ಬ್ಯಾಂಕೇತರ ಹಣಕಾಸು ಕಂಪನಿಗಳು(ಎನ್‌ಬಿಎಫ್ ಸಿ), ಗೃಹ ಹಣಕಾಸು ಕಂಪನಿಗಳು(ಎಚ್ ಎಫ್ಸಿ) ಹಾಗೂ ಸಣ್ಣ ಹಣಕಾಸು ಸಂಸ್ಥೆ (ಎಂಎಫ್ಐ)ಗಳಿಗೆಂದೇ 30 ಸಾವಿರ ಕೋಟಿ ರೂ.ಗಳ ವಿಶೇಷ ಲಿಕ್ವಿಡಿಟಿ ಯೋಜನೆಯನ್ನು ಘೋಷಿಸಲಾಗಿದೆ. ಅದರಂತೆ, ಹೂಡಿಕೆ ದರ್ಜೆಯ ಸಾಲ ಪತ್ರದ ಪ್ರೈಮರಿ ಮತ್ತು ಸೆಕೆಂಡರಿ ಮಾರುಕಟ್ಟೆ ವಹಿವಾಟುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ.
ಇದರ ಭದ್ರತಾ ಪತ್ರಕ್ಕೆ ಸಂಪೂರ್ಣವಾಗಿ ಸರ್ಕಾರವೇ ಖಾತ್ರಿ ನೀಡುತ್ತದೆ. ಇದು ಈ ವಲಯಕ್ಕೆ ಹಾಗೂಮ್ಯೂಚುವಲ್ ಫಂಡ್‌ಗೆ ಹಣಕಾಸು ಹರಿದುಬರಲು ನೆರವಾಗಲಿದ್ದು, ಆ ಮೂಲಕ ಮಾರುಕಟ್ಟೆಯಲ್ಲಿ ಭರವಸೆ ಮೂಡಿಸಲಿದೆ. ಅಲ್ಲದೆ, ಭಾಗಶಃ ಸಾಲ ಖಾತ್ರಿ ಯೋಜನೆ 2.0 ಮೂಲಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂ.ಗಳನ್ನು ನೀಡಲಾಗುತ್ತದೆ.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ನೀಡಿರುವ ಉತ್ತೇಜನ ಅತ್ಯಂತ ಅರ್ಥಪೂರ್ಣ ಹಾಗೂ ಸಮಗ್ರವಾದ ದೃಷ್ಟಿಕೋನವನ್ನು ಹೊಂದಿರುವಂಥ ನಡೆ. ಇದಲ್ಲದೆ, ನಾನ್ ಬ್ಯಾಂಕಿಂಗ್ ವಲಯಕ್ಕೂ ಇಂದು ಘೋಷಿಸಲಾಗಿರುವ ಪ್ಯಾಕೇಜ್‌ನಿಂದ ಲಿಕ್ವಿಡಿಟಿಯ ನೆರವು ದೊರೆಯುತ್ತದೆ. ಮತ್ತೂಂದೆಡೆ, ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ನೀಡಲಾಗಿರುವ 90,000 ಕೋಟಿ ರೂ. ಪ್ಯಾಕೇಜ್ ನಿಜಕ್ಕೂ ಆರ್ಥಿಕತೆಗೆ ಪರೋಕ್ಷವಾಗಿ ಪುಷ್ಠಿ ನೀಡುತ್ತದೆ.
-ಅಮಿತಾಭ್ ಕಾಂತ್, ನೀತಿ ಆಯೋಗ ಸಿಇಒ