Advertisement
ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವ 33 ಚಿಲ್ಲರೆ ಅಂಗಡಿಗಳ ಪರವಾನಗಿ ರದ್ದು ಪಡಿಸುವಂತೆ ಸಂಬಂಧಿಸಿದ ಗ್ರಾಪಂಗಳಿಗೆ ಸೋಮವಾರ ಇಒ ಕೃಷ್ಣಕುಮಾರ್ ಆದೇಶಿಸಿದ್ದಾರೆ.
ಬಿಳಿಕೆರೆ ಹೋಬಳಿ: ಬಿಳಿಕೆರೆ ಗ್ರಾಮದ ವಸಂತ, ಧರ್ಮಾಪುರದ ಸಂತೋಷ್, ಎಸ್.ಕೆ.ಕೋಡಿಯ ದೇವರಾಜ, ಚಲ್ಲಹಳ್ಳಿಯ ಗೋಪಾಲ, ತೆಂಕಲಕೊಪ್ಪಲಿನ ಮಹೇಶ, ಕುಪ್ಪೆ ಸುಧಾ, ಗಾಗೇನಹಳ್ಳಿಯ ಚಿಕ್ಕೇಗೌಡ ಹಾಗೂ ಸುಬ್ರಮಣ್ಯ, ಹೊಸರಾಮೇನಹಳ್ಳಿ ಕುನ್ನೇಗೌಡ, ಬಿಳಿಕರೆ ಸಂತೆಮಾಳದ ವನಜಾಕ್ಷಿ. ಹನಗೋಡು ಹೋಬಳಿ: ಹನಗೋಡಿನ ಜನತಾ ಸೆಟಿನ ಎಸ್.ಮಧು, ಕಾಳಬೂಚನಹಳ್ಳಿಯ ಹುಚ್ಚೇಗೌಡ, ಉಡುವೆಪುರದ ಆಶಾ, ಹರಳಹಳ್ಳಿಯ ನರಸಿಂಹಶೆಟ್ಟಿ, ನಿಲುವಾಗಿಲಿನ ಮಹದೇವ, ಹಿಂಡಗುಡ್ಲಿನ ಆನಂದ, ಮುತ್ತುರಾಯನ ಹೊಸಹಳ್ಳಿಯ ಶಾಂತಶೆಟ್ಟಿ, ಹೊನ್ನೇನಹಳ್ಳಿಯ ಶಾರದಮ್ಮ, ಚಿಲ್ಕುಂದದ ಜವನಿಕುಪ್ಪೆ ಗೇಟ್‌ಬಳಿಯ ಮಲ್ಲೇಶ್, ಹಬ್ಬನಕುಪ್ಪೆ ಶಶಿಕುಮಾರ್, ಕಣಗಾಲು ಗ್ರಾಮದ ರಾಜನಾಯ್ಕ, ಹಳೇವಾರಂಚಿಯ ಲೋಕೇಶ, ತಿಪ್ಪಲಾಪುರದ ಶೈಲಜಾ.
Related Articles
ಕಸಬಾ ಹೋಬಳಿ: ಎಮ್ಮೆಕೊಪ್ಪಲಿನ ನಿಂಗಮ್ಮ, ಉದ್ದೂರಿನ ತಾಯಮ್ಮ, ಹೊಸಕೊಪ್ಪಲಿನ ಸಂತೋಷ್, ಸಣ್ಣೇಗೌಡರ ಕಾಲೋನಿಯ ಸುರೇಶ್‌ರ ಚಿಲ್ಲರೆ ಅಂಗಡಿಗೆ ಬಾಗಿಲಿಗೆ ಬೀಗ ಬೀಳಲಿದೆ.
Advertisement
ಈ ಸಂಬಂಧ ತಮ್ಮ ಕಚೇರಿಯಲ್ಲಿ ಉದಯವಾಣಿಗೆ ಮಾಹಿತಿ ನೀಡಿದ ಅವರು ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಸಂಗ್ರಹಣೆ ಹಾಗೂ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿ ಬಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ-1993ರ ಅಧಿನಿಯಮ 66, 67, 68, 69 ಮತ್ತು 70ರ ಅಡಿಯಲ್ಲಿ ಮದ್ಯ ಮಾರಾಟ ಮಾಡುವುದು ಶಿûಾರ್ಹ ಅಪರಾಧವಾಗಿದ್ದು.
ಈ ಸಂಬಂಧ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿ ಪ್ರಕರಣ ದಾಖಲಿಸಲಾಗಿದ್ದ ಅಂಗಡಿಗಳವರ ವಿರುದ್ಧ ಹುಣಸೂರು ವತ್ತದ ಅಬಕಾರಿ ನಿರೀಕ್ಷಕರು ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವಂತೆ ಮಾಡಿದ ಮನವಿಯಂತೆ 33 ಚಿಲ್ಲರೆ ಅಂಗಡಿಗಳಿಗೆ ಗ್ರಾಪಂ ವತಿಯಿಂದ ನೀಡಿರುವ ಪರವಾನಗಿ ಜೂ 19 ರಿಂದಲೇ ರದ್ದು ಪಡಿಸಲಾಗಿದ್ದು, ಗ್ರಾಪಂ ವತಿಯಿಂದಲೇ ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗುವುದೆಂದು ತಿಳಿಸಿದ್ದಾರೆ.
* ಸಂಪತ್ ಕುಮಾರ್