ಬೆಂಗಳೂರು ಮೂಲದ “ವೈಟ್ ಹ್ಯಾಟ್ ಹ್ಯಾಕರ್’ ಆನಂದ್ ಪ್ರಕಾಶ್‌ರಿಗೆ ಟ್ವೀಟರ್ ಕಂಪನಿ 3.2 ಲಕ್ಷ ರೂ. ಬಹುಮಾನ
ನೀಡಿದೆ. ಟ್ವೀಟರ್‌ನ ದೋಷವನ್ನು ಅವರು ಪತ್ತೆ ಮಾಡಿದ್ದು, ಬೇರೆಯವರ ಅಕೌಂಟ್‌ನಲ್ಲಿ ಮಧ್ಯಪ್ರವೇಶಿಸಿ ವಿವಿಧ ರೀತಿಯ ಪೋಸ್ಟ್‌ಗಳನ್ನು ಹಾಕುವ, ಜೊತೆಗೆ ಪೋಸ್ಟ್‌ಗಳನ್ನು ಡಿಲೀಟ್ ಮಾಡುವುದಕ್ಕೂ ಸಾಧ್ಯವಿದೆ ಎಂದು ಭದ್ರತಾ
ಸಮಸ್ಯೆಯನ್ನು ಎತ್ತಿ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟರ್ ಬಹುಮಾನ ನೀಡಿದೆ. ಆನಂದ್ “ವೈಟ್ ಹ್ಯಾಟ್
ಹ್ಯಾಕರ್’ (ಕಂಪನಿಗಳ ಸಾಫ್ಟವೇರ್, ತಾಣಗಳಲ್ಲಿ ಭದ್ರತಾ ಸಮಸ್ಯೆ ಕಂಡುಹಿಡಿವ ಉತ್ತಮ ಹ್ಯಾಕರ್) ಆಗಿದ್ದಾರೆ.
Advertisement