Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರವಾಸೋದ್ಯಮ ಬೆಳವಣಿಗೆ ಯಿಂದ ಉದ್ಯೋಗಾ ವಕಾಶಗಳು ಹೆಚ್ಚುತ್ತವೆ. ಪ್ರವಾ ಸೋದ್ಯಮದಿಂದಲೇ ಇಂದು ಹಲವು ರಾಷ್ಟ್ರಗಳು ಆರ್ಥಿಕವಾಗಿ ಸುಧಾರಣೆ ಹೊಂದಿವೆ. ಆದರೆ, ನಮ್ಮಲ್ಲಿ ಎಲ್ಲವೂ ಇದ್ದರೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿಲ್ಲ. ಈ ವಿಷಯದಲ್ಲಿ ಹೆಚ್ಚು ಗಮನ ಹರಿಸಲಾಗುವುದು ಎಂದರು.
Related Articles
Advertisement
ಗಡಿ ನಾಡು ಬೀದರನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಿದರೆ ಹಿಂದುಳಿದ ಪಟ್ಟ ಅಳಿಸಬಹುದು. ಪ್ರವಾಸಿ ಸ್ಥಳ ಗುರುತಿಸುವುದು, ಸಂಪರ್ಕ-ಮೂಲ ಸೌಕರ್ಯ ಒದಗಿಸಿ ಚಟುವಟಿಕೆ ಆರಂಭಿಸಿದರೆ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ ಎಂದರು.
ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ವ್ಯಾಪ್ತಿಗೆ ವಾಣಿಜ್ಯ ಬೆಳೆ ಕಬ್ಬನ್ನು ಸಹ ಸೇರಿಸುವ ಚಿಂತನೆ ನಡೆದಿದೆ. ಈ ಬಗ್ಗೆ ಕಬ್ಬು ಬೆಳೆಗಾರರ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕಬ್ಬು ಕೃಷಿಂಗ್‌ನಿಂದ ಮಾತ್ರ ಸಕ್ಕರೆ ಕಾರ್ಖಾನೆಗಳನ್ನು ನಡೆಸುವುದು ಅಸಾಧ್ಯ. ಕಾಲಕ್ಕೆ ತಕ್ಕಂತೆ ಬದಲಾಗಿ, ತಂತ್ರಜ್ಞಾನ ಬಳಸಿಕೊಂಡು ಉಪ ಉತ್ಪನ್ನಗಳತ್ತ ಚಿತ್ತ ಹರಿಸಬೇಕು.-ಸಿ.ಟಿ ರವಿ, ಸಚಿವ