Advertisement

ರಾಜಸ್ಥಾನ ಉಪಚುನಾವಣೆ: ಕಾಂಗ್ರೆಸ್‌ 3ರಲ್ಲೂ ವಿಜಯಕ್ಕೆ ನಿಕಟ

03:43 PM Feb 01, 2018 | Team Udayavani |

ಜೈಪುರ : ರಾಜಸ್ಥಾನದ ಎರಡು ಸಂಸದೀಯ ಕ್ಷೇತ್ರಗಳು ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯ ಮತ ಎಣಿಕೆ ಇದೀಗ ಮುಕ್ತಾಯದ ಹಂತ  ತಲುಪುತ್ತಿರುವಂತೆಯೇ ಕಾಂಗ್ರೆಸ್‌ ಪಕ್ಷ ಮಂಡಲಗಢ ವಿಧಾನಸಭಾ ಕ್ಷೇತ್ರವನ್ನು ಗೆದ್ದು ಕೊಂಡಿದೆ.

Advertisement

ಎರಡು ಸಂಸದೀಯ ಕ್ಷೇತ್ರಗಳಾದ ಅಲ್ವಾರ್‌ ಮತ್ತು ಅಜ್‌ಮೇರ್‌ ನಲ್ಲಿ ಕಾಂಗ್ರೆಸ್‌ ತನ್ನ ಕಟ್ಟಾ ಎದುರಾಳಿ ಪಕ್ಷವಾಗಿರುವ ಬಿಜೆಪಿಗಿಂತ ನಿರ್ಣಾಯಕವಾಗಿ ಮುಂದಿದ್ದು  ಕಾಂಗ್ರೆಸ್‌ಗೆ ವಿಜಯ ಬಹುತೇಕ ನಿಶ್ಚಿತವಾಗಿದೆ. 

ಈ ಮೂರು ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದವು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜಸ್ಥಾನದಲ್ಲಿ ಶೂನ್ಯ ಸಂಪಾದನೆ ಮಾಡಿ ನಾಮಾವಶೇಷವಾಗಿತ್ತು. ಈ ವರ್ಷಾಂತ್ಯ ರಾಜ್ಯಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದ್ದು ಅದಕ್ಕೆ ಮುನ್ನ ನಡೆದಿರುವ ಈ ಸೆಮಿಫೈನಲ್‌ನಲ್ಲಿ ಅದು ಸಂಪೂರ್ಣ ಗೆಲುವು ಸಾಧಿಸುವುದು ಈಗ ನಿರೀಕ್ಷಿತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next