Advertisement

ರವಿ ಪೂಜಾರಿ ವಿರುದ್ಧ ಮಂಗಳೂರಿನಲ್ಲಿ 34 ಕೇಸ್‌

10:20 AM Feb 26, 2020 | sudhir |

ಮಂಗಳೂರು: ಪೊಲೀಸರು ಬಂಧಿಸಿರುವ ಪಾತಕಿ ರವಿ ಪೂಜಾರಿ ವಿರುದ್ಧ 2007ರಿಂದ ತೊಡಗಿ 2018ರ ತನಕ ಮಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಹಫ್ತಾಕ್ಕಾಗಿ ಮಾಡಿದ ಬೆದರಿಕೆ ಕರೆಗಳೇ ಅಧಿಕ!

Advertisement

ಒಂದು ಕೊಲೆ ಪ್ರಕರಣ, ಮೂರು ಶೂಟೌಟ್‌ ಪ್ರಕರಣಗಳು, ಒಂದು ಅಪಹರಣ, ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿದ ಒಂದು ಪ್ರಕರಣ ಹಾಗೂ 28 ಬೆದರಿಕೆ ಪ್ರಕರಣಗಳಾಗಿರುತ್ತವೆ.

ಒಟ್ಟು 28 ಬೆದರಿಕೆ ಕರೆಗಳ ಪೈಕಿ 17 ಪ್ರಕರಣಗಳಲ್ಲಿ ಪೊಲೀಸರು “ಸಿ’ ರಿಪೋರ್ಟ್‌ ಹಾಗೂ ಒಂದು ಪ್ರಕರಣದಲ್ಲಿ “ಬಿ’ ರಿಪೋರ್ಟ್‌ ಸಲ್ಲಿಸಿದ್ದಾರೆ. 10 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ.

ಕೊಲೆ ಪ್ರಕರಣ
ವಕೀಲ ನೌಶಾದ್‌ ಕಾಶಿಮ್‌ಜಿ ಕೊಲೆಯನ್ನು (2009) ಈತ ನಡೆಸಿದ್ದು, ರವಿ ಪೂಜಾರಿಗೆ ನ್ಯಾಯಾಲಯದಿಂದ ಇದಕ್ಕೆ ಸಂಬಂಧಿಸಿ ಶಿಕ್ಷೆ ಆಗಿದೆ. ಆದರೆ ಆತ ಇದುವರೆಗೆ ಪತ್ತೆ ಆಗಿರಲಿಲ್ಲ.

ಶೂಟೌಟ್‌ ಪ್ರಕರಣಗಳು: ಹಫ್ತಾ ಹಣ ನೀಡಲು ನಿರಾಕರಿಸಿದ ಆರೋಪದ ಮೇಲೆ ಬಿಲ್ಡರ್ಗೆ (ಕದ್ರಿ ಠಾಣೆ-2008), ಕೂಳೂರಿನ ಶಿಪಿಂಗ್‌ ಕಂಪೆನಿ (ಕಾವೂರು ಠಾಣೆ- 2008), ಬಿಜೈಯ ಬಿಲ್ಡರ್ (ಉರ್ವ ಠಾಣೆ- 2014) ಒಬ್ಬರ ಮೇಲೆ ಶೂಟೌಟ್‌ ನಡೆಸಿದ್ದನು.

Advertisement

ವಿಚಾರಣೆ ಹಂತದಲ್ಲಿ 10 ಬೆದರಿಕೆ ಕರೆಗಳು
ಉದ್ಯಮಿಗಳಿಗೆ ಬೆದರಿಕೆ ಕರೆ ಸಂಬಂಧ ಬರ್ಕೆ ಠಾಣೆ- 2010, ಉರ್ವ ಠಾಣೆ- 2013, ಬರ್ಕೆ ಠಾಣೆ-2013, ಮೂಡುಬಿದಿರೆ ಠಾಣೆ- 2013, ಬರ್ಕೆ ಠಾಣೆ-2014, ಕಾವೂರು ಠಾಣೆ-2014, ಕದ್ರಿ ಠಾಣೆ- 2018, ಕದ್ರಿ ಠಾಣೆ- 2018, ಬರ್ಕೆ ಠಾಣೆ-2018, ಕೊಣಾಜೆ ಠಾಣೆ- 2018ರಲ್ಲಿ ಪ್ರಕರಣ ದಾಖಲಾಗಿತ್ತು.

ಅಪಹರಣ, ಜೈಲಿನಲ್ಲಿದ್ದ ಸಹಚರರಿಗೆ ಹಣಕಾಸು
ಕಿನ್ನಿಗೋಳಿಯ ಉದ್ಯಮಿಗೆ ಬೆದರಿಕೆ ಮತ್ತು ಅಪಹರಣ ಸಂಬಂಧ ಮೂಲ್ಕಿ ಠಾಣೆ-2012ರಲ್ಲಿ ಹಾಗೂ ಜೈಲಿನಲ್ಲಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. 17 ಪ್ರಕರಣಗಳಲ್ಲಿ “ಸಿ’ ರಿಪೋರ್ಟ್‌ ಹಾಗೂ ಒಂದು ಪ್ರಕರಣದಲ್ಲಿ “ಬಿ’ ರಿಪೋರ್ಟ್‌ ಸಲ್ಲಿಕೆಯಾಗಿದೆ.

“ಸಿ’ ರಿಪೋರ್ಟ್‌ ಪ್ರಕರಣಗಳು
ಬಂದರು ಹಾಗೂ ಕದ್ರಿ ಪೊಲೀಸ್‌ ಠಾಣೆಯಲ್ಲಿಯಲ್ಲಿ ರವಿ ಪೂಜಾರಿ ಬೆದರಿಕೆ ಹಾಕಿದ್ದ 2007, 2008, 2012, 2013 ಮತ್ತು 2015, 2016ರಲ್ಲಿ ದಾಖಲಾಗಿದ್ದ ಒಟ್ಟು 17 ಪ್ರಕರಣಗಳಲ್ಲಿ ಪೊಲೀಸರು “ಸಿ’ ರಿಪೋರ್ಟ್‌ ಸಲ್ಲಿಸಿದ್ದಾರೆ.

ಬಿ ರಿಪೋರ್ಟ್‌ ಸಲ್ಲಿಸಿದ ಪ್ರಕರಣ
ಬರ್ಕೆ ಠಾಣೆಯಲ್ಲಿ 2011ರಲ್ಲಿ ಉದ್ಯಮಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ “ಬಿ’ ರಿಪೋರ್ಟ್‌ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next