Advertisement
ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಝೂಮ್‌ಆ್ಯಪ್ ಮುಖಾಂತರ ಸದಸ್ಯರಿಗೆ ಪಾಲ್ಗೊ ಳ್ಳಲು ಅವಕಾಶ ನೀಡಲಾಗಿತ್ತು. ಪ್ರಾರಂಭದಲ್ಲಿ ಮುಂಡ್ಕೂರು ರತ್ನಾಕರ ಶೆಟ್ಟಿ ದೀಪಪ್ರಜ್ವಲಿಸಿ ಉದ್ಘಾ ಟಿಸಿ ಮಾತನಾಡಿ, ಸಂಪೂರ್ಣ ತೃಪ್ತಿಕರವಾದ ಸೇವೆ ನೀಡುವುದ ರೊಂದಿಗೆ ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುವ ಸೇವೆ ರೀತಿಯಲ್ಲಿ ಸಂಪೂರ್ಣ ಸೌಲಭ್ಯಗಳನ್ನು ಮಾತೃ ಭೂಮಿ ಕೋ-ಆಪರೇಟಿವ್ ಸೊಸೈಟಿ ನೀಡುತ್ತಿದೆ. ಈ ಉದ್ದೇಶ ದಿಂದಲೇ ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ಮುಂಬಯಿ ಮಹಾನಗರ, ಉಪನಗರದ ವಿವಿಧ ಕಡೆಗಳಲ್ಲಿ ಮಾತ್ರವಲ್ಲದೆ ಥಾಣೆ, ಕಲ್ಯಾಯ್, ಪುಣೆ, ನಾಸಿಕ್, ರಾಯ ಘಡ ಜಿಲ್ಲೆಗಳಲ್ಲೂ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಸಂದರ್ಭದಲ್ಲೂ ಮಾತೃ ಭೂಮಿ ಸೊಸೈಟಿ ಗ್ರಾಹಕ ರಿಗೆ ಉತ್ತಮ ಸೇವೆಯನ್ನು ನೀಡುವುದ ರೊಂದಿಗೆ ಹೆಚ್ಚಿನ ಠೇವಣಿ ಸಂಗ್ರಹಿ ಸುವಲ್ಲೂ ಯಶಸ್ವಿಯಾಗಿದೆ. ಅಗತ್ಯ ಇರುವವರಿಗೆ ಠೇವಣಿಯನ್ನು ಹಿಂದಿರುಗಿಸಲಾಗಿದೆ. ಈ ವರ್ಷ ಗ್ರಾಹಕರಿಗೆ ಶೇ. 10ರಷ್ಟು ಡಿವಿ ಡೆಂಡ್ ಘೋಷಿಸಲಾಗಿದೆ. ಇನ್ನು ಮುಂದೆಯೂ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಎಲ್ಲರ ಸಹಕಾರ, ಮಾರ್ಗದರ್ಶನಗಳ ಅಗತ್ಯವಿದ್ದು, ಇದು ದೇಶದಲ್ಲೇ ಅತ್ಯುತ್ತಮ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯಾ ಗುವುದರಲ್ಲಿ ಎಲ್ಲರ ಸಹಕಾರವನ್ನು ಮರೆಯುವಂತಿಲ್ಲ ಎಂದರು.
Related Articles
Advertisement
ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷರಾದ ಕೆ. ಡಿ. ಶೆಟ್ಟಿ , ಸಿಎ ಶಂಕರ್ ಶೆಟ್ಟಿ ಹಾಗೂ ಸಿಎ ಐ. ಆರ್. ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ ಮೊದಲಾದವರು ಸಲಹೆ-ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಸಿಎ ರಮೇಶ್ ಎ. ಶೆಟ್ಟಿ ವಂದಿಸಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕೋ ಅವಾರ್ಡ್ :
2020ರ ಮಾ. 31ರ ವರೆಗಿನ ಮಾತೃಭೂಮಿಯ ಷೇರು ಬಂಡವಾಳ 2,420.11 ಲಕ್ಷ ರೂ. ಗಳಿಗೆ ಏರಿದ್ದು, ಒಟ್ಟು ಸಂಗ್ರಹ 2,081.36 ಲಕ್ಷ ರೂ., ಒಟ್ಟು ಠೇವಣಿ 9,554.92 ಲಕ್ಷ ರೂ.ಗಳಿಗೆ ತಲುಪಿದೆ. ಒಟ್ಟು ಮುಂಗಡ ಮೊತ್ತ 10,550.16 ಲಕ್ಷ ರೂ., ವರ್ಕಿಂಗ್ ಕ್ಯಾಪಿಟಲ್ 14,780.81 ಲಕ್ಷ ರೂ., ನಿವ್ವಳ ಲಾಭ 395.09 ಲಕ್ಷ ರೂ., ನೆಟ್ ಎನ್‌ಪಿಎ ಶೇ. 14.75ರಷ್ಟಿದೆ. ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಮುಂಬಯಿ ಮಹಾನಗರ ಅಲ್ಲದೆ ಇನ್ನಿತರ ಉಪನಗರ, ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಎಲ್ಲ ಶಾಖೆಗಳಿಗೆ ಮಾತೃಭೂಮಿ ಆಡಳಿತವು ಈಗಾಗಲೇ ಸ್ವತಂತ್ರ ಅಧಿಕಾರ ನೀಡಿರುವುದಲ್ಲದೆ, ಯಾವುದೇ ಬ್ಯಾಂಕ್ ಗ್ರಾಹಕರಿಗೆ ನೀಡುವ ಸೇವೆಗೆ ಅನುಗುಣವಾಗಿ ಸಂಪೂರ್ಣ ಸೌಲಭ್ಯ ಒದಗಿಸಲು ಶಾಖೆಗಳಿಗೆ ಸ್ವಾಯತ್ತತೆ ಕಲ್ಪಿಸಲಾಗಿದೆ. ಸೊಸೈಟಿ ಪ್ರಸಕ್ತ ಸಾಲಿನಲ್ಲಿ ಬ್ಯಾಂಕೋ ಅವಾರ್ಡ್ ಅನ್ನು ಅತೀ ಹೆಚ್ಚಿನ ಠೇವಣಿ ಸಂಗ್ರಹಿಸಿದಕ್ಕಾಗಿ ಪಡೆದಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಿ, ಅದರ ಅಭ್ಯುದಯಕ್ಕಾಗಿ ಕಾರಣರಾದ ಪ್ರಾರಂಭದ ದಿನಗಳಿಂದ ಇಂದಿನವರೆಗಿನ ಕಾರ್ಯಾಧ್ಯಕ್ಷರು, ಆಡಳಿತ ನಿರ್ದೇಶಕರು, ಸಲಹಾ ಸಮಿತಿಯ ಸದಸ್ಯರ ಸೇವೆ ಮರೆಯುವಂತಿಲ್ಲ.
ಚಿತ್ರ-ವರದಿ : ಸುಭಾಷ್ ಶಿರಿಯಾ