Advertisement
ನಗರ ಸೇರಿ ತಾಲೂಕಿನಲ್ಲಿ ಮಧ್ಯಾಹ್ನ ಸೂರ್ಯ ನೆತ್ತಿಗೇರಿದರೆ ಸಾಕು ಬಿಸಿಲಿನ ಜಳ ಅನುಭವವಾಗುತ್ತದೆ. 38ರಿಂದ 41 ಡಿಗ್ರಿ ಸೆಲ್ಸಿಯಸ್ ತನಕ ಉಷ್ಣಾಂಶ ದಾಖಲಾಗುತ್ತಿದೆ. ನಗರದ ನಗರಸಭೆ ಕಚೇರಿ ಎದುರುಗಡೆ ಮಣ್ಣಿನ ಮಡಕೆಗಳನ್ನು ಕುಂಬಾರರು ಇಟ್ಟು ಮಾರಾಟದಲ್ಲಿ ತೊಡಗಿದ್ದಾರೆ. ಮನೆಯಲ್ಲಿ ಎಷ್ಟೇ ನೀರು ಸಂಗ್ರಹಿಸಿದರೂ ಬಿಸಿಲಿನ ತಾಪಕ್ಕೆ ಛಾವಣಿ ಕಾಯ್ದು ನೀರು ಬೆಚ್ಚಗಾಗಿ ಕುಡಿಯಲು ಸಂಕಟವೆನಿಸುತ್ತಿದೆ. ಆದರೆ, ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತಣ್ಣಗೆ ಉಳಿಯುವುದರಿಂದ ಈ ನೀರು ಕುಡಿದರೆ ದೇಹಕ್ಕೆ ಹಿತಕರ ಅನುಭವ ಮೂಡುವುದರಿಂದ ಮಣ್ಣಿನ ಮಡಿಕೆಗೆ ಎಲ್ಲಿಲ್ಲಿದ ಬೇಡಿಕೆ ಬಂದಿದೆ.
Related Articles
Advertisement
ಬೇಸಿಗೆಯಲ್ಲಷ್ಟೇ ಬೇಡಿಕೆ:
ಮಣ್ಣಿನ ಮಡಿಕೆಗೆ ಬೇಸಿಗೆಯಲ್ಲಿ ಮಾತ್ರ ಬೇಡಿಕೆಯಿದೆ. ಮಳೆ ಹಾಗೂ ಚಳಿಗಾಲದಲ್ಲಿ ಯಾರು ಕೇಳುವುದಿಲ್ಲ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಅತ್ಯಧುನಿಕ ಮಾದರಿಯ ನಾನಾ ರೀತಿಯ ವಸ್ತುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಪುರಾತನ ಕಾಲದಿಂದಲೂ ಬಂದಿರುವ ಮಣ್ಣಿನ ವಸ್ತುಗಳಿಗೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಕುಂಬಾರರು.
ಯಾವ ಮಡಿಕೆಗೆ ಎಷ್ಟುಬೆಲೆ?:
ಒಂದು ಕೊಡಪಾನ ನೀರಿನ ಸಾಮರ್ಥ್ಯದಲ್ಲಿ ಮಡಿಕೆಗೆ 300 ರೂ., 3 ಕೊಡಪಾನ ನೀರು ಹಿಡಿಯುವ ನಲ್ಲಿ ಹರವಿಗೆ 450 ರೂ., ಹರವಿಗೆ 150ರಿಂದ 400 ರೂ., ಸಣ್ಣ ಮಡಿಕೆಗೆ 150 ರಿಂದ 250 ರೂ. ಮಾರಾಟ ಮಾಡಲಾಗುತ್ತದೆ. ಕಳೆದ 2020ರಲ್ಲಿ ಕೋವಿಡ್ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ಕುಂಬಾರರು ಮಡಕೆ ತಯಾರಿಸಿದ್ದರೂ ಮಾರಾಟ ಮಾಡಲು ಆಗಿರಲಿಲ್ಲ. ಇದರಿಂದ ಹಾಕಿದ ಬಂಡವಾಳವೂ ಬಾರದೆ ಸಂಕಷ್ಟದಲ್ಲಿ ದಿನ ದೂಡಿದ್ದರು. ಜಾಗ ಬದಲಿಸಿದೆ ಗ್ರಾಹಕರು ಬರುವುದಿಲ್ಲ. ಹೀಗಾಗಿ ಒಂದೇ ಕಡೆ ಇರುತ್ತೇವೆ ಎಂದು ಕುಂಬಾರು ಹೇಳುತ್ತಾರೆ.