Advertisement

ಸೋಂಕಿಗೆ ಅಮೆರಿಕದಲ್ಲಿ ಒಂದೇ ದಿನ 3 ಸಾವಿರ ಮಂದಿ ಸಾವು

12:41 AM Dec 12, 2020 | mahesh |

ಡಲ್ಲಾಸ್‌: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ ಒಂದೇ ದಿನ 3,071 ಮಂದಿ ಅಸುನೀಡಿದ್ದಾರೆ. ಜತೆಗೆ 2, 20, 481 ಹೊಸ ಕೇಸುಗಳೂ ದೃಢಪಟ್ಟಿವೆ ಎಪ್ರಿಲ್‌ ಬಳಿಕ ಇದು ಅತ್ಯಂತ ಹೆಚ್ಚಿನ ಸಾವಿನ ಸಂಖ್ಯೆ ಯಾಗಿದೆ. ಶುಕ್ರವಾರದ ವರೆಗೆ ದೇಶದಲ್ಲಿ 3 ಲಕ್ಷ ಮಂದಿ ಅಸುನೀಗಿ, 1,60, 61,312 ಕೋಟಿ ಮಂದಿಗೆ ಸೋಂಕು ದೃಢಪಟ್ಟಿದೆ. 1.6 ಲಕ್ಷ ಮಂದಿ ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಲಾಕ್‌ಡೌನ್‌ ಮುಕ್ತಾ ಯವಾದ ಬಳಿಕ ಬುಧವಾರದ ವರೆಗೆ 30 ಸಾವಿರ ಹೊಸ ಪ್ರಕರಣಗಳು ದೃಢಪಟ್ಟಿವೆ. ಎರಡು ವಾರಗಳ ಅವಧಿಯಲ್ಲಿ ಅಮೆರಿಕದಲ್ಲಿ ಕೊರೊನಾದಿಂದಾಗಿ 2 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

Advertisement

ಫೈಜರ್‌ ಬಳಕೆಗೆ ಒಪ್ಪಿಗೆ: ಅಮೆರಿಕದ ಕೊರೊನಾ ನಿಯಂತ್ರಣಕ್ಕಾಗಿರುವ ವಿಶೇಷ ಸಮಿತಿ ಫೈಜರ್‌- ಬಯಾನ್‌ಟೆಕ್‌ ಜತೆಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮೋದನೆ ನೀಡಿದೆ. ಪೂರ್ಣ ಪ್ರಮಾಣದ ಬಳಕೆಗೆ ಅನುಮತಿ ಪಡೆಯಲು ಫೈಜರ್‌ ಆಹಾರ ಮತ್ತು ಔಷಧ ಇಲಾಖೆಗೆ ಮತ್ತೂಮ್ಮೆ ಮನವಿ ಸಲ್ಲಿಸಬೇಕಾಗಿದೆ.

ಜಂಟಿ ಪ್ರಯೋಗ?: ಆಕ್ಸ್‌ಫ‌ರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಸಂಶೋಧಿಸಿದ ಲಸಿಕೆ ಮತ್ತು ರಷ್ಯಾ ಸರಕಾರದ ಸ್ಪುಟ್ನಿಕ್‌-5ನ್ನು ಜಂಟಿಯಾಗಿ ಪ್ರಯೋಗಕ್ಕೆ ಒಳಪಡಿಸಲು ನಿರ್ಧರಿಸಿವೆ. ವರ್ಷಾಂತ್ಯದಲ್ಲಿ ಅದು ಶುರುವಾಗಲಿದ್ದು, ಅದು ಯಶಸ್ವಿಯಾದರೆ ಎರಡೂ ಸಂಸ್ಥೆಗಳು ಜಂಟಿಯಾಗಿ ಲಸಿಕೆ ಉತ್ಪಾದಿಸಲೂ ನಿರ್ಧರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next