Advertisement
ತಾಲೂಕಿನ ಡೊಂಬರಹಳ್ಳಿ ಗ್ರಾಮದಲ್ಲಿ ಬುಧವಾರ 80ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ 3 ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಾದ ಸಿಂಗಟಾಲೂರ ಏತ ನೀರಾವರಿ ಯೋಜನೆ, ಅಳವಂಡಿ-ಬೇಟಗೇರಿ ಏತ ನೀರಾವರಿ ಯೋಜನೆ ಹಾಗೂ 180 ಕೋಟಿ ರೂ. ಅನುದಾನದ ನವಲಕಲ್-ಬಹದ್ದೂರ ಬಂಡಿ ಏತ ನೀರಾವರಿ ಯೋಜನೆಗಳ ಮೂಲಕ ಕೊಪ್ಪಳ ಕ್ಷೇತ್ರದ ಒಣ ಬೇಸಾಯದ 30 ಸಾವಿರ ಎಕರೆಗೆ ನೀರಾವರಿ ಭಾಗ್ಯ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಮೆಡಿಕಲ್ ಕಾಲೇಜು, ತಳಕಲ್‌ಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿ ಕೊಪ್ಪಳ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ವಿದ್ಯಾರ್ಥಿಗಳ ಹಾಸ್ಟೇಲ್ ನಿರ್ಮಾಣ ಮಾಡಲಾಗಿದೆ. ಜನೆವರಿಯಿಂದ 25 ಸಾವಿರ ಪಡಿತರ ಫಲಾನುಭವಿಗಳಿಗೆ ಅನಿಲ ಭಾಗ್ಯದ ಯೋಜನೆಯ ಮೂಲಕ ಉಚಿತ ಗ್ಯಾಸ್ ಹಾಗೂ ಸಿಲಿಂಡರ್ ವಿತರಣೆ ಮಾಡಲಾಗುವುದು. ಕಾರ್ಮಿಕರಿಗಾಗಿ 2 ಲಕ್ಷ ರೂ. ವರೆಗೆ ವಿಮೆ ಹಾಗೂ ಕಾರ್ಮಿಕರ ಅಪಘಾತದಿಂದ ಸಾವನ್ನಪ್ಪಿದರೆ 5 ಲಕ್ಷ ರೂ. ಸಹಾಯಧನ ನೀಡುವ ಅಂಬೇಡ್ಕರ ಸಹಾಯ ಹಸ್ತದ ಯೋಜನೆ ಜಾರಿಯಾಗಿದೆ ಎಂದರು. ರಾಜ್ಯ ಸರಕಾರದ ಸಾಧನೆ ಕಂಡು ವಿರೋಧ ಪಕ್ಷದ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಅಭಿವೃದ್ಧಿಗೆ ಸಹಕಾರ ನೀಡುವುದನ್ನು ಬಿಟ್ಟು ಅನಗತ್ಯ ವಿಚಾರಗಳಲ್ಲಿ ವಿವಾದ ಸೃಷ್ಟಿಸುತ್ತಾ ಜನರಲ್ಲಿ ತಪ್ಪು ಭಾವನೆ ಮೂಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಎಚ್.ಎಲ್ .ಹಿರೇಗೌಡ್ರ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ತಾಪಂ ಸದಸ್ಯ ನಿಂಗಪ್ಪ ಯತ್ನಟ್ಟಿ, ಮುಖಂಡರಾದ ಶಂಕರಗೌಡ್ರ ಹಿರೇಗೌಡ್ರ, ಕೃಷ್ಣಾ ಗಲಬಿ, ಬಸವರೆಡ್ಡಿ ಕರೆಡ್ಡಿ, ಮುದೇಗೌಡ್ರ ಬೇಳೂರು, ರಾಮನಗೌಡ್ರ, ಯಲ್ಲನಗೌಡ್ರ ಅಂದಪ್ಪ ನಾಯಕ, ನಾಗರಾಜ ಹುರಕಡ್ಲಿ, ಚಿನ್ನಪ್ಪ ಅಂಗಡಿ, ಕೊಟ್ರಯ್ಯ ಹಿರೇಮಠ, ನಂದೀಶಗೌಡ, ರಾಜಪ್ಪ ಗುಡ್ಲಾನೂರ, ಉಮಾ ಜನಾದ್ರಿ, ವಕ್ತಾರ ಅಕºರ ಪಾಷಾ
ಪಲ್ಟನ ಉಪಸ್ಥಿತರಿದ್ದರು.
Related Articles
ರಾಘವೇಂದ್ರ ಹಿಟ್ನಾಳ, ಶಾಸಕ.
Advertisement