Advertisement

ಉದ್ಯಮಕ್ಕೆ 300 ಎಕರೆ ಭೂಮಿ ಮೀಸಲು

04:36 PM Feb 04, 2023 | Team Udayavani |

ಹೊಳೆನರಸೀಪುರ: ತಾಲೂಕಿನ ಗಡಿಭಾಗ ಮತ್ತು ಅರಕಲಗೂಡು ಗಡಿ ಭಾಗದಲ್ಲಿ ಉದ್ಯಮವೊಂದನ್ನು ಆರಂಭಿಸುವ ಸಲುವಾಗಿ 300 ಎಕರೆ ಭೂಮಿಯನ್ನುಮೀಸಲಾಗಿಡಲಾಗಿದ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ನುಡಿದರು.

Advertisement

ತಾಲೂಕಿನ ಗಂಗೂ ರು ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ 66/11 ಕೆವಿ ವಿದ್ಯುತ್‌ ಉಪ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹುದಿನಗಳಿಂದ ಈ ಭಾಗದಲ್ಲಿ ಉದ್ಯಮವೊಂದನ್ನು ಸ್ಥಾಪಿಸಬೇಕೆಂಬ ತಮ್ಮ ಹಂಬಲಕ್ಕೆ ಇದೀಗ ಕಾಲಕೂಡಿ ಬಂದಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ ಎಂದರು.

2007ರ ಕಾಮಗಾರಿ: ಪ್ರಸ್ತುತ ಈ ವಿದ್ಯುತ್‌ ಪ್ರಸರಣ ಕಾಮಗಾರಿಗೆ ಕಳೆದ 2007ರಲ್ಲಿ ಅಂದು ತಾವು ಸಚಿವರಾಗಿದ್ದ ಅವಧಿಯಲ್ಲಿ ಕ್ರಿಯಾಯೋಜನೆತಯಾರಿಸಿ ಸುಮಾರು 3.86 ಕೋಟಿಯಲ್ಲಿ ಯೋಜನೆ ತಯಾರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.ಕಾರಣಾಂತರಗಳಿಂದ ಕಾಮ ಗಾರಿ ನಿಧಾನಗತಿಯಲ್ಲಿ ಸಾಗಿ ಇದೀಗ ಪೂರ್ಣಗೊಂಡಿದ್ದು ಶುಕ್ರವಾರ ಚಾಲನೆ ನೀಡಲಾಗುತ್ತಿದೆ ಎಂದರು.

ಉತ್ತಮ ಗುಣಮಟ್ಟದ ವಿದ್ಯುತ್‌ ಪ್ರಸರಣ: ಈ ವಿದ್ಯುತ್‌ ಕೇಂದ್ರ ಆರಂಭದಿಂದ ಗಂಗೂರುಸುತ್ತಮುತ್ತಲ ಗ್ರಾಮಗಳಾದ ಕಳ್ಳಿಕೊಪ್ಪಲು, ದೊಡ್ಡಬ್ಯಾಗತವಳ್ಳಿ ಗಳಿಗೆ ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಲು ಸಹಕಾರಿ ಆಗಲಿದೆ. ಭವಿಷ್ಯದ ಹೊರೆಯನ್ನು ನಿಭಾಯಿಸಲು ಸಹಕಾರಿ ಆಗಲಿದೆ. ವೋಲ್ಟೇಜ್‌ನಲ್ಲಿ ಆಗುವ ಏರುಪೇರನ್ನು ಸರಿಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

Advertisement

ನಾಲ್ಕು ಉಪಕೇಂದ್ರಗಳು ಪ್ರಗತಿಯಲ್ಲಿ: ಇದೇ ರೀತಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ನಾಲ್ಕು ಕಡೆ ಹೆರಗು 9.75 ಕೋಟಿ, ಸೋಮನಹಳ್ಳಿ 6.06 ಕೋಟಿರೂ.ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಉಳಿದಂತೆ ತಾಲೂಕಿನ ತಟ್ಟೇಕೆರೆ 7.06 ಕೋಟಿವೆಚ್ಚದಲ್ಲಿ ವಿದ್ಯುತ್‌ ಮಾರ್ಗದ ಕಾಮಗಾರಿಗೆ ಟೆಂಡರ್‌ಕರೆಯಲಾಗುತ್ತಿದೆ. ಹಾಗೂ ಪಡುವಲಹಿಪ್ಪೆ ವಿದ್ಯುತ್‌ ಉಪಕೇಂದ್ರ ನಿರ್ಮಿ ಸಲು ಸರ್ಕಾರಿ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.

ನಷ್ಟದ ಹಂಚಿನಲ್ಲಿ ವಿದ್ಯುತ್‌ ಇಲಾಖೆ: ತಾವು ಸಚಿವ ಪದವಿಯಿಂದ ಹೊರ ಬಂದ ವೇಳೆ ಬೆಂಗಳೂರು ಬೆಸ್ಕಂನಲ್ಲಿ ಐದು ನೂರು ಕೋಟಿ ರೂ. ಹಣವನ್ನುಠೇವಣಿ ಇರಿಸಿ ಹೊರಬಂದೆ, ಆದರೆ ಅದರ ನಂತರಬಂದ ಸರ್ಕಾರದ ಸಚಿವರುಗಳ ಕಾರ್ಯವೈಖರಿಯಿಂದ ಇಂದು ರಾಜ್ಯದ ವಿದ್ಯುತ್‌ ಪ್ರಸರಣ ನಿಗಮ48 ಸಾವಿರ ಕೋಟಿ ರೂ.ನಷ್ಟದಲ್ಲಿದೆ ಎಂಬ ಮಾಹಿತಿ ಸರ್ಕಾರವೇ ನೀಡಿದೆ. ತಾವು ಸಚಿವರಾಗಿದ್ದ ಅವಧಿಯಲ್ಲಿದ್ದ ಅಧಿಕಾರಿಗಳೇ ಇಂದು ಕರ್ತವ್ಯನಿರ್ವಹಿಸುತ್ತಿದ್ದಾರೆ. ಆದರೆ, ನಷ್ಟ ಮಾತ್ರ ತಗ್ಗಿಸಲು ಆಗಿಲ್ಲ ಎಂದು ರಾಜ್ಯ ಸರ್ಕಾರದ ಸಚಿವರ ಕಾರ್ಯವೈಖರಿಯನ್ನು ಟೀಕಿಸಿದರು.

ನಷ್ಟ ಎಲ್ಲಿಂದ ಭರಿಸುತ್ತೆ ?: ಪ್ರಸ್ತುತ ಬರಲಿರುವ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ಅನ್ನು ಉಚಿತ ವಾಗಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಇದರಿಂದ ವರ್ಷಕ್ಕೆ 9 ಸಾವಿರ ಕೋಟಿ ಹೊರೆ ಬೀಳಲಿದೆ. ಈಗಾಗಲೇ 48 ಸಾವಿರಕೋಟಿ ನಷ್ಟದಲ್ಲಿರುವ ನಿಗಮ ಈ 9 ಸಾವಿರ ಕೋಟಿ ಸೇರಿದರೆ ಒಟ್ಟು 57 ಸಾವಿರ ಕೋಟಿ ಅಂದಾಜು ನಷ್ಟ ವಾಗುತ್ತದೆ. ಈ ನಷ್ಟ ಭರಿಸಲು ಇರುವ ಆದಾಯದ ಮೂಲಗಳನ್ನು ಆ ಪಕ್ಷ ಬಹಿರಂಗಪಡಿಸದೇ ಬರೀ ಹುಸಿ ಭರವಸೆ ನೀಡಿದೆಎಂದು ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

ಕಾರ್ಯಕ್ರಮದಲ್ಲಿ ಅಕ್ಷಕ ಅಭಿಯಂತರ ಮಹೇಶ್‌, ಕೆ.ಗೋಕುಲ್‌, ಸಿದ್ದೇಶ್‌, ಸವಿತಾ, ಅನಿತಾ, ದೊಡ್ಡಬ್ಯಾಗತವಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್‌ , ಪಡುವಲಹಿಪ್ಪೆ ಗ್ರಾಪಂ ಅಧ್ಯಕ್ಷ ರಾಧ ಸಂಕನಹಳ್ಳಿ ಅಧ್ಯಕ್ಷೆ ಮಣಿ, ಲೋಕೊಪಯೋಗಿ ಇಲಾಖೆಯ ಹೇಮಂತ್‌,ಗುತ್ತಿಗೆದಾರ ಹರೀಶ್‌ ಇದ್ದರು. ಇದೇ ವೇಳೆಕೆಪಿಟಿಸಿಎಲ್‌ ಅಧಿಕಾರಿಗಳನ್ನು ಮಾಜಿ ಸಚಿವ ರೇವಣ್ಣ ಶಾಲು ಹೊದಿಸಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next