Advertisement

ಕೋವಿಡ್: ರಾಜ್ಯದಲ್ಲಿಂದು 14,724 ಸೋಂಕಿತರು ಗುಣಮುಖ, 3222 ಹೊಸ ಪ್ರಕರಣ ಪತ್ತೆ

07:44 PM Jun 29, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು ( ಜೂನ್ 29) ಹೊಸದಾಗಿ 3222 ಕೋವಿಡ್ ಪಾಸಿಟಿವ್ ಪ್ರಕಣಗಳು ವರದಿಯಾಗಿವೆ. 93 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು 14,724 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 27,19,479 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿಂದು 753 ಜನರಿಗೆ ಸೋಂಕು ತಗುಲಿದ್ದು, 16 ಸೋಂಕಿತರು ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ -08, ಬಳ್ಳಾರಿ-18, ಬೆಳಗಾವಿ-114, ಬೆಂಗಳೂರು ಗ್ರಾಮಾಂತರ-48, ಬೆಂಗಳೂರು ನಗರ-753, ಬೀದರ್-2, ಚಾಮರಾಜನಗರ-50, ಚಿಕ್ಕಬಳ್ಳಾಪುರ-25, ಚಿಕ್ಕಮಗಳೂರು-114, ಚಿತ್ರದುರ್ಗ-44, ದಕ್ಷಿಣ ಕನ್ನಡ-385, ದಾವಣಗೆರೆ-95, ಧಾರವಾಡ-30, ಗದಗ-26,  ಹಾಸನ-242, ಹಾವೇರಿ-10, ಕಲಬುರಗಿ-36, ಕೊಡಗು-130, ಕೋಲಾರ-105, ಕೊಪ್ಪಳ-20, ಮಂಡ್ಯ-89, ಮೈಸೂರು-415, ರಾಯಚೂರು-07, ರಾಮನಗರ-16, ಶಿವಮೊಗ್ಗ-225, ತುಮಕೂರು-99, ಉಡುಪಿ-83, ಉತ್ತರ ಕನ್ನಡ-25, ವಿಜಯಪುರ-06, ಯಾದಗಿರಿ-02.

Advertisement
Advertisement

Udayavani is now on Telegram. Click here to join our channel and stay updated with the latest news.

Next