Advertisement

ಕೋವಿಡ್19: ದೇಶದಲ್ಲಿ 30ಸಾವಿರ ಹೊಸ ಪ್ರಕರಣ; 391 ಸಾವು, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ !

10:29 AM Dec 13, 2020 | Mithun PG |

ನವದೆಹಲಿ:  ಭಾರತದಲ್ಲಿ ಭಾನುವಾರದ (ಡಿ.13) ವೇಳೆಗೆ ಕೋವಿಡ್ ಸೋಂಕಿತರ ಸಂಖ್ಯೆ 98,57,029 ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 30,254 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ದೇಶದಲ್ಲಿ ಈಗಾಗಲೇ 93,57,464 ಮಂದಿ ಸೋಂಕಿತರು ಗುಣಮುಖರಾಗಿದ್ದು, 3,56,546 ಸಕ್ರಿಯ ಪ್ರಕರಣಗಳಿವೆ. ಕಳೆದ ಒಂದು ದಿನದಲ್ಲಿ ಸುಮಾರು 391 ಮಂದಿ ಈ ವೈರಸ್ ನಿಂದ ಮೃತಪಟ್ಟಿದ್ದು, ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 1,43,019ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೋವಿಡ್ ಸೋಂಕಿತರ ಮತ್ತು ಮೃತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.  ಇದೊಂದು ಆಶಾದಾಯಕ ಬೆಳವಣಿಗೆಯೆಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 3.6% ಇದ್ದು, ಗುಣಮುಖರಾಗುವವರ ಪ್ರಮಾಣ ಶೇ. 94.89% ಇದೆ. ಇನ್ನೂ ಮೃತರ ಪ್ರಮಾಣ 1.45% ರಷ್ಟಿದೆ.

ಇದನ್ನೂ ಓದಿ: ಸಂಸತ್ ಮೇಲಿನ ದಾಳಿಗೆ 19 ವರ್ಷ: ಹೇಡಿತನದ ಕೃತ್ಯವನ್ನು ಎಂದಿಗೂ ಮರೆಯಲ್ಲ ಎಂದ ಪ್ರಧಾನಿ !

Advertisement

ಕಳೆದ 6 ದಿನಗಳಿಂದ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿಯಲ್ಲಿ ಹೊಸ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದೇಶದಲ್ಲಿ ಹೊಸ ಸೋಂಕಿತರಿಂಗಿಂತ ಗುಣಮುಖರಾಗುವವರ ಪ್ರಮಾಣವೇ ಅಧಿಕವಾಗಿದೆ ಎಂದು  ವರದಿಯಾಗಿದೆ.

ಇದನ್ನೂ ಓದಿ: ಖಲಿಸ್ತಾನ್ ಬೆಂಬಲಿಗರಿಂದ ದುಷ್ಕೃತ್ಯ: ರೈತ ಬೆಂಬಲಿತ ಹೋರಾಟದ ವೇಳೆ ಗಾಂಧಿ ಪ್ರತಿಮೆ ವಿರೂಪ

Advertisement

Udayavani is now on Telegram. Click here to join our channel and stay updated with the latest news.

Next