Advertisement
ಇದೇ ವೇಳೆ, ಮತ್ತೂಂದು ವಿಮಾನವು ದಿಲ್ಲಿಯಿಂದ ವುಹಾನ್‌ಗೆ ತೆರಳಿದ್ದು, ಇನ್ನೂ ಕೆಲವು ಭಾರ ತೀಯರನ್ನು ಕರೆತರಲಿದೆ. ಈಗಾಗಲೇ ದೇಶಕ್ಕೆ ಆಗಮಿಸಿರುವ ಭಾರತೀಯರನ್ನು ಹರಿ ಯಾಣದ ಮಾನೇಸರ್‌ನಲ್ಲಿ ನಿರ್ಮಿಸಲಾದ 300 ಹಾಸಿಗೆಗಳ ನಿಗಾ ಕೇಂದ್ರದಲ್ಲಿರಿಸಿದ್ದು, ಎರಡು ವಾರ ಅವರು ಅಲ್ಲಿಯೇ ಇರುತ್ತಾರೆ.
ವುಹಾನ್‌ನಿಂದ ಹೊರಟ ಪ್ರತಿಯೊಬ್ಬ ಭಾರತೀಯನನ್ನೂ ಸಂಪೂರ್ಣ ತಪಾ ಸಣೆಗೆ ಒಳಪಡಿಸಿದ ಬಳಿಕವಷ್ಟೇ ವಿಮಾನ ಹತ್ತಲು ಅವಕಾಶ ಕಲ್ಪಿಸ ಲಾಯಿತು. ಈ ವೇಳೆ 6 ಮಂದಿ ವಿಪರೀತ ಜ್ವರದಿಂದ ಬಳಲುತ್ತಿದ್ದ ಕಾರಣ ಅವರಿಗೆ ವಿಮಾನ ಹತ್ತಲು ಅನುಮತಿ ನಿರಾಕರಿಸಲಾಗಿದೆ. ಮೃತರ ಸಂಖ್ಯೆ 259ಕ್ಕೇರಿಕೆ
ಚೀನದಲ್ಲಿ ವೈರಸ್‌ಗೆ ಮೃತಪಟ್ಟವರ ಸಂಖ್ಯೆ 259ಕ್ಕೇರಿಕೆಯಾಗಿದೆ. 11,791 ಮಂದಿಗೆ ಸೋಂಕು ತಗುಲಿದ್ದು, 2 ಸಾವಿರ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.