Advertisement

ಹೈದರಾಬಾದ್‌ನ ಕಿಂಗ್‌ ಕೋಠಿ ಕಟ್ಟಡದ ಅವ್ಯವಹಾರ ; ನಕಲಿ ದಾಖಲೆ ಸೃಷ್ಟಿಸಿ ಮಾರಾಟ

09:50 AM Nov 13, 2019 | Team Udayavani |

ಮುಂಬಯಿ: ಹೈದರಾಬಾದ್‌ನ ನವಾಬರ ಅರಮನೆಯ ಆವರಣದಲ್ಲಿರುವ ‘ಕಿಂಗ್‌ ಕೋಠಿ’ ಎಂಬ ಪಾರಂಪರಿಕ ಕಟ್ಟಡ ವನ್ನು, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಖಾಸಗಿ ಕಂಪೆನಿಯೊಂದಕ್ಕೆ 300 ಕೋಟಿ ರೂ.ಗಳಿಗೆ ಮಾರಿದ್ದ ಹೈದರಾಬಾದ್‌ ನಿವಾಸಿ ಸುಂದರಂ ಕೋರ್ಲುಕುಡ್ರೊ ರವೀಂದ್ರನ್‌ (64) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಾದ ಪಿ. ಸುರೇಶ್‌ ಕುಮಾರ್‌, ಮೊಹಮ್ಮದ್‌ ಉಸ್ಮಾನ್‌, ಮುಖೇಶ್‌ ಗುಪ್ತಾಗಾಗಿ ಹುಡುಕಾಟ ಮುಂದುವರಿದಿದೆ.

Advertisement

ಏನಿದು ಪ್ರಕರಣ?: ಹೈದರಾಬಾದ್‌ ಅರಮನೆಯ ಬಳಿಯಿರುವ 100 ವರ್ಷಗಳಷ್ಟು ಹಳೆಯ 28,106 ಚದರ ಯಾರ್ಡ್‌ಗಳ ಕಟ್ಟಡವನ್ನು, ‘ಮುಂಬಯಿನ ನಿಹಾರಿಕಾ ಇನ್‌ಫ್ರಾಸ್ಟಕ್ಚರ್ಸ್‌’ ಎಂಬ ಕಂಪೆನಿ, 3 ವರ್ಷಗಳ ಹಿಂದೆ ಕೊಂಡಿತ್ತು. ಆದರೆ, ಇದೇ ಜನವರಿಯಲ್ಲಿ ಕಾಶ್ಮೀರ ಮೂಲದ ಕಂಪೆನಿಯೊಂದಕ್ಕೆ ಈ ಕಟ್ಟಡ ಪರಭಾರೆ ಮಾಡಲಾಗಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣದ ತನಿಖೆಯಲ್ಲಿ, ನಿಹಾರಿಕಾ ಕಂಪೆನಿಯ ಇಬ್ಬರು ಮಾಜಿ ಉದ್ಯೋಗಿಗಳು, ಕಂಪೆನಿಯ ಸೇವೆಯಲ್ಲಿದ್ದಾಗ, ಪಾರಂಪರಿಕ ಕಟ್ಟಡದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಂಪನಿಯ ಪರವಾಗಿ ಮಾರಾಟ ಮಾಡಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಆರೋ ಪಿಗಳ ವಿರುದ್ಧ ಲುಕ್‌ಔಟ್‌ ನೋಟಿಸ್‌ ನೀಡಲಾಗಿದ್ದರಿಂದ, ನ. 10ರಂದು ಭಾರತದಿಂದ ಸಿಂಗಾಪುರಕ್ಕೆ ಓಡಿಹೋಗುವ ಯತ್ನದಲ್ಲಿದ್ದ ರವೀಂದ್ರನ್‌ ಸಿಕ್ಕಿಬಿದ್ದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next