ಕಾಪು: ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಸಂಕಲ್ಪದಂತೆ ಕುಂಜಾರುಗಿರಿ ಶ್ರೀ ದುರ್ಗಾ ದೇವಸ್ಥಾನದ ಬೆಟ್ಟದಲ್ಲಿ ಪ್ರತಿಷ್ಠಾಪಿಸಧಿಲಾಗಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ 32 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನ ವಿಧಿ ವಿಧಾನಗಳು ಮೇ 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಹಿತ ಸಂಪನ್ನಗೊಂಡಿತು.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಮಠಾಧೀಶ ಶ್ರೀ ಸುಬುಧೇಂದ್ರಧಿತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರ ನೇತೃತ್ವಧಿದಲ್ಲಿ, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಚಾರ್ಯ ಮಧ್ವರ ಏಕಶಿಲಾ ಮೂರ್ತಿ ಪ್ರತಿಷ್ಠಾಪನ ಪೂರ್ವಕ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ಆಚಾರ್ಯ ಮಧ್ವರ ಬೃಹತ್ ಏಕ ಶಿಲಾ ಮೂರ್ತಿಯ ಪೀಠದಲ್ಲಿ ಜಗದ್ಗುರು ಶ್ರೀ ಮಧ್ವಾಧಿಚಾರ್ಯರ ಸಣ್ಣ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಬೃಹತ್ ಮೂರ್ತಿಗೆ ದೈವಿಕ ಕಳೆ ನೀಡಲಾಯಿತು. ಬಳಿಕ ಆಚಾರ್ಯ ಮಧ್ವರ ಮೂರ್ತಿಗೆ ಅಭಿಷೇಕ ಮತ್ತು ಪುಷ್ಪಾರ್ಚನೆಧಿಗೈಯಲಾಯಿತು.
ಪ್ರಯಾಗ ಮಧ್ವ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು, ಮುಳಬಾಗಿಲು ಶ್ರೀಪಾದರ ಮಠದ ಪೀಠಾಧಿಪತಿ ಶ್ರೀ ಕೇಶವನಿಧಿತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯಧಿತೀರ್ಥ ಶ್ರೀಪಾದರು, ಹುಣಸೋಗೆ ಮಧ್ಯ ಮಠದ ಶ್ರೀ ವಿಶ್ವಧಿನಂದನಧಿತೀರ್ಥ ಶ್ರೀಪಾದರು, ಬನ್ನಂಜೆ ಮಠದ ಶ್ರೀ ರಾಘವೇಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಮಧ್ವಾಚಾರ್ಯರ ವಿಗ್ರಹ ಪ್ರತಿಷ್ಠಾಪನ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ವಿವಿಧ ಮಠಾಧಿಪತಿಗಳು ಮತ್ತು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಧಿಕ್ರಮ, ಆಶೀರ್ವಚನ ನಡೆಯಿತು.
ಮೇ 10ರ ಬೆಳಗ್ಗೆ ಮಧ್ವಾಚಾರ್ಯರ ಮೂರ್ತಿಗೆ ಮಸ್ತಕಾಭಿಷೇಕ ನಡೆಯಲಿದೆ.