Advertisement
ಸೋಮವಾರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಮಳೆ ಕೊರತೆ ಇತ್ತು. ಜುಲೈ ತಿಂಗಳ 20 ದಿನಗಳಲ್ಲಿ ಎರಡು ತಿಂಗಳು ಆಗಬೇಕಾದ ಮಳೆ ಒಮ್ಮೆಗೇ ಆಗಿದೆ. ಇದರ ಪರಿಣಾಮ ಅನೇಕ ಅನಾಹುತಗಳು ಸಂಭವಿಸಿವೆ ಎಂದರು.
ಗುಡ್ಡ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ವರ್ಷವೇ ಜಿಯಲಾಜಿಕಲ್ ಸರ್ವೇ ಆಫ್ ಇಂಡಿಯಾದಿಂದ ಸರ್ವೇ ನಡೆಸಿ ವರದಿ ನೀಡಿದ್ದು, ಮಲೆನಾಡು ಜಿಲ್ಲೆಗಳ ಜಿಲ್ಲಾ ಧಿಕಾರಿಗಳಿಗೆ ಕಳುಹಿಸಲಾಗಿದೆ. ಸಂಭವನೀಯ ಗುಡ್ಡ ಕುಸಿಯುವ ಜನವಸತಿ ಪ್ರದೇಶಕ್ಕೆ ತೊಂದರೆಯಾಗುವ ಪ್ರದೇಶವನ್ನು ಗುರುತಿಸಿ ವರದಿ ನೀಡುವಂತೆ ಸೂಚಿಸಿದ್ದು, ವರದಿ ನೀಡಿದ ಮೇಲೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಸಿಬಂದಿ ಭರ್ತಿಗೆ ಕ್ರಮ
ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. 20 ವಿವಿಧ ಹಂತದ ತಹಶೀಲ್ದಾರ್ ಹುದ್ದೆಗಳಿಗೆ ಪೋಸ್ಟಿಂಗ್ ನೀಡಲು ಸಿದ್ಧತೆ ನಡೆಯುತ್ತಿದೆ. ಒಂದು ಸಾವಿರ ಗ್ರಾಮ ಲೆಕ್ಕಾ ಧಿಕಾರಿಗಳು, 750 ಸರ್ವೇಯರ್ ಹಾಗೂ 34 ಎಡಿಎಲ್‌ಆರ್ ಹುದ್ದೆಗಳ ಭರ್ತಿಗೆ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.