Advertisement

318 ಅಂಗನವಾಡಿ ಕೇಂದ್ರಗಳಿಗಿಲ್ಲ ಸ್ವಂತ ಕಟ್ಟಡ

12:55 PM Jul 01, 2018 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ 1386 ಅಂಗನವಾಡಿ ಕೇಂದ್ರಗಳ ಪೈಕಿ 944 ಕೇಂದ್ರಗಳಿಗೆ ಸ್ವಂತ ಕಟ್ಟಡ ಸೌಕರ್ಯವಿದ್ದು, 318 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಇರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಕಾಳಜಿವಹಿಸುವ ಇಲಾಖೆಗೆ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಕೊರತೆಯುಂಟಾಗಿದೆ.

Advertisement

ಸುಮಾರು ವರ್ಷಗಳಿಂದ ನಿರ್ಮಿತಿ ಕೇಂದ್ರ ಮತ್ತು ಪಿಆರ್‌ಇಗೆ ವಹಿಸಿರುವ ಕಾಮಗಾರಿಗಳು ಹಲವೆಡೆ ಪ್ರಾರಂಭವಾಗದೇ ಇರುವುದು ತಿಂಗಳಿಗೊಮ್ಮೆ ಕೇವಲ ಕಟ್ಟಡಗಳ ಬಾಡಿಗೆಯೇ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿರುವ ಪರಿಸ್ಥಿತಿ ಇಲಾಖೆಗೆ ಎದುರಾಗಿದೆ.

ಜಿಲ್ಲೆಯ ಶಹಾಪುರ ತಾಲೂಕಿಗೆ 386 ಅಂಗನವಾಡಿ ಕೇಂದ್ರಗಳು ಮತ್ತು 9 ಮಿನಿ ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ. 279 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದರೆ, ಪಂಚಾಯಿತಿ ಕಟ್ಟಡದಲ್ಲಿ 12, ಸಮುದಾಯ ಭವನದಲ್ಲಿ 12 ಹಾಗೂ ಶಾಲೆ ಕಟ್ಟಡದಲ್ಲಿ 16 ಕೇಂದ್ರಗಳನ್ನು ತೆರೆಯಲಾಗಿದ್ದು, 76 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳನ್ನು ಅವಲಂಭಿಸಿವೆ.

ಸುರಪುರ ತಾಲೂಗೆ 451 ಅಂಗನವಾಡಿ ಮತ್ತು 23 ಮಿನಿ ಅಂಗನವಾಡಿ ಕೇಂದ್ರಗಳು ಮಂಜೂರಾಗಿವ. ಇದರಲ್ಲಿ 315 ಅಂಗನವಾಡಿಗಳು ಸ್ವಂತ ಕಟ್ಟದಲ್ಲಿ ನಡೆಯುತ್ತಿವೆ. ಸಮುದಾಯ ಭವನದಲ್ಲಿ 16, ಶಾಲಾ ಕಟ್ಟಡದಲ್ಲಿ 27 ಕೇಂದ್ರಗಳಿದ್ದರೆ 116 ಅಂಗನವಾಡಿಗಳಿಗೆ ಬಾಡಿಗೆ ಕಟ್ಟಡಗಳೇ ದಿಕ್ಕು ಎನ್ನುವಂತಿದೆ.

ಯಾದಗಿರಿ ತಾಲೂಕಿನಲ್ಲಿ 239 ಅಂಗನವಾಡಿ, 4 ಮಿನಿ ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ. 158 ಸ್ವಂತ ಕಟ್ಟಡ ಹೊಂದಿದ್ದರೆ ಪಂಚಾಯಿತಿ ಕಟ್ಟಡದಲ್ಲಿ 3, ಸಮುದಾಯ ಭವನದಲ್ಲಿ 4, ಶಾಲಾ ಕಟ್ಟಡದಲ್ಲಿ 8 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. 

Advertisement

ಇನ್ನೂ 70 ಅಂಗನವಾಡಿಗಳಿಗೆ ಸ್ವಂತ ಕಟ್ಟಡದ ಭಾಗ್ಯ ಕರುಣಿಸಬೇಕಿದೆ. ಇನ್ನೂ ಯಾದಗಿರಿ ತಾಲೂಕಿನಿಂದ ವಿಭಜನೆಗೊಂಡ ನೂತನ ಗುರುಮಠಕಲ್‌ನಲ್ಲಿ ಕೂಡ ಇಂತಹದ್ದೇ ಸಮಸ್ಯೆ ಇದೆ. 260 ಅಂಗನವಾಡಿ, 14 ಮಿನಿ ಅಂಗನವಾಡಿ ಕೇಂದ್ರಗಳು ಗುರುಮಠಕಲ್‌ ತಾಲೂಕಿಗೆ ಮಂಜೂರಾಗಿದ್ದು, 192 ಕೇಂದ್ರಗಳು ಸ್ವಂತ ಕಟ್ಟಡದಲ್ಲಿದೆ. 5 ಪಂಚಾಯಿತಿ ಕಟ್ಟಡದಲ್ಲಿ, 5 ಸಮುದಾಯ ಭವನಗಳಲ್ಲಿ ಹಾಗೂ 16 ಶಾಲಾ ಕಟ್ಟಡಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಅಕ್ಷರ ಜ್ಞಾನ ನೀಡುತ್ತಿದ್ದು, 56 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ.

ಸರ್ಕಾರ ಮಹಿಳೆಯರು ಮತ್ತು ಮಕ್ಕಳಿಗಾಗಿ ಜಾರಿಗೆ ತರುವ ಹಲವು ಯೋಜನೆಗಳ ಅನುಷ್ಠಾನಕ್ಕೆ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತಹದ್ದರಲ್ಲಿ ನಿರ್ಮಿತಿ ಕೇಂದ್ರಕ್ಕೆ ವಹಿಸಿರುವ ಅಂಗನವಾಡಿ ಕೇಂದ್ರಗಳ
ಕಟ್ಟಡಗಳ ನಿರ್ಮಾಣದಲ್ಲಿ ಜಿಲ್ಲಾಡಳಿತವೂ ಆಸಕ್ತಿವಹಿಸದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ 

„ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next