Advertisement

ಸ್ವದೇಶಗಳಿಗೆ ತೆರಳಿದ 3 ಸಾವಿರ ವಿದೇಶಿಗರು

04:35 PM Apr 30, 2020 | Team Udayavani |

ದೇವನಹಳ್ಳಿ: ಲಾಕ್‌ಡೌನ್‌ನಿಂದಾಗಿ ಭಾರತದಲ್ಲೇ ಸಿಲುಕಿಕೊಂಡಿದ್ದ 17 ದೇಶಗಳ 3000 ಸಾವಿರ ವಿದೇಶಿ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ 22
ವಿಮಾನಗಳ ಮೂಲಕ ಸ್ವದೇಶಕ್ಕೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಮೂರು ದಿನಗಳಲ್ಲಿ ಮೂರು ವಿಮಾನಗಳ ಹಾರಾಟ ಕಾರ್ಯಾಚರಣೆ ನಡೆಸಿದ್ದು ಜಪಾನ್‌ ಏರ್‌ ಲೈನ್ಸ್‌(ಜೆಎಎಲ್‌) ಟೋಕಿಯೋಗೆ ಹಾರಾಟ ನಡೆಸಿ, ಅತಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಬಳಿಕ ದಕ್ಷಿಣ ಕೊರಿಯಾದ ಇಂಚೆನ್‌ಗೆ ಕೊರಿಯನ್‌ ಏರ್‌ ಸಂಸ್ಥೆ ಹಾರಾಟ ನಡೆಸಿತು. ಇವುಗಳೊಂದಿಗೆ ಅಜರ್‌ಬೈಜಾನ್‌, ಬಾಗ್ಧಾದ್‌, ಖೈರೊ, ಕೊಲಂಬೊ, ದೋಹಾ, ಫ್ರಾಂಕ್‌ಫ‌ರ್ಟ್‌, ಲಂಡನ್‌, ಮಾಲೆ, ಮಸ್ಕಾಟ್‌, ಪ್ಯಾರಿಸ್‌, ಪಾರೊ(ಭೂತಾನ್‌), ರಿಯಾದ್‌, ರೋಮ್‌, ಸ್ಟಾಕ್‌ಹೋಮ್‌ ಮತ್ತು ಟಿಬಿಲಿಸಿ(ಜಾರ್ಜಿಯಾ) ಮುಂತಾದ ಸ್ಥಳಗಳಿಗೆ ಹಾರಾಟ ನಡೆಸಲಾಯಿತು.

Advertisement

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ತಮ್ಮ ದೇಶಕ್ಕೆ ಒಯ್ಯಲು ಮೊದಲ ಹಾರಾಟ ಫ್ರಾಂಕ್‌ಫ‌ರ್ಟ್‌ಗೆ ನಡೆಸಲಾಗಿದೆ. ಏರ್‌ ಇಂಡಿಯಾ ಮಾರ್ಚ್‌ 31, 2020ರಂದು ವಿಮಾನ ಹಾರಾಟದ ಕಾರ್ಯಾಚರಣೆ ನಡೆಸಿತ್ತು. ಈ ಮೇಲೆ ಹೇಳಿದ ಸ್ಥಳಗಳ ಪೈಕಿ 8 ನೂತನ ನಗರಗಳಿಗೆ ವಿಮಾನ ಹಾರಾಟಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ಸ್ಥಳಗಳಲ್ಲಿ, ಬಾಕೂ(ಅಜರ್‌ಬೈಜಾನ್‌), ಬಾಗ್ಧಾದ್‌, ಖೈರೋ, ಇಂಚಿಯಾನ್‌, ಪಾರೊ(ಭೂತಾನ್‌), ರೋಮ್‌, ಸ್ಟಾಕ್‌ ಹೋಮ್‌ ಮತ್ತು ಟಿಬಿಲಿಸಿ(ಜಾರ್ಜಿಯಾ) ಸೇರಿವೆ.

ವಿಮಾನ ನಿಲ್ದಾಣಗಳ ಸಮನ್ವಯ ಕಾರ್ಯ ಎರಡೂ ದೇಶಗಳ ಸರ್ಕಾರದ ಮಟ್ಟದಲ್ಲಿ ನಡೆದಿದ್ದು, ಬೆಂಗಳೂರು ಮತ್ತು ದಕ್ಷಿಣ ಭಾರತದಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರು, ಸ್ವಸ್ಥಳಗಳಿಗೆ ತೆರಳಲು ನೆರವು ನೀಡಲಾಯಿತು. ಪ್ರತಿ ವಿಮಾನ ಹಾರಾಟದ ಸಿದ್ಧತೆಗೆ ಟರ್ಮಿನಲ್‌ ಮತ್ತು ಇತರೆ ಪ್ರಯಾಣಿಕರ ಸ್ಪರ್ಶ ಹೊಂದಿರುವ ಸ್ಥಳ ಸ್ವಚ್ಛಗೊಳಿಸಿ, ಸೋಂಕು ನಿವಾರಕ ಮತ್ತು ಕ್ರಿಮಿನಾಶಕ ಹೊಗೆ ಹಾಕಲಾಯಿತು.

ಬಿಐಎಎಲ್‌ ಸಿಬ್ಬಂದಿ ಬೆಂಬಲದೊಂದಿಗೆ ಟರ್ಮಿನಲ್‌ನಲ್ಲಿ ಸಿಐಎಸ್‌ಎಫ್, ವಲಸೆ ಮತ್ತು ವಿಮಾನಯಾನ ಸಂಸ್ಥೆ ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದರೊಂದಿಗೆ ಪ್ರಯಾಣಿಕರು ಸಾಮಾಜಿಕ ಅಂತರ ಖಾತ್ರಿ ಮಾಡಿಕೊಳ್ಳಲಾಯಿತು. ಜೊತೆಗೆ ಅವರಿಗೆ ಹ್ಯಾಂಡ್‌ ಸ್ಯಾನಿಟೈಸರ್‌ಗಳು ಮತ್ತು ಮಾಸ್ಕ್ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next