ತಿರುವನಂತಪುರಂ: ಸುಪ್ರೀ ಕೋರ್ಟ್‌ನ ತೀರ್ಪಿನ ಬಳಿಕ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಿದ್ದ 3,345 ಮಂದಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಅಕ್ಟೋಬರ್ 26 ರಿಂದ 517 ಪ್ರಕರಣಗಳನ್ನು ಕೇರಳದ ವಿವಿಧ ಠಾಣೆಗಳಲ್ಲಿ ದಾಖಲಿಸಲಾಗಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಶಬರಿಮಲೆ ತಂತ್ರಿ ಕುಟುಂಬದ ಸದಸ್ಯ ಮತ್ತು ಹೋರಾಟಗಾರ ರಾಹುಲ್ ಈಶ್ವರ್ ಅವರನ್ನು ಕೊಚ್ಚಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ರಾಹುಲ್ ಅವರನ್ನು ಬಂಧಿಸಲಾಗಿದೆ.
ದೇಗುಲದ ಎದುರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ದೇಗುಲದೊಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸದಂತೆ ತಡೆದಿದ್ದರು.