Advertisement
ಕೋವಿಡ್-19 ಲಾಕ್ ಡೌನ್ ಸಡಿಲಿಕೆ ಅನಂತರ ಮಂಗಳೂರಿನಲ್ಲಿ ಕೋವಿಡ್-19 ಸೋಂಕಿತರ ಪ್ರಕರಣ ಸಂಖ್ಯೆ ಏರುತ್ತಿದೆ. ಬುಧವಾರ (ಮೇ 20) ನಗರದ ನೀರುಮಾರ್ಗ ಸಮೀಪದ ಮಹಿಳೆಗೂ ಕೋವಿಡ್-19 ಪಾಸಿಟವ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಮಂಗಳೂರು ನಗರದಲ್ಲಿಯೇ (ದುಬಾೖ ಪ್ರಯಾಣಿಕರು ಸೇರಿ) ಇದೀಗ ಒಟ್ಟು 26 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
Related Articles
ಜಿಲ್ಲೆಯಲ್ಲಿ ಈವರೆಗೆ 55 ಪ್ರಕರಣಗಳಲ್ಲಿ ಭಟ್ಕಳ-1, ಕಾಸರಗೋಡು-4, ಕಾರ್ಕಳ-3, ತೊಕ್ಕೊಟ್ಟು-1, ತುಂಬೆ-1, ಸಜೀಪ-1, ಪುತ್ತೂರು-1, ಸುಳ್ಯ-1, ಉಪ್ಪಿನಂಗಡಿ-2, ಕರಾಯ-1 ಬಂಟ್ವಾಳ ಪೇಟೆ-11, ದುಬಾೖಯಿಂದ ವಿಶೇಷ ವಿಮಾನದ ಮೂಲಕ ಜಿಲ್ಲೆ ಗೆ ಪ್ರಯಾಣ ಬೆಳೆಸಿದವರು -15, ಬೋಳೂರು 5, ಶಕ್ತಿನಗರ-2, ಯೆಯ್ಯಾಡಿ-2, ಜೆಪ್ಪು ಪಟ್ಣ-1, ಸುರತ್ಕಲ್-1, ನೀರುಮಾರ್ಗ-1, ಉಳ್ಳಾಲ-1 ಪ್ರಕರಣ ದಾಖಲಾಗಿತ್ತು. ಈ ಪೈಕಿ ಸದ್ಯ 20 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಕೋವಿಡ್-19ದಿಂದ ಜಿಲ್ಲೆಯಲ್ಲಿ ಐದು ಸಾವುಕೋವಿಡ್-19 ಜಿಲ್ಲೆಯಲ್ಲಿ ಒಟ್ಟು ಐದು ಮಂದಿಯನ್ನು ಬಲಿತೆಗೆದುಕೊಂಡಿದೆ. ಬಂಟ್ವಾಳ ಮೂಲದ ಮೂರು ಮಹಿಳೆ ಸಹಿತ ಮಂಗಳೂರು ನಗರದ ಬೋಳೂರು ಮತ್ತು ಶಕ್ತಿನಗರದ ಮಹಿಳೆ ಈಗಾಗಲೇ ಕೊರೊನಾದಿಂದ ಸಾವನ್ನಪ್ಪಿದ್ದಾರೆ.