Advertisement
ಹರಿಹರದ 54 ವರ್ಷದ ವ್ಯಕ್ತಿಗೆ (ರೋಗಿ ನಂಬರ್ 240448) ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ.
Related Articles
Advertisement
ರೋಗಿ ನಂಬರ್ 205244 ಸಂಪರ್ಕದಿಂದ ದಾವಣಗೆರೆಯ ಎಂಸಿಸಿ ಬ್ಲಾಕ್ ನಿವಾಸಿ 68 ವರ್ಷದ ವ್ಯಕ್ತಿಯಲ್ಲಿ (ರೋಗಿ ನಂಬರ್ 242863) ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆಯ ಭಗತ್ ಸಿಂಗ್ ನಗರದ ಎಂಟನೇ ಕ್ರಾಸ್ ನಿವಾಸಿ 15 ವರ್ಷದ ಬಾಲಕಿ (ರೋಗಿ ನಂಬರ್ 242496), ಜಯನಗರದ 38 ವರ್ಷದ ವ್ಯಕ್ತಿ (ರೋಗಿ ನಂಬರ್ 242497), ಹೊನ್ನಾಳಿಯ 16 ವರ್ಷದ ಬಾಲಕಿಗೆ (ರೋಗಿ ನಂಬರ್ 242498) ತೀವ್ರ ಶೀತ, ಜ್ವರದಿಂದ ಸೋಂಕು ಕಾಣಿಸಿಕೊಂಡಿದೆ.
ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ ಒಂಬತ್ತು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇನ್ ಫ್ಲ್ಯುಯೆಂಝಾ ತರಹದ ಅಸೌಖ್ಯದ (ILI) ಸಮಸ್ಯೆಯಿಂದ ಬಹಳ ಜನರು ಸೋಂಕಿಗೆ ಒಳಗಾಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 206, ಹರಿಹರದ 42, ಜಗಳೂರಿನ 25, ಚನ್ನಗಿರಿಯ 19, ಹೊನ್ನಾಳಿಯ 29 ಹಾಗೂ ಹೊರ ಜಿಲ್ಲೆಯ 11 ಜನರು ಸೇರಿದಂತೆ 332 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೋವಿಡ್ 19 ಸೋಂಕಿನಿಂದ ಗುಣಮುಖರಾದ ದಾವಣಗೆರೆಯ ನಿಟುವಳ್ಳಿಯ 58 ವರ್ಷದ ವೃದ್ಧೆ (ರೋಗಿ ನಂಬರ್ 185385), ದಾವಣಗೆರೆಯ ಪಿ.ಜೆ. ಬಡಾವಣೆಯ 78 ವರ್ಷದ ವೃದ್ಧ (ರೋಗಿ ನಂಬರ್ 186002), ಆವರಗೆರೆಯ 3 ವರ್ಷದ ಬಾಲಕ (ರೋಗಿ ನಂಬರ್ 207693) ಒಳಗೊಂಡಂತೆ 45 ಜನ ಸೋಂಕಿತರು ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆಯ ಪಿ.ಜೆ. ಬಡಾವಣೆಯ 65 ವರ್ಷದ ವೃದ್ಧ (ರೋಗಿ ನಂಬರ್ 238098) ಮೃತಪಟ್ಟವರು. ಜಿಲ್ಲೆಯಲ್ಲಿ 5785 ಪ್ರಕರಣಗಳಲ್ಲಿ ಈವರೆಗೆ 3787 ಸೋಂಕಿತರು ಬಿಡುಗಡೆಯಾಗಿದ್ದಾರೆ. 130 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1868 ಸಕ್ರಿಯ ಪ್ರಕರಣಗಳಿವೆ.