರು, ಬೆಂಗಳೂರಿನಿಂದ ಇಬ್ಬರು, ಮುಂಬಯಿಯಿಂದ ಬಂದವರು ಮೂವರು ಇದ್ದಾರೆ.

ಶುಕ್ರವಾರ 698 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 2,424 ಜನರ ವರದಿಗಳು ಬರಬೇಕಾಗಿದೆ. ಸದ್ಯ 250 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಏಳು ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,261 ಮಂದಿ ಮನೆಗಳಲ್ಲಿ ಮತ್ತು 141 ಜನರು ಆಸ್ಪತ್ರೆಗಳ ಐಸೊಲೇಶನ್‌ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಉಡುಪಿ ತಾಲೂಕಿನಲ್ಲಿ ಪಾಸಿಟಿವ್‌ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಹಲವೆಡೆ ಸೀಲ್‌ಡೌನ್‌ ಮಾಡಲಾಗಿದೆ. ಬೊಮ್ಮರಬೆಟ್ಟಿನಲ್ಲಿ ಎರಡು, ಉದ್ಯಾವರ, 41 ಶಿರೂರು, 80 ಬಡಗಬೆಟ್ಟು, ಪೆರ್ಣಂಕಿಲ, ಕಡೆಕಾರಿನಲ್ಲಿ ತಲಾ ಒಂದೊಂದು ಮನೆ, ಆದಿಉಡುಪಿಯಲ್ಲಿ ಹಣ್ಣು, ತರಕಾರಿ ಅಂಗಡಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ಕೋಟ: ಹೊಟೇಲ್‌, ಬ್ಯಾಂಕ್‌ ನೌಕರರಿಗೆ ಸೋಂಕು
ಕೋಟ ಹೋಬಳಿಯ ಸಾಲಿಗ್ರಾಮ-ಚಿತ್ರಪಾಡಿಯ ಹೊಟೇಲ್‌ವೊಂದರ ಇಬ್ಬರು ನೌಕರರಿಗೆ ಹಾಗೂ ಸಹಕಾರಿ ಬ್ಯಾಂಕ್‌ನ ಗಿಳಿಯಾರು ಶಾಖೆಯಲ್ಲಿ ಸೇವೆ ಸಲ್ಲಿಸುವ ಓರ್ವ ನೌಕರನಿಗೆ ಪಾಸಿಟಿವ್‌ ಇರುವುದು ದೃಢಪಟ್ಟಿದೆ.

ಮೂವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೊಟೇಲ್‌ ಹಾಗೂ ನೌಕರ ವಾಸವಿದ್ದ ಹಂದಟ್ಟಿನ ಮನೆ ಮತ್ತು ಸಹಕಾರಿ ಬ್ಯಾಂಕ್‌ ನೌಕರ ವಾಸಿಸುತ್ತಿದ್ದ ಸಾಸ್ತಾನ ಸಮೀಪದ ಮೂಡುಹಡುವಿನ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಹೊಟೇಲ್‌ ಹಾಗೂ ಸಹಕಾರಿ ಬ್ಯಾಂಕ್‌ನ ಶಾಖೆಯಲ್ಲಿ ನೂರಾರು ಮಂದಿ ವ್ಯವಹಾರ ನಡೆಸಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಪಿತ್ರೋಡಿ: ವೃದ್ಧರಿಗೆ ಸೋಂಕು
ಉದ್ಯಾವರದ 65ರ ಹರೆಯದ ವೃದ್ಧರೋರ್ವರಿಗೆ ಕೋವಿಡ್ 19 ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ  ಪಿತ್ರೋಡಿಯಲ್ಲಿನ ಅವರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಮುಂಡ್ಕೂರು: ಮೂವರಿಗೆ ಸೋಂಕು
ಮುಂಡ್ಕೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಮುಂಬಯಿಯಿಂದ ಬಂದಿದ್ದ ಸಚ್ಚೇರಿಪೇಟೆಯ 1 ವರ್ಷದ ಮಗು, ಮುಂಡ್ಕೂರು ರಾಜ ಮುಗುಳಿಯ ವ್ಯಕ್ತಿ ಹಾಗೂ ಮುಲ್ಲಡ್ಕದ 9ರ ಹರೆಯದ ಮಗುವಿಗೆ ಸೋಂಕು ದೃಢಪಟ್ಟಿದೆ.

ಗಂಗೊಳ್ಳಿ: ಓರ್ವರಿಗೆ ಪಾಸಿಟಿವ್‌
ಗಂಗೊಳ್ಳಿಮೂಲದ ಸದ್ಯ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 40 ವರ್ಷದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಪಾಸಿಟಿವ್‌ ಇರುವುದು ದೃಢವಾಗಿದೆ.

ಮಹಿಳೆಗೆ ಸೋಂಕು
ಕೋವಿಡ್ 19 ಪಾಸಿಟಿವ್‌ ಬಂದಿದ್ದ ಸಿದ್ದಾಪುರ ಗ್ರಾಮದ ಹೆನ್ನಾಬೈಲು ಯುವಕನ ಪ್ರಾಥಮಿಕ ಸಂಪರ್ಕದಲ್ಲಿದ್ದ 50 ವರ್ಷದ ತಾಯಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.

ಶಿರೂರು: ಬ್ಯಾಂಕ್‌ ಮ್ಯಾನೇಜರ್‌ ಸಹಿತ ನಾಲ್ವರಿಗೆ ಪಾಸಿಟವ್‌
ಇಲ್ಲಿನ ಸಿಂಡಿಕೇಟ್‌ ಬ್ಯಾಂಕ್‌ ಮ್ಯಾನೇಜರ್‌ ಸಹಿತ ನಾಲ್ವರಿಗೆ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಿದೆ. ಸಿಂಡಿಕೇಟ್‌ ಬ್ಯಾಂಕನ್ನು ಸೀಲ್‌ಡೌನ್‌ ಮಾಡಲಾಗಿದ್ದು ಎಲ್ಲ ಸಿಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next