Advertisement

32ನೇ ಟೆಸ್ಟ್‌ :ಇಂಗ್ಲೆಂಡ್‌ ತಿರುಗೇಟು

07:05 AM Dec 28, 2017 | Team Udayavani |

ಮೆಲ್ಬರ್ನ್: ಆಷಸ್‌ ಟೆಸ್ಟ್‌ ಸರಣಿಯನ್ನು ಈಗಾಗಲೇ ಕಳೆದುಕೊಂಡಿದ್ದರೂ ಮೆಲ್ಬರ್ನ್ನಲ್ಲಿ ಸಾಗುತ್ತಿರುವ “ಬಾಕ್ಸಿಂಗ್‌ ಡೆ ಟೆಸ್ಟ್‌’ನಲ್ಲಿ ಇಂಗ್ಲೆಂಡ್‌ ತಂಡವು ತಿರುಗೇಟು ನೀಡುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದ 327 ರನ್ನಿಗೆ ಉತ್ತರವಾಗಿ ಇಂಗ್ಲೆಂಡ್‌ ತಂಡವು 2ನೇ ದಿನದಾಟದ ಅಂತ್ಯಕ್ಕೆ ಅಲಸ್ಟೇರ್‌ ಕುಕ್‌ ಅಜೇಯ (104 ರನ್‌) ಶತಕದಿಂದಾಗಿ 2 ವಿಕೆಟಿಗೆ 192 ರನ್‌ ಪೇರಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಇಂಗ್ಲೆಂಡ್‌ ಇನ್ನು 135 ರನ್‌ ಗಳಿಸಬೇಕಾಗಿದೆ.

Advertisement

ಪಂದ್ಯದ ದ್ವಿತೀಯ ದಿನ ಕುಕ್‌ ಅವರಲ್ಲದೇ ಇಂಗ್ಲೆಂಡಿನ ವೇಗಿಗಳು ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದರು. ಆ್ಯಂಡರ್ಸನ್‌ ಮತ್ತು ಬ್ರಾಡ್‌ ಅವರ ದಾಳಿಗೆ ಕುಸಿದ ಆಸ್ಟ್ರೇಲಿಯ ತಂಡವು 83 ರನ್‌ ಅಂತರದಲ್ಲಿ ಇನ್ನುಳಿದ 7 ವಿಕೆಟ್‌ ಕಳೆದುಕೊಂಡು 327 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಕುಕ್‌ ಮತ್ತು ಜೋ ರೂಟ್‌ ಭರ್ಜರಿ ಆಟವಾಡಿದ್ದರಿಂದ ಇಂಗ್ಲೆಂಡ್‌ ಉತ್ತಮ ಸ್ಥಿತಿಗೆ ತಲುಪಿತು.

ಕುಕ್‌ಗೆ 32ನೇ ಟೆಸ್ಟ್‌ ಶತಕ: ದಿನದ ಅಂತಿಮ ಓವರಿನಲ್ಲಿ ಕುಕ್‌ ಶತಕ ಸಿಡಿಸಿದರು. ಇದು ಅವರ ಟೆಸ್ಟ್‌ ಬಾಳ್ವೆಯ 32ನೇ ಶತಕವಾಗಿದೆ. ಈ ಸಾಧನೆಯಿಂದ ಅವರು ಮಹೇಲ ಜಯವರ್ಧನೆ ಅವರನ್ನು ಹಿಂದಿಕ್ಕಿ ಗರಿಷ್ಠ ರನ್‌ ಗಳಿಸಿದವರ ಸಾಲಿನಲ್ಲಿ ಎಂಟನೇ ಸ್ಥಾನಕ್ಕೇರಿದರು. 66 ರನ್‌ ಗಳಿಸಿದ ವೇಳೆ ಅವರು ಜೀವದಾನ ಪಡೆದಿದ್ದರು. ಮೊದಲ ಸ್ಲಿಪ್‌ನಲ್ಲಿ ಕಠಿಣ ಕ್ಯಾಚ್‌
ಪಡೆಯಲು ಸ್ಮಿತ್‌ ವಿಫ‌ಲರಾಗಿದ್ದರು.

ಆಸೀಸ್‌ ದಾಳಿಯನ್ನು ಬಹಳವಾಗಿ ದಂಡಿಸಿದ ಕುಕ್‌ 166 ಎಸೆತ ಎದುರಿಸಿ 104 ರನ್‌ ಹೊಡೆದರು. 15 ಬೌಂಡರಿ
ಬಾರಿಸಿದರು. ಕಳೆದ 10 ಇನಿಂಗ್ಸ್‌ಗಳ ಬಳಿಕ ಕುಕ್‌ ಶತಕ ಸಿಡಿಸಿದರು. ಆ 10 ಇನ್ನಿಂಗ್ಸ್‌ಗಳಲ್ಲಿ ಅವರು ಅರ್ಧಶತಕ
ಹೊಡೆಯಲು ಕೂಡ ವಿಫ‌ಲರಾಗಿದ್ದರು. ಕುಕ್‌ ಅವರು ಮುರಿಯದ 3ನೇ ವಿಕೆಟಿಗೆ ಜೋ ರೂಟ್‌ ಜತೆ ಈಗಾಗಲೇ 112 ರನ್‌ ಪೇರಿಸಿದ್ದಾರೆ. ನಾಯಕ ರೂಟ್‌ 105 ಎಸೆತ ಎದುರಿಸಿದ್ದು 49 ರನ್‌ ಗಳಿಸಿ ಆಡುತ್ತಿದ್ದಾರೆ.

ಈ ಮೊದಲು 3 ವಿಕೆಟಿಗೆ 244 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ ದಾಳಿಗೆ ರನ್‌ ಗಳಿಸಲು ಒದ್ದಾಡಿತು. ಸ್ಮಿತ್‌ ಮತ್ತೆ 11 ರನ್‌ ಪೇರಿಸಿ ಮೊದಲಿಗರಾಗಿ ಔಟಾದರು. 156 ಎಸೆತ ಎದ ುರಿಸಿದ ಅವರು 76 ರನ್‌ ಹೊಡೆದರು. ಶಾನ್‌ ಮಾರ್ಶ್‌ ಈ ಸರಣಿಯಲ್ಲಿ 3ನೇ ಬಾರಿ ಅರ್ಧಶತಕ ದಾಖಲಿಸಿ ಔಟಾದರು. 148 ಎಸೆತ ಎದುರಿಸಿದ ಅವರು 8 ಬೌಂಡರಿ ನೆರವಿನಿಂದ 61 ರನ್‌ ಗಳಿಸಿದರು. ಉಳಿದ ಆಟಗಾರರು ಉತ್ತಮ ಆಟವಾಡಲು
ವಿಫ‌ಲರಾದರು.

Advertisement

ಊಟದ ವಿರಾಮದ ಬಳಿಕ ಕೇವಲ ಒಂದು ರನ್‌ ಗಳಿಸುವಷ್ಟರಲ್ಲಿ ಇನ್ನುಳಿದ ಎರಡು ವಿಕೆಟ್‌ ಕಳೆದುಕೊಂಡ ಆಸ್ಟ್ರೇಲಿಯಾ 327 ರನ್ನಿಗೆ ಆಲೌಟಾಯಿತು. ಆ್ಯಂಡರ್ಸನ್‌ 61 ರನ್ನಿಗೆ 3 ಮತ್ತು ಬ್ರಾಡ್‌ 51 ರನ್ನಿಗೆ 4 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 1ನೇ ಇನಿಂಗ್ಸ್‌ 327 ಆಲೌಟ್‌, ಇಂಗ್ಲೆಂಡ್‌ 1ನೇ ಇನಿಂಗ್ಸ್‌ 192/2 (ಕುಕ್‌ ಅಜೇಯ 104, ರೂಟ್‌ ಅಜೇಯ 49, ಹೇಜಲ್‌ವುಡ್‌ 39ಕ್ಕೆ1)

Advertisement

Udayavani is now on Telegram. Click here to join our channel and stay updated with the latest news.

Next